ಉಪಲೋಕಾಯುಕ್ತರಾದ ಬಿ. ವೀರಪ್ಪ ಅವರು ಇಂದು ಮಂಡ್ಯ ನಗರದ ಯತ್ತಗದನಹಳ್ಳಿಯಲ್ಲಿರುವ ತ್ಯಾಜ್ಯ ನೀರು ಸಂಸ್ಕರಣ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸಂಸ್ಕರಣ ಘಟಕದಲ್ಲಿ ನೀರು ಸಂಪೂರ್ಣವಾಗಿ ಶುದ್ಧೀಕರಣವಾಗದೆ ರಾಜ ಕಾಲುವೆಗೆ ಹರಿಯುತ್ತಿದೆ ಇದರೊಂದಿಗೆ ಕೊಳಚೆ ನೀರು ಸಹ ಸೇರಿ ಕಾಲುವೆ ನೀರು ಮಲಿನಗೊಂಡಿದೆ, ಸ್ಥಳದಲ್ಲೇ ಉಪಸ್ಥಿತರಿದ್ದ ಗ್ರಾಮಸ್ಥರು ಬೆಳೆಗಳನ್ನು ಬೆಳೆಯಲು ಉಪಯೋಗಿಸಲಾಗುತ್ತಿದೆ. ಮನೆಯ ಹತ್ತಿರವಿರುವ ಬೋರ್ ವೆಲ್ ಗಳಲ್ಲು ಸಹ ಕಲುಷಿತ ನೀರು ಬರುತ್ತಿದ್ದು ಇದರ ಸೇವನೆಯಿಂದ ಚರ್ಮ ಖಾಯಿಲೆಗಳು ಉಂಟಾಗುತ್ತಿದೆ ಎಂದು ದೂರ ನೀಡಿದರು.
ಉಪಲೋಕಾಯುಕ್ತರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ, ಪರಿಸರ ಮಾಲಿನ್ಯ ಅಧಿಕಾರಿ, ಪಿ.ಡಿ.ಓ, ಸಣ್ಣ ನೀರಾವರಿ ಇಲಾಖೆಯ ಅಭಿಯಂತರ ಇವರುಗಳು ಕೆರೆ ನೀರು ಮಲಿನವಾಗದಂತೆ ಕ್ರಮ ಕೈಗೊಂಡು ವರದಿ ನೀಡಬೇಕು ಎಂದರು.
ನಂತರ ಕೆರೆ ಅಂಗಳದಲ್ಲಿರುವ ಡಿ. ದೇವರಾಜ ಅರಸ್ ಮೆಟ್ರಿಕ್ ನಂತರದ ವೃತ್ತಿಪರ ಬಾಲಕಿಯರ ವಿದ್ಯಾರ್ಥಿನಿಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.




