Wednesday, November 18, 2026

ಪ್ರಾಯೋಗಿಕ ಆವೃತ್ತಿ

ಫೆಂಗಲ್ ಚಂಡಮಾರುತದ ಎಫೆಕ್ಟ್ ; ಮಂಡ್ಯ ಕೂಲ್ ಕೂಲ್

ಫೆಂಗಲ್ ಚಂಡಮಾರುತದ ಪರಿಣಾಮ ಮಂಡ್ಯ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಿಟ್ಟೂ ಬಿಡದೆ ಮಳೆ ಸುರಿಯುತ್ತಿದ್ದು,ಮಂಡ್ಯದಲ್ಲಿ ವಾತಾವರಣ ಕೂಲ್ ಕೂಲ್ ಆಗಿದೆ.

ಫೆಂಗಲ್ ಚಂಡಮಾರುತ ಅಬ್ಬರಕ್ಕೆ ತಮಿಳುನಾಡು ಹಾಗೂ ಪುದುಚೇರಿಯಲ್ಲಿ‌ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ.ಫೆಂಗಲ್ ಚಂಡಮಾರುತದ ಪರಿಣಾಮ ರಾಜ್ಯದ ಹಲವು ಜಿಲ್ಲೆಗಳಲ್ಲಿ‌ ಜಿಟಿ ಜಿಟಿ ಮಳೆ ಸುರಿಯುತ್ತಲೇ ಇದೆ.ಮಂಡ್ಯದಲ್ಲೂ ಮಳೆ ಸುರಿಯುತ್ತಲೇ ಇದ್ದ ಕಾರಣ ಜಿಲ್ಲಾಧಿಕಾರಿ ಡಾ.ಕುಮಾರ‌ ಅವರು ಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಿಗೆ ರಜೆ‌ ಘೋಷಣೆ ಮಾಡಿದ್ದರಿಂದ‌ ಶಾಲಾ ಕಾಲೇಜುಗಳು ‌ಕಾರ್ಯನಿರ್ವಹಿಸಲಿಲ್ಲ.

ಪದವಿ ಕಾಲೇಜುಗಳು ಕಾರ್ಯ ನಿರ್ವಹಿಸಿದ ಹಿನ್ನಲೆ ವಿದ್ಯಾರ್ಥಿಗಳು ಮಳೆಯಲ್ಲಿಯೇ ನೆನೆದುಕೊಂಡು ಸಾಗುತ್ತಿದ್ದ ದೃಶ್ಯ ಕಂಡು ಬಂತು. ಬಹುತೇಕ ಜನರು ಮನೆಗಳಲ್ಲಿಯೇ ಕಾಲ ಕಳೆದರು.ರಸ್ತೆಗಳಲ್ಲಿ ಜನರ ಓಡಾಟ ಕಡಿಮೆಯಿತ್ತು.ಮಳೆಯ‌ಎಫೆಕ್ಟ್ ನಿಂದ ಜನರು ಬಾರದ ಕಾರಣ ಹಲವು ಅಂಗಡಿ ಮಳಿಗೆಗಳ ಮಾಲೀಕರು ಅಂಗಡಿ ಬಾಗಿಲು ಮುಚ್ಚಿ ಮನೆಗೆ ತೆರಳಿದರು.

ಮಳೆಯ ಪರಿಣಾಮ ಕಲ್ಲಹಳ್ಳಿಯ‌ ಎಪಿಎಂಸಿಯಲ್ಲಿರುವ ತರಕಾರಿ ಮಾರುಕಟ್ಟೆಯಲ್ಲಿ ಬಹುತೇಕ ವ್ಯಾಪಾರಿಗಳು ಅಂಗಡಿ ತೆರೆದಿರಲಿಲ್ಲ.ವಿರಳ ಜನರಷ್ಟೇ ಕಂಡು ಬಂದರು.ಬೀದಿ ವ್ಯಾಪಾರಿಗಳು ಅಂಗಡಿ ತೆರೆಯಲು ಆಗಲೇ ಇಲ್ಲ.ಫೆಂಗಲ್ ಚಂಡಮಾರುತ ಪರಿಣಾಮ ಮಂಡ್ಯದ ವಾತಾವರಣ ಕೂಲ್ ಆಗಿತ್ತು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ