Saturday, November 21, 2026

ಪ್ರಾಯೋಗಿಕ ಆವೃತ್ತಿ

ಕರ್ತವ್ಯ ಲೋಪದ ಆರೋಪ ; ಮಂಡ್ಯ ಜಿ.ಪಂ ಎಇಇ ತಲೆದಂಡ

ಭ್ರಷ್ಟಚಾರ ಹಾಗೂ ಕರ್ತವ್ಯ ಲೋಪ ಆರೋಪ ಆರೋಪದ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾ ಪಂಚಾಯಿತಿಯ ಎಇಇ ತಲೆದಂಡವಾಗಿದೆ.

ಮಂಡ್ಯ ಜಿಪಂ ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ಉಪವಿಭಾಗದ ಎಇಇ ವೆಂಕಟೇಶ್‌ ಅವರನ್ನು ಇಲಾಖೆ ತನಿಖೆಯನ್ನು ಬಾಕಿ ಇರಿಸಿ ಅಮಾನತುಗೊಳಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಆದೇಶ ಹೊರಡಿಸಿದೆ.

2025ರ ಸೆಪ್ಟೆಂಬರ್‌ 24ರಂದು ವೆಂಕಟೇಶ್ ವಿರುದ್ಧ ಲೋಕಾಯುಕ್ತದಲ್ಲಿ ಈ ಹಿಂದೆಯೇ ಎಫ್ಐಆರ್ ದಾಖಲಾಗಿತ್ತು.. ಇವರು ಮಳವಳ್ಳಿ ಉಪವಿಭಾಗದ ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ವಿಭಾಗದಲ್ಲಿ ಎಇ ಆಗಿದ್ದಾಗ ಭ್ರಷ್ಟಾಚಾರ ಹಾಗೂ ಕರ್ತವ್ಯಲೋಪವೆಸಗಿದ ಆರೋಪ ಕೇಳಿ ಬಂದಿತ್ತು.

ಹಲಗೂರು ಗ್ರಾಪಂ ಸದಸ್ಯ ಕೆ.ಸುರೇಂದ್ರ ದೂರಿನ ಹಿನ್ನೆಲೆಯಲ್ಲಿ FIR ದಾಖಲಾಗಿತ್ತು.
ನಕಲಿ ದಾಖಲೆಗಳ ಸೃಷ್ಟಿಸಿ, ಖಾಸಗಿ ವ್ಯಕ್ತಿಗಳ ಅಕೌಂಟ್‌ಗೆ ಚೆಕ್‌ಗಳನ್ನು ನೀಡಿದ್ದು, 60 ಲಕ್ಷ ರೂ. ದುರುಪಯೋಗ, 15ನೇ ಹಣಕಾಸು ಯೋಜನೆಯಡಿ ಬಿಡುಗಡೆಯಾದ ಅನುದಾನದಲ್ಲಿ ನಿಯಮಬಾಹಿರವಾಗಿ ಅಕ್ರಮ ಬಿಲ್‌ ಪಾವತಿ ಸೇರಿದಂತೆ ಇವರು ಹಲವು ಆರೋಪ ಎದುರಿಸುತ್ತಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ