Wednesday, November 18, 2026

ಪ್ರಾಯೋಗಿಕ ಆವೃತ್ತಿ

ಮದ್ದೂರು| ಮಣಿಗೆರೆ ಡೇರಿ ಅಧ್ಯಕ್ಷರಾಗಿ ಕೆಂಪರಾಜು ಆಯ್ಕೆ

ಮದ್ದೂರು ತಾಲ್ಲೂಕಿನ ಭಾರತೀನಗರ ಸಮೀಪದ ಮಣಿಗೆರೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಕೆಂಪರಾಜು, ಉಪಾಧ್ಯಕ್ಷರಾಗಿ ವೆಂಕಟೇಶ್ ಅವರು ಅವಿರೋಧವಾಗಿ ಆಯ್ಕೆಯಾದರು.

ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ ಕೆಂಪರಾಜು ಮಾತನಾಡಿ, ರೈತರು ಹೈನುಗಾರಿಕೆಯಲ್ಲಿ ಹೆಚ್ಚು ತೊಡಗಿದರೆ ಆರ್ಥಿಕ  ಸಮಸ್ಯೆಯಿಂದ ಹೊರಬರಬಹುದು. ಗುಣಮಟ್ಟದ ಹಾಲನ್ನು ನೀಡಿ ಸಂಘವನ್ನು ಅಭಿವೃದ್ದಿ ಪಡಿಸಬೇಕೆಂದು ಕೋರಿದರು. ಸಂಘದಿಂದ ಬರುವಂತಹ ಸೌಲಭ್ಯಗಳನ್ನು ಸಮಪರ್ಕವಾಗಿ ಬಳಸಿಕೊಳ್ಳಬೇಕೆಂದು ತಿಳಿಸಿದರು.

ನೂತನ ಉಪಾಧ್ಯಕ್ಷ ವೆಂಕಟೇಶ್ ಮಾತನಾಡಿ, ಸಂಘವನ್ನು ಅಭಿವೃದ್ದಿಯತ್ತ ಕೊಂಡೋಯ್ಯಲು ಸಂಘದ ಅಧ್ಯಕ್ಷರು ಹಾಗೂ ನಿರ್ದೇಶಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ನಿರ್ವಹಿಸುವುದಾಗಿ ಭರವಸೆ ನೀಡಿದರು. ಸಹಕಾರ ಸಂಘದ ನಿರೀಕ್ಷಕ ವೆಂಕಟೇಶ್ ಅವರು ಚುನಾವಣಾಧಿಕಾರಿಯಾಗಿ ಕೆಲಸ ನಿರ್ವಹಿಸಿದರು.

ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಸಂಘದ ಕಾರ್ಯದರ್ಶಿ ಕೆ.ಪುಟ್ಟಲಿಂಗಯ್ಯ, ನಿರ್ದೇಶಕರಾದ ವೆಂಕಟೇಶ್, ರಮೇಶ, ಕೆ.ಎಂ.ಸಿದ್ದೇಗೌಡ, ಸ್ವಾಮಿ, ಬಸವೇಗೌಡ, ಕೆಂಪಮ್ಮ, ಬಿಳಿಯಯ್ಯ, ಮುಖಂಡರಾದ ದಂಡಿಲಿಂಗಯ್ಯ, ಬೋರೇಗೌಡ (ಚಿಕ್ಕೈದ) ಪುಟ್ಟ, ಮಣಿಗೆರೆ ಸೀನ, ಗೋಬಿ ಸಿದ್ದ, ರಾಮಲಿಂಗೇಗೌಡ ಸೇರಿದಂತೆ ಹಲವರು ಅಭಿನಂದಿಸಿ ಗೌರವಿಸಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ