ಮಂಡ್ಯ ನಗರ ಸಭೆಯಲ್ಲಿ ಪೌರ ಕಾರ್ಮಿಕರ ನೇಮಕಾತಿಯಲ್ಲಿ ಆಕ್ರಮ ನಡೆಯುತ್ತಿದ್ದು, ಆರ್ಹ ಅಭ್ಯರ್ಥಿಗಳನ್ನು ನೇಮಕಾತಿ ಪಟ್ಟಿಯಿಂದ ಕೈಬಿಟ್ಟಿದ್ದಾರೆ, ಇದರ ಬಗೆ ಸಂಬಂಧಪಟ್ಟ ಅಧಿಕಾರಿಗಳನ್ನು ವಿಚಾರಿಸಲು ಹೋದರೆ ನಮ್ಮನ್ನು ಒಬ್ಬ ಅಧಿಕಾರಿಯಿಂದ ಮತ್ತೊಬ್ಬ ಅಧಿಕಾರಿಯ ಬಳಿ ಹೋಗಿ ಎಂದು ಸತಾಯಿಸುತ್ತಿದ್ದಾರೆ, ನಮಗೆ ದಿಕ್ಕು ಕಾಣದಂತಾಗಿದೆ, ನಮಗೆ ನ್ಯಾಯ ದೊರಕಿಸಿಕೊಡಿ ಎಂದು ಪೌರಕಾರ್ಮಿಕರು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ವಿಜಯ್ ಕುಮಾರ್, ಮಂಡ್ಯ ನಗರ ಸಭೆಯಲ್ಲಿ ದಶಕಗಳಿಗೂ ಹೆಚ್ಚು ದಿನ ಕೆಲಸ ಮಾಡಿದ ಪೌರಕಾರ್ಮಿಕರನ್ನು ನೇಮಕಾತಿಯಿಂದ ಕೈ ಬಿಡಲಾಗಿದೆ ಎಂದು ಆರೋಪಿಸಿದರು.
ಸರ್ಕಾರಿ ಅಧಿಸೂಚನೆಯನ್ನು ಉಲ್ಲಂಘಿಸಿ ನೇಮಕಾತಿ ನಡೆಯುತ್ತಿರುವುದು ಕಂಡು ಬಂದಿದ್ದು, ಆಧಿಸೂಚನೆಯಲ್ಲಿ ಪ್ರಕಟಿಸಲಾಗಿರುವ ನೇಮಕಾತಿಗೆ ಆಯ್ಕೆಯಾದ ಅಭ್ಯರ್ಥಿಗಳ ಕರಡು ಪಟ್ಟಿಯನ್ನು ಪರಿಶೀಲಿಸಲಾಗಿ, ಆರ್ಹರಿಗಿಂತ ಕಡಿಮೆ ಸೇವೆ ಸಲ್ಲಿಸಿರುವ ಆಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ್ದಾರೆ ಎಂದು ನೊಂದ ನೇರ ಪಾವತಿ/ಗುತ್ತಿಗೆ ಪೌರ ಕಾರ್ಮಿಕರು ತಿಳಿಸಿದ್ದಾರೆ.
ಉಲ್ಲೇಖ-4ರಗೆ ಸಂಬಂಧಿಸಿದಂತೆ, ಅಕ್ಷೇಪಣೆ ಪತ್ರ ನೀಡಿದ್ದರೂ ಸಹ, ಅದನ್ನು ಪರಿಶೀಲಿಸದೆ, ಮತ್ತು ಅದಕ್ಕೆ ಸಂಬಂಧಿಸಿದಂತೆ ನೀಡಿರುವಂತಹ ಅಕ್ಷೇಪಣೆ ಅರ್ಜಿಗಳಿಗೆ ಯಾವುದೇ ಲಿಖಿತ ಉತ್ತರವನ್ನು ನೀಡದೆ, ಸಿಬ್ಬಂದಿಗಳು, ಕರಡು ತಾತ್ಕಾಲಿಕ ಪಟ್ಟಿಯಲ್ಲಿ ನೇಮಕಾತಿಗೊಂಡಿರುವ ಅಭ್ಯರ್ಥಿಗಳು ಪೋಲಿಸ್ ಗೌಪ್ಯ ವರದಿ ಮತ್ತು ತಹಶೀಲ್ದಾರ್ ಕಛೇರಿಯಿಂದ ಸಿಂಧುತ್ವ ಪ್ರಮಾಣ ಪತ್ರಗಳಿಗೆ ಪರಿಚಯಿಸಿರುವುದು ಈಗಾಗಲೇ ನಮಗೆ ಕಂಡು ಬಂದಿದ್ದು, ಮಂಡ್ಯ ನಗರಸಭೆಯಲ್ಲಿ ಮೇಸ್ತ್ರಿಗಳಾಗಿ ನಿರ್ವಹಿಸಿದವರಿಗೆ ಪೌರಕಾರ್ಮಿಕರ ಹುದ್ದೆಗಳಿಗೆ ನೇಮಕಾತಿ ಮಾಡಿಕೊಂಡಿರುತ್ತಾರೆ.
ಆದರೆ ಮೇಸ್ತ್ರಿಗಳಾಗಿ ಕರ್ತವ್ಯ ನಿರ್ವಹಿಸಿದವರಿಗೆ, ಸಿ ಗ್ರೂಪ್ ಹುದ್ದೆಗಳಿಗೆ ಅನ್ವಹಿಸುತ್ತದೆ. ಆದರೆ ಈ ಮಸ್ತ್ರಿಗಳಾಗಿ ಕೆಲಸ ಮಾಡಿದ ಇವರುಗಳು ಒಂದು ದಿನವೂ ಕೂಡ ಕಸ ಬಾಚುವುದು, ದಿನನಿತ್ಯದ ನೈರ್ಮಲ್ಯ,ಸ್ವಚತೆ ಮಾಡದೆ, ಇವರ ಹಾಜರಾತಿಗಳಲ್ಲಿ ಮಾತ್ರ ಪೌರಕಾರ್ಮಿಕರೆಂದು ಗುರುತಿಸಿಕೊಂಡು ಇವರು ಮೇಸ್ತ್ರಿಗಳಾಗಿ ಕರ್ತವ್ಯ ನಿರ್ವಹಿಸಿರುತ್ತಾರೆ. ಇದು ಎಲ್ಲರಿಗೂ ತಿಳಿದ ವಿಚಾರವೇ ಆಗಿದೆ. ಆದರೆ ಈಗ ಖಾಯಂಗೊಳ್ಳುವ ಉದ್ದೇಶದಿಂದ, ಕೇವಲ ಹಾಜರಾತಿಯನ್ನು ಪರಿಗಣಿಸಿಕೊಂಡು ನೇಮಕಾತಿಯ ತಾತ್ಕಾಲಿಕ ಪಟ್ಟಿಯಲ್ಲಿ ಅಯ್ಕೆ ಮಾಡಿಕೊಂಡಿರುತ್ತಾರೆ.
ಈ ವಿಚಾರದಲ್ಲಿ ನಗರಸಭೆಯ ಪೌರಾಯುಕ್ತರು, ಮೇಸ್ತ್ರಿಗಳಾಗಿ(ಸೋಮುಸುಂದರ್, ಲಿಂಗಮಯ್ಯ, ಮಹದೇವ) ಕರ್ತವ್ಯ ನಿರ್ವಹಿಸುತ್ತಿರುವುದು ತಿಳಿದ್ದರೂ, ಇವರಿಗೆ ಸೇವ ದೃಢೀಕರಣ ಪತ್ರ ನೀಡಿರುವುದು ತುಂಬಾ ನೋವಿನ ವಿಚಾರ, ಇದರಲ್ಲೂ ಅಧಿಕಾರಿಗಳ ಕೈವಾಡವಿದೆ ಎಂಬ ಸಂಶಯವನ್ನು ವ್ಯಕ್ತಪಡಿಸಿದ್ದಾರೆ.
ಮಂಡ್ಯ ನಗರಸಭೆಯಲ್ಲಿ 20 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದ, ಇಬ್ಬರು ಪೌರ ಕಾರ್ಮಿಕರಿಗೆ ನಿರಂತರವಾಗಿ ಕರ್ತವ್ಯ ನಿರ್ವಹಿಸಲು ಆಗದಿರುವಂತಹ ಪರಿಸ್ಥಿಯಾಗಿದೆ. ಒಬ್ಬರಿಗೆ ಕಸ ಬಾಚುವ ಸಮಯದಲ್ಲಿ ಸಿರಿಂಜ್ ಚುಚ್ಚಿ ಒಬ್ಬರಿಗೆ 2 ಕಾಲಗಳನ್ನು ಸ್ವಾಧೀನಗೊಂಡಿರುತ್ತದೆ. ಇನ್ನೊಬ್ಬರಿಗೆ ಬಲಗಾಲಿನ ಪಾದವನ್ನು ತೆರವುಗೊಳಿಸಿರುತ್ತಾರೆ. ಇಂತಹವುಗಳನ್ನು ಅಂಗವಿಕಲರೆಂದು ಪರಿಗಣಿಸದೆ, ನಿಯಾನುಮಾನುಸಾರ ಉಲ್ಲಂಘಿಸಿ ಅಂಗವಿಕಲರಲ್ಲದ ಮೇಸ್ತ್ರಿಯಾದ ಲಿಂಗಮಯ್ಯರವರಿಗೆ ನೀಡಿರುತ್ತಾರೆ. ಇದರಲ್ಲೂ ಕೂಡ ಅರ್ಹ ಪೌರಕಾರ್ಮಿಕರಿಗೆ ಅನ್ಯಾಯವಾಗಿದೆ ಎಂದು ತಿಳಿಸಿದರು.
ಮಂಡ್ಯ ನಗರಸಭೆಯಲ್ಲಿ ಅಧಿಕ ಸೇವೆ ಸಲ್ಲಿಸಿರುವ ಮತ್ತು ಅಧಿಕ ವಿದ್ಯಾಭ್ಯಾಸ ಮಾಡಿರುವ ಪೌರ ಕಾರ್ಮಿಕರಿದ್ದು ಮತ್ತು ಕನ್ನಡ ಮಾಧ್ಯಮದವರಾಗಿದ್ದು, ಗ್ರಾಮೀಣ ಅಭ್ಯರ್ಥಿಯೆಂದು ಪರಿಗಣಿಸದೆ, ಏಕಾಏಕಿ ಈಗ ಕೇವಲ 5 ವರ್ಷದ ಒಳಗೆ ಸೇವೆ ಸಲ್ಲಿಸಿರುವ ಮೇಸ್ತ್ರಿ ಮಹದೇವ ಅವರನ್ನು ಪರಿಶೀಲನೆ ಮಾಡದೆ ನೇಮಕ ಮಾಡಿಕೊಂಡಿರುತ್ತಾರೆ.
ಮೇಲ್ಕಂಡ ಎಲ್ಲಾ ಸಮಸ್ಯೆಗಳಿಗೂ, ಸಂಬಂಧಪಟ್ಟ ಅಧಿಕಾರಿಗಳು ನಿಯಾಮಾನುಸಾರ ದಾಖಲಾತಿಗಳನ್ನು ಪರಿಶೀಲಿಸದೆ, ಸೇವೆಯನ್ನು ಪರಿಗಣಿಸದೇ, ನಮ್ಮಲ್ಲೆರ ಹಕ್ಕುಗಳನ್ನು ತಿರಸ್ಕರಿಸಿ ಉಲ್ಲಂಘಿಸಿರುತ್ತಾರೆ. ನಮಗೆ ಈ ಸಂಬಂಧ ನ್ಯಾಯ ಸಿಗದಿದ್ದ ಪಕ್ಷದಲ್ಲಿ ವಿಧಾನಸೌಧದ ಮುಂದೆ ಪ್ರತಿಭಟಿಸಿ, ಆತ್ಮಹತ್ಯೆ ಮಾಡಿಕೊಳ್ಳದೆ ನಮಗೆ ಬೇರೆ ದಾರಿಯಿಲ್ಲ, ಸಂಬಂಧಪಟ್ಟ ಅಧಿಕಾರಿಗಳ ವಿರುದ್ದ ಈ ಕೂಡಲೇ ಕ್ರಮ ತೆಗೆದುಕೊಳ್ಳಬೇಕು, ಇದರ ಬಗೆಗೆ ತನಿಖೆಯಾಗಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಪತ್ತಿಕಾಗೋಷ್ಠಿಯಲ್ಲಿ ಮುರುಗೇಶ್, ಮಹದೇವ, ಎಂ.ಗಣೇಶ್, ಮಧುಸೂದನ್, ಆರ್.ಕುಮಾರ್, ಸುಬ್ಮ್ರಮಣ್ಯ, ಸುಬ್ಬಲಕ್ಷ್ಮಿ ಉಪಸ್ಥಿರರಿದ್ದರು.




