Saturday, November 21, 2026

ಪ್ರಾಯೋಗಿಕ ಆವೃತ್ತಿ

ಪರಿಶಿಷ್ಟ ಜಾತಿ ಸಮಗ್ರ ಸಮೀಕ್ಷೆ ಕಾರ್ಯ ಚುರುಕುಗೊಳಿಸಿ: ರಾಮಚಂದ್ರನ್

ನ್ಯಾಯಮೂರ್ತಿ ಹೆಚ್. ಎನ್.ನಾಗಮೋಹನ್ ದಾಸ್ ಏಕಸದಸ್ಯ ವಿಚಾರಣಾ ಆಯೋಗದ ಪರಿಶಿಷ್ಟ ಜಾತಿ ಸಮಗ್ರ ಸಮೀಕ್ಷೆಯ ಕಾರ್ಯವನ್ನು ಜಿಲ್ಲೆಯಲ್ಲಿ ಚುರುಕುಗೊಳಿಸಿ ನಿಗದಿಪಡಿಸಿರುವ ಗುರಿ ಸಾಧಿಸಿ ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಪ್ರಭಾರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಮಚಂದ್ರನ್ ಹೇಳಿದರು.

ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ್ ದಾಸ್ ಏಕಸದಸ್ಯ ವಿಚಾರಣಾ ಆಯೋಗದ ಪರಿಶಿಷ್ಟ ಜಾತಿ ಒಳಮೀಸಲಾತಿ ದತ್ತಾಂಶ ಸಂಗ್ರಹಿಸುವ ಸಮಗ್ರ ಸಮೀಕ್ಷೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಮೀಕ್ಷೆಯು ನ್ಯಾಯ ಸಮ್ಮತ್ತವಾಗಿ ನಡಸಬೇಕು. ಗಣತಿದಾರರು ಸಾರ್ವಜನಿಕರೊಂದಿಗೆ ತಾಳ್ಮೆಯಿಂದ ವರ್ತಿಸಬೇಕು ಎಂದರು.

ಸೌಲಭ್ಯಗಳನ್ನು ಒದಗಿಸಲು ಸಮೀಕ್ಷೆಗಳನ್ನು ನಡೆಸುವುದು ಅತ್ಯಂತ ಅಗತ್ಯ, ಸಮೀಕ್ಷೆ ಸೂಕ್ಷ್ಮ ವಿಚಾರವಾಗಿದ್ದು,, ಎನ್ಮುರೇಟರ್ಸ್ ಗಳು ಕಾರ್ಯದಕ್ಷತೆಯಿಂದ ನಿಖರವಾದ ಸಮೀಕ್ಷೆ ನಡೆಸಿ ಎಂದು ತಿಳಿಸಿದರು.

ಮಂಡ್ಯ ಜಿಲ್ಲೆಯಲ್ಲಿ ಇರುವ ಎಲ್ಲಾ ಎನ್ಮುರೇಟರ್ಸ್ ಗಳಿಗೆ ತರಬೇತಿ ನೀಡಲಾಗಿದೆಯೇ ಎಂದು ಪರಿಶೀಲಿಸಿ, ತರಬೇತಿ ದಿನದಂದು ರಜೆಯ ಮೇಲೆ ತೆರಳಿದ್ದ ಎನ್ಮುರೇಟರ್ಸ್ಗಳಿಗೆ ಮರು ತರಬೇತಿ ನೀಡಲಾಗಿದೆಯೇ ಎಂದು ಪರಿಶೀಲಿಸಿ, ತರಬೇತಿ ಪಡೆದಿರುವುದನ್ನು ನೋಡಲ್ ಅಧಿಕಾರಿಗಳು ಖಾತ್ರಿ ಪಡಿಸಿಕೊಳ್ಳಿ ಎಂದರು.

ಬೇಸಿಗೆ ಸಮಯವಾಗಿರುವುದರ ಸಮೀಕ್ಷೆಗೆ ಶಿಕ್ಷಕರನ್ನು ಸಮರ್ಪಕವಾಗಿ ಬೆಳೆಸಿಕೊಳ್ಳಿ, ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಹೋಲಿಸಿದರೆ ಮಂಡ್ಯ ನಗರದ ಸಮೀಕ್ಷೆಯ ಪ್ರತಿಶತ ಕಡಿಮೆ ಇದೆ. ನಿಗದಿ ಪಡಿಸಿದ ಗುರಿಯನ್ನು ಸಾಧಿಸಸದ ತಾಲ್ಲೂಕು ಅಥವಾ ಸ್ಥಳಗಳಿಗೆ ಹೆಚ್ಚುವರಿ ಎನ್ಮುರೇಟರ್ಸ್ ಬೇಕಿದ್ದರೆ ಮನವಿ ಸಲ್ಲಿಸಿ ಪಡೆದುಕಿಂಡು, ಪ್ರಗತಿ ಸಾಧಿಸಿ ಎಂದು ತಿಳಿಸಿದರು.

ನಗರದ ಸಮೀಕ್ಷೆಯನ್ನು ಪರಿಣಾಮಕಾರಿಯಾಗಿ ಸಾಧಿಸುವಲ್ಲಿ ನಗರಸಭೆ ಪೌರಾಯುಕ್ತರ ಪಾತ್ರ ಹೆಚ್ಚಿರುತ್ತದೆ‌. ಮಂಡ್ಯ ನಗರದ 11357 ಪರಿಶಿಷ್ಟ ಮನೆ ಪೈಕಿ 7389 ಮನೆಗಳಲ್ಲಿ ಶೇ 65.1 ರಷ್ಟು ಸಮೀಕ್ಷೆ ನಡೆಸಲಾಗಿದೆ, ನಗರಸಭೆ ಪೌರಾಯುಕ್ತರು, ಮಂಡ್ಯ ತಹಶೀಲ್ದಾರ್ ಹಾಗೂ ಮಂಡ್ಯ ಉಪವಿಭಾಗಾಧಿಕಾರಿಗಳು ವಿಶೇಷ ಮುತುವರ್ಜಿ ವಹಿಸಿ ಇನ್ನೆರಡು ದಿನಗಳಲ್ಲಿ ಸಂಪೂರ್ಣ ಸಮಿಕ್ಷೆಯನ್ನು ನಡೆಸಿ ಕೊಡಬೇಕು ಎಂದು ಹೇಳಿದರು.

ಜಿಲ್ಲೆಯ ಕೆಲ ಎನ್ಮುರೇಟರ್ಸ್ ಗಳು ಇನ್ನೂ ಸಹ ಒಂದು ಮನೆಯ ಸಮೀಕ್ಷೆಯನ್ನು ನಡೆಸದಿರುವುದು ಗಮನಕ್ಕೆ ಬಂದಿದೆ ಅಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು, ಮೇಲ್ವಿಚಾರಕರು ನೋಡಲ್ ಅಧಿಕಾರಿಗಳು ಸಮೀಕ್ಷೆದಾರರು ಸರಿಯಾದ ಸಮಯಕ್ಕೆ ಸಮೀಕ್ಷೆ ನಡೆಸುತ್ತಿರುವ ಬಗ್ಗರ ಪರಿಶೀಲಿಸಿ ಹಾಗೂ ನೀವುಗಳ ಸಹ ಸ್ಥಳ ಪರಿಶೀಲನೆ ನಡೆಸಿ ಇನ್ನೂ ಹೆಚ್ಚಿನ ಕಾರ್ಯಕ್ಷಮತೆ ವಹಿಸುವಂತೆ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.

ಜಿಲ್ಲಾಧಿಕಾರಿ ಡಾ ಕುಮಾರ ಅವರು ಮಾತನಾಡಿ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ್ ದಾಸ್ ಏಕಸದಸ್ಯ ವಿಚಾರಣಾ ಆಯೋಗದ ಪರಿಶಿಷ್ಟ ಜಾತಿ ಸಮಗ್ರ ಸಮೀಕ್ಷೆಯಲ್ಲಿ ಮಂಡ್ಯ 4 ನೇ ಸ್ಥಾನದಲ್ಲಿದೆ, 2011 ರ ಜನಗಣತಿಯ ಪ್ರಕಾರ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿಯ 61423 ಮನೆಗಳಿದ್ದು ಈ ಪೈಕಿ 53198 ಮನೆಗಳಲ್ಲಿ ಈಗಾಗಲೇ ಸಮೀಕ್ಷೆ ನಡೆಸಲಾಗಿದೆ, ಶೇ 86 ರಷ್ಟು ಗುರಿ ಸಾಧಿಸಿದ್ದೇವೆ, ಇದಲ್ಲದೇ ಇತರೆ ಕುಟುಂಬಗಳ 391286 ಮನೆಗಳಲ್ಲಿ ಸಮೀಕ್ಷೆ ನಡೆಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ 1823 ಮತಗಟ್ಟೆಗಳಿದ್ದು 2036 ಗಣಿತಿದಾರರಿದ್ದಾರೆ, ಗಣತಿದಾರರ ಮೇಲ್ವಿಚಾರಣೆಗೆ 179 ಮೇಲ್ವಿಚಾರಕರನ್ನು ನೇಮಿಸಲಾಗಿದೆ, ಪ್ರತ್ಯೇಕವಾಗಿ ವಾಟ್ಸಾಪ್ ಗ್ರೂಪ್ ರಚಿಸಿದ್ದು ಎನ್ಮುರೇಟರ್ಸ್, ಮೇಲ್ವಿಚಾರಕರು ಹಾಗೂ ನೋಡೆಲ್ ಅಧಿಕಾರಿಗಳು ಸಮೀಕ್ಷೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಛಾಯಾಚಿತ್ರಗಳನ್ನು ಗ್ರೂಪ್ ಗಳಲ್ಲಿ ಹಾಕುವಂತೆ ಸೂಚಿಸಲಾಗಿದೆ, ಪ್ರತಿ ದಿನದ ಸಮೀಕ್ಷೆಯ ವರದಿಯನ್ನು ಅವಲೋಕಿಸಿ ಅಧಿಕಾರಿಗಳೊಂದಿಗೆ ಸಂವಾದ ನಡೆಸಲಾಗುತ್ತಿದೆ ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಸಿ ಶಿವಾನಂದಮೂರ್ತಿ, ಮಂಡ್ಯ ಉಪ ವಿಭಾಗಾಧಿಕಾರಿ ಶಿವಮೂರ್ತಿ, ನಗರಸಭೆ ಪೌರಾಯುಕ್ತ ಪಂಪಶ್ರೀ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಪಿ.ಲಕ್ಷ್ಮಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಕೃಷ್ಣಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ರಾಜಮೂರ್ತಿ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ