Monday, November 23, 2026

ಪ್ರಾಯೋಗಿಕ ಆವೃತ್ತಿ

‘ಮಂಡ್ಯ ಬಂದ್’ ಬಹುತೇಕ ಯಶಸ್ವಿ ; ಪ್ರಗತಿಪರ ಸಂಘಟನೆಗಳಿಂದ ಬೈಕ್ ರ್‍ಯಾಲಿ

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಅಪಮಾನ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜಿನಾಮೆಗೆ ಆಗ್ರಹಿಸಿ ಮಂಡ್ಯ ಜಿಲ್ಲಾ ಪ್ರಗತಿಪರ ಸಂಘಟನೆಗಳಾದ ದಲಿತ, ರೈತ, ಅಲ್ಪಸಂಖ್ಯಾತ, ಕಾರ್ಮಿಕ, ಹಿಂದುಳಿದ ವರ್ಗಗಳ ಮಹಾ ಒಕ್ಕೂಟ ಕರೆ ನೀಡಿದ್ದ ಮಂಡ್ಯ ಬಂದ್ ಮಂಗಳವಾರ ಬಹುತೇಕ ಯಶಸ್ವಿಯಾಯಿತು.

ಮಂಡ್ಯನಗರದ ಪೇಟೆಬೀದಿ, ವಿ.ವಿ.ರಸ್ತೆ, ಆರ್.ಪಿ ರಸ್ತೆ, ನೂರಡಿ ರಸ್ತೆ, ವಿನೋಬ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಬಹುತೇಕ ಅಂಗಡಿ ಮುಂಗಟ್ಟು ಮುಚ್ಚಿ ಬಂದ್ ಗೆ ಬೆಂಬಲ ಸೂಚಿಸಿದ್ದರು. ಅಲ್ಲಲ್ಲಿ ಕೆಲವರು ದಿನಸಿ ಅಂಗಡಿ ಮಾಲೀಕರು ಮಳಿಗೆಗಳನ್ನು ತೆಗೆದು ವ್ಯಾಪಾರ ನಡೆಸುತ್ತಿದ್ದದ್ದು ಕಂಡು ಬಂತು. ಪ್ರಗತಿಪರರು ಬೈಕ್ ರ್‍ಯಾಲಿ ನಡೆಸಿದ ರಸ್ತೆಗಳಲ್ಲಿ ವ್ಯಾಪಾರಿಗಳು ಅಂಗಡಿ ಮುಚ್ಚುತ್ತಿದ್ದದ್ದು ಕಂಡು ಬಂತು.

ಶಾಲೆ-ಕಾಲೇಜುಗಳು ಎಂದಿನಂತೆ ನಡೆದವು, ರಸ್ತೆಗಳಲ್ಲಿ ಜನ ಸಂಚಾರ ವಿರಳವಾಗಿತ್ತು. ಕೆಎಸ್ಆರ್ಟಿಸಿ ಬಸ್ಸುಗಳು ವಿರಳವಾಗಿ ಓಡಾಟ ನಡೆಸಿದ್ದು, ಸೂಪರ್ ಮಾಕೇರ್ಟ್ ಗಳು, ಮಾಲ್ ಗಳು,ಚಿತ್ರಮಂದಿರಗಳು ಬಹುತೇಕ ಬಂದ್ ಆಗಿದ್ದವು.

ಬೈಕ್ ರ್‍ಯಾಲಿ

ಪ್ರಗತಿಪರರರು ಮಂಡ್ಯನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್ ರ್‍ಯಾಲಿ ನಡೆಸಿ ಅಂಬೇಡ್ಕರ್ ಅವರಿಗೆ ಜೈಕಾರ ಹಾಕುತ್ತಾ, ಅಮಿತ್ ಶಾ ವಿರುದ್ದ ಘೋಷಣೆಗಳನ್ನು ಮೊಳಗಿಸಿದರು. ನೀಲಿ, ಕೆಂಪು ಬಾವುಟಗಳನ್ನು ಹಿಡಿದು ಬೈಕ್ ರ್‍ಯಾಲಿಯಲ್ಲಿ ಪಾಲ್ಕೊಂಡರು.

ರ್‍ಯಾಲಿಯಲ್ಲಿ ಮುಖಂಡರಾದ ಸಿ.ಕುಮಾರಿ, ಸುರೇಶ್ ಕಂಠಿ, ಎಂ.ಬಿ.ನಾಗಣ್ಣಗೌಡ, ನರಸಿಂಹಮೂರ್ತಿ, ಲಕ್ಷ್ಮಣ್ ಚೀರನಹಳ್ಳಿ, ಅಂದಾನಿ ಸೋಮನಹಳ್ಳಿ, ಗಂಗರಾಜ್ ಹನಕೆರೆ, ಹೆಚ್.ಡಿ.ಜಯರಾಂ, ಎಂ.ವಿ.ಕೃಷ್ಣ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ