ಕೇಂದ್ರ ಸರ್ಕಾರ ಪಿಎಫ್ಐ ಸಂಘಟನೆ ನಿಷೇಧಿಸಿ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಪಿಎಫ್ಐ ಕಚೇರಿಗೆ ಬೀಗಮುದ್ರೆ ಹಾಕಲಾಗುತ್ತಿದೆ.
ಅದರಂತೆ ಮಂಡ್ಯ ನಗರದ ಗುತ್ತಲು ಬಡಾವಣೆಯಲ್ಲಿರುವ ಪಿಎಫ್ಐ ಕಚೇರಿಗೂ ಇಂದು ತಹಶೀಲ್ದಾರ್ ಮಹಮದ್ ಕುಂಇ ನೇತೃತ್ವದಲ್ಲಿ ಬೀಗಮುದ್ರೆ ಹಾಕಲಾಗಿದೆ.
ಇಂದು ಬೆಳಿಗ್ಗೆ ಪಿಎಫ್ಐ ಕಚೇರಿಗೆ ತೆರಳಿದ ತಹಶೀಲ್ದಾರ್ ಮಹಮದ್ ಕುಂಇ,ಪೂರ್ವ ಠಾಣೆಯ ಎಸ್ಐ ರಮೇಶ್ ಕರಕಿಕಟ್ಟೆ,ಕಂದಾಯ ಅಧಿಕಾರಿಗಳಾದ ರವಿಚಂದ್ರ,ರೂಪಾ, ತೇಜ್ ರಾಜ್ ಅವರ ತಂಡ ಅಲ್ಲಿದ್ದ ವಸ್ತುಗಳ ಪಟ್ಟಿ ಮಾಡಿತು.
ಬಾವುಟಗಳು,ಬಕೆಟ್, ಚೊಂಬು,ಲೋಟ,ಹಾಸಿಗೆ ಮತ್ತಿತರರ ವಸ್ತುಗಳ ಪಟ್ಟಿ ಮಾಡಿ, ಬಳಿಕ ತಹಶೀಲ್ದಾರ್ ಸಮ್ಮುಖದಲ್ಲಿ ಕಚೇರಿಗೆ ಬೀಗ ಜಡಿದು ಸೀಲ್ ಮಾಡಲಾಯಿತು.




