Wednesday, July 24, 2024

ಪ್ರಾಯೋಗಿಕ ಆವೃತ್ತಿ

ಇತಿಹಾಸ ತಿರುಚಿದ್ದೇ ಬಿಜೆಪಿ ಸರ್ಕಾರದ ಸಾಧನೆ : ಮಲ್ಲಿಕಾರ್ಜುನ ಖರ್ಗೆ

ಬಿಜೆಪಿ ಧರ್ಮಗಳ ನಡುವೆ ವಿಷ ಬೀಜ ಬಿತ್ತಿ, ಜಾತಿ ಜಾತಿಗಳ ಮಧ್ಯೆ ಜಗಳ ತಂದು ದಂಗೆ ಎಬ್ಬಿಸುವ ಕೆಲಸ ಮಾಡುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದರು.

ಶಿವಮೊಗ್ಗ ಜಿಲ್ಲೆಯ ಸೊರಬದಲ್ಲಿ ನಡೆದ ಬೃಹತ್ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಿತಿ ಮೀರಿದ ಭ್ರಷ್ಟಾಚಾರ, ದುರಾಡಳಿತ, ಪಠ್ಯ ಬದಲಾವಣೆ ಹಾಗೂ ಇತಿಹಾಸ ತಿರುಚಿದ್ದೇ ಈ ಬಿಜೆಪಿ ಸರ್ಕಾರದ ಸಾಧನೆ. ಜನಪರ ಆಡಳಿತಕ್ಕಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿ’ ಎಂದು ಕರೆ ನೀಡಿದರು.

ನಮ್ಮ ಹೋರಾಟ ನ್ಯಾಯಕ್ಕಾಗಿನ ಹೋರಾಟ, ಈ ದೇಶದ ಜಾತ್ಯತೀತತೆಯ ಉಳಿವಿಗೋಸ್ಕರ ಈ ಹೋರಾಟ. ನಾವು ಯಾರಿಗೂ ಹೆದರುವವರಲ್ಲ. ಈ ದೇಶದಲ್ಲಿ ಜನ ಸುಖ ಸಂತೋಷ, ನೆಮ್ಮದಿಯಿಂದ ಕೂಡಿ ಬಾಳಬೇಕೆಂಬುದೇ ಕಾಂಗ್ರೆಸ್‌ ಪಕ್ಷದ ಪರಮ ಗುರಿ ಎಂದರು.

ಜನರ ನೋವು ಕೇಳದೆ ತನ್ನ ಸಮಸ್ಯೆಗಳನ್ನು ಹೇಳಿ ಮತ ಕೇಳುವ ನರೇಂದ್ರ ಮೋದಿ ಅವರೇ, ಪ್ರಧಾನಿ ಹುದ್ದೆ ಇರುವುದು ಜನರ ಸಂಕಷ್ಟಗಳ ಬಗ್ಗೆ ಮಾತನಾಡಲು ಹಾಗೂ ಬಗೆಹರಿಸಲು ಎಂಬುದನ್ನು ಮರೆತಿದ್ದೇಕೆ? ನಮ್ಮ ನಾಯಕರಾದ ಸಿದ್ದರಾಮಯ್ಯ, ಪರಮೇಶ್ವರ್‌ರವರ ಮೇಲೆ ನಿಮ್ಮವರಿಂದ ದೈಹಿಕವಾಗಿ ದಾಳಿಯಾಗಿದೆ, ನಾವೆಂದೂ ಅದನ್ನು ದಾಳ ಮಾಡಿಕೊಂಡಿಲ್ಲ! ಎಂದು ಪ್ರಧಾನಿ ಮೋದಿಗೆ ತಿರುಗೇಟು ನೀಡಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!