Friday, November 20, 2026

ಪ್ರಾಯೋಗಿಕ ಆವೃತ್ತಿ

ಮಳವಳ್ಳಿ | ಖಾಸಗಿ ವ್ಯಕ್ತಿಯಿಂದ ಸರ್ಕಾರಿ ಕಚೇರಿಯ ಕಡತ ವಿಲೇವಾರಿ !

ಮಳವಳ್ಳಿ ತಾಲ್ಲೂಕು ಕಚೇಛೇರಿಗೆ ಕೆ ಆರ್ ಎಸ್ ಪಕ್ಷದವರು ಭೇಟಿ ನೀಡಿದ ಸಂದರ್ಭದಲ್ಲಿ ಭೂಮಿ ಶಾಖೆಯಲ್ಲಿ ಖಾಸಗಿ ವ್ಯಕ್ತಿಯಿಂದ ಸರ್ಕಾರಿ ಕಚೇರಿಯ ಕಡತಗಳನ್ನು ಬರೆಸುವುದು ಕಂಡು ಬಂದಿದೆ ಎಂದು ಕೆ.ಆರ್.ಎಸ್ ಪಕ್ಷದ ಕಾರ್ಯಕರ್ತರು ಆರೋಪಿಸಿದ್ದಾರೆ.

ಮುರುಗನ್ ಎಂಬುವ ಖಾಸಗಿ ವ್ಯಕ್ತಿಯಿಂದ ಭೂಮಿ ಶಾಖೆಯಲ್ಲಿ ಸರ್ಕಾರಿ ಉದ್ಯೋಗಿ ರಂಜಿತಾ ಅವರ ಸೂಚನೆ ಮೇರೆಗೆ ಸುಮಾರು 5 ವರ್ಷಗಳಿಂದ ತಾಲ್ಲೂಕು ಕಛೇರಿಯಲ್ಲಿ ಸರ್ಕಾರದ ಕಡತಗಳನ್ನು ಬರೆಯುವ, ಪರಿಶೀಲಿಸುವ ಕೆಲಸ ಮಾಡುತ್ತಿರುವುದು ಬೆಳಕಿಗೆ ಬಂದಿದೆ ಎಂದು ಕೆ.ಆರ್.ಎಸ್ ಪಕ್ಷದ ಮುಖಂಡ ರಮೇಶ್ ಗೌಡ ದೂರಿದ್ದಾರೆ.

ಈ ಬಗ್ಗೆ ಕೆ ಆರ್ ಎಸ್ ಪಕ್ಷದ ಕಾರ್ಯಕರ್ತರು ಮೇಲಾಧಿಕಾರಿಗಳ ಅನುಮತಿ ಮತ್ತು ಆದೇಶ ಇಲ್ಲದೇ ಹೇಗೆ ಕೆಲಸ ಕೊಟ್ಟಿದ್ದಿರಾ ಎಂದು ಪ್ರಶ್ನೆ ಮಾಡಿದ್ದು, ಮಳವಳ್ಳಿ ತಹಸೀಲ್ದಾರ್ ಲೋಕೇಶ್, ಉಪತಹಸೀಲ್ದಾರ್ ಗುರು ಪ್ರಸಾದ್ ರವರ ಗಮನಕ್ಕೆ ತಂದಿದ್ದು, ಈ ಬಗ್ಗೆ ಸರಿಯಾದ ರೀತಿಯಲ್ಲಿ ತನಿಖೆ ಮಾಡಿ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮವಹಿಸುವಂತೆ ಕೆ‌ ಆರ್ ಎಸ್ ಪಕ್ಷದ ಕಾರ್ಯಕರ್ತರು ಆಗ್ರಹಿಸಿದ್ದಾರೆ.

ರಾಜ್ಯ ಕಾರ್ಯದರ್ಶಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ರಮೇಶ್ ಗೌಡ, ಮಂಡ್ಯ ಜಿಲ್ಲಾ ಉಪಾಧ್ಯಕ್ಷ ಮಲ್ಲೇಶ ಹೆಬ್ಬಕವಾಡಿ, ಕಾರ್ಯದರ್ಶಿ ನಂದೀಶ್ ಕುಮಾರ್ ಎಂ, ಯುವ ಘಟಕದ ಅಧ್ಯಕ್ಷ ಪ್ರಮೋದ್ ಎಸ್, ಮಳವಳ್ಳಿ ತಾಲ್ಲೂಕು ಅಧ್ಯಕ್ಷ ಮಾದೇಗೌಡ ಎ. ಎನ್, ಉಪಾಧ್ಯಕ್ಷರಾದ ಪರಮೇಶ ಸಿ, ಪ್ರಧಾನ ಕಾರ್ಯದರ್ಶಿ ಮಹಾದೇವಸ್ವಾಮಿ ಹೆಚ್ ಎಮ್, ಕಾರ್ಯದರ್ಶಿ ಸಿದ್ದರಾಜು, ಶಿವಮೂರ್ತಿ, ಮಹಾದೇವಸ್ವಾಮಿ, ನಂಜಪ್ಪ, ಈರಂಕೇಗೌಡ, ಮಲ್ಲಯ್ಯ, ಮದ್ದೂರು ಅಧ್ಯಕ್ಷ ಮಹದೇವ ಕೆ ಜೆ, ನಾಗಮಂಗಲ ಅಧ್ಯಕ್ಷ ಮಂಜು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ