Friday, November 20, 2026

ಪ್ರಾಯೋಗಿಕ ಆವೃತ್ತಿ

ಮನ್‌ಮುಲ್: ಯು.ಸಿ.ಶಿವಕುಮಾರ್ ಅಧ್ಯಕ್ಷ-ಡಿ.ಕೃಷ್ಣೇಗೌಡ ಉಪಾಧ್ಯಕ್ಷರಾಗೋದು ಬಹುತೇಕ ಖಚಿತ

ಮಂಡ್ಯ ಜಿಲ್ಲಾ ಹಾಲು ಒಕ್ಕೂಟ(ಮನ್‌ಮುಲ್) ಆಡಳಿತ ಮಂಡಳಿಯ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ಇಂದು ತೆರೆ ಬೀಳಲಿದ್ದು,ಮೊದಲ ಅವಧಿಗೆ ಮೂರು ಬಾರಿ ನಿರ್ದೇಶಕರಾಗಿ ಆಯ್ಕೆಯಾಗಿರುವ ಯು.ಸಿ.ಶಿವಕುಮಾರ್ (ಉಮ್ಮಡಹಳ್ಳಿ ಶಿವಪ್ಪ)ಅಧ್ಯಕ್ಷರಾಗಿ ಮತ್ತು ಉಪಾಧ್ಯಕ್ಷರಾಗಿ ಮಳವಳ್ಳಿಯ ಡಿ. ಕೃಷ್ಣೇಗೌಡ ಆಯ್ಕೆಗೆ ಕಾಂಗ್ರೆಸ್ ವರಿಷ್ಠರು ಸಮ್ಮತಿ ನೀಡಿದ್ದಾರೆ.ಈ ಮೂಲಕ ಯು.ಸಿ.ಶಿವಕುಮಾರ್ ಅಧ್ಯಕ್ಷ ಸ್ಥಾನ ಅಲಂಕರಿಸಿದರೆ,ಡಿ.ಕೃಷ್ಣೇಗೌಡ ಉಪಾಧ್ಯಕ್ಷ ಸ್ಥಾನ ಅಲಂಕರಿಸೋದು ಖಚಿತವಾಗಿದೆ.

Oplus_131072

ಯು.ಸಿ.ಶಿವಕುಮಾರ್ ಮನ್‌ಮುಲ್ ಅಧ್ಯಕ್ಷರಾಗೋದು ಖಚಿತ
ಮಂಡ್ಯ ಜಿಲ್ಲಾ ಹಾಲು ಒಕ್ಕೂಟ(ಮನ್‌ಮುಲ್) ಆಡಳಿತ ಮಂಡಳಿಯ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ಇಂದು ತೆರೆ ಬೀಳಲಿದ್ದು,ಮೊದಲ ಅವಧಿಗೆ ಮೂರು ಬಾರಿ ನಿರ್ದೇಶಕರಾಗಿ ಆಯ್ಕೆಯಾಗಿರುವ ಯು.ಸಿ.ಶಿವಕುಮಾರ್ (ಉಮ್ಮಡಹಳ್ಳಿ ಶಿವಪ್ಪ)ಅಧ್ಯಕ್ಷರಾಗಿ ಮತ್ತು ಉಪಾಧ್ಯಕ್ಷರಾಗಿ ಮಳವಳ್ಳಿಯ ಡಿ. ಕೃಷ್ಣೇಗೌಡ ಆಯ್ಕೆಗೆ ಕಾಂಗ್ರೆಸ್ ವರಿಷ್ಠರು ಸಮ್ಮತಿ ನೀಡಿದ್ದಾರೆ.ಈ ಮೂಲಕ ಯು.ಸಿ.ಶಿವಕುಮಾರ್ ಅಧ್ಯಕ್ಷ ಸ್ಥಾನ ಅಲಂಕರಿಸಿದರೆ,ಡಿ.ಕೃಷ್ಣೇಗೌಡ ಉಪಾಧ್ಯಕ್ಷ ಸ್ಥಾನ ಅಲಂಕರಿಸಲಿದ್ದಾರೆ.

Oplus_131072

ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಇದ್ದ ಹಿನ್ನಲೆಯಲ್ಲಿ ಕಾಂಗ್ರೆಸ್ ನಾಯಕರಾದ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ,ಪಿ.ಎಂ.ನರೇಂದ್ರ ಸ್ವಾಮಿ,ಗಣಿಗ ರವಿಕುಮಾರ್ ಕೂತು ಯಾವುದೇ ಅಪಸ್ವರ ಬಾರದಂತೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿತರ ಸಭೆ ನಡೆಸಿ, ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಯು.ಸಿ.ಶಿವಕುಮಾರ್(ಉಮ್ಮಡಹಳ್ಳಿ ಶಿವಪ್ಪ) ಅವರನ್ನು ಮೊದಲ ಅವಧಿಗೆ ಅಧ್ಯಕ್ಷ ಎಂದು ತೀರ್ಮಾನಿಸಿದ್ದಾರೆ.ಹಾಗೆಯೇ ಮಳವಳ್ಳಿಯ ಡಿ.ಕೃಷ್ಣೇಗೌಡ ಉಪಾಧ್ಯಕ್ಷರಾಗಲಿದ್ದಾರೆ.

ಅಧ್ಯಕ್ಷ ಸ್ಥಾನದ ರೇಸಿನಲ್ಲಿ ಬಿ.ಬೋರೇಗೌಡ, ಎನ್.ಅಪ್ಪಾಜಿಗೌಡ, ಎಂ.ಕೆ.ಹರೀಶ್‌ಬಾಬು ಪ್ರಬಲ ಸ್ಪರ್ಧಿಯಾಗಿದ್ದರು.ಆದರೆ ಮೂರು ಬಾರಿ ನಿರ್ದೇಶಕರಾಗಿ ಆಯ್ಕೆ ಆಗಿರುವ ಯು.ಸಿ.ಶಿವಕುಮಾರ್‌ಗೆ ಅವಕಾಶ ನೀಡುವಂತೆ ಮಂಡ್ಯ ಶಾಸಕ ರವಿಕುಮಾರ್ ಗಣಿಗ ಪ್ರಬಲವಾಗಿ ಪ್ರತಿಪಾದಿಸಿ ಅದರಲ್ಲಿ ಯಶಸ್ವಿಯಾಗಿದ್ದಾರೆ.

ಅಧಿಸೂಚನೆ

ಮತದಾನಕ್ಕೆ ಸಂಬಂಧಿಸಿದಂತೆ ಚುನಾವಣಾಧಿಕಾರಿಯಾದ ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಅಧಿಸೂಚನೆ ಹೊರಡಿಸಿದ್ದಾರೆ. 12 ಚುನಾಯಿತ ಹಾಗೂ ಐವರು ನಾಮ ನಿರ್ದೇಶಿತ ನಿರ್ದೇಶಕರು ಮತದಾನದ ಹಕ್ಕುವುಳ್ಳವರಾಗಿದ್ದಾರೆ. ಯು.ಸಿ.ಶಿವಕುಮಾರ್, ಎನ್.ಅಪ್ಪಾಜಿಗೌಡ, ಡಿ.ಕೃಷ್ಣೇಗೌಡ, ಬಿ.ಬೋರೇಗೌಡ, ಎಸ್.ಎನ್.ಲಕ್ಷ್ಮೀನಾರಾಯಣ್, ಎಂ.ಕೆ.ಹರೀಶ್‌ಬಾಬು ಕಾಂಗ್ರೆಸ್ ಬೆಂಬಲಿತರಾಗಿ ಆಯ್ಕೆಯಾಗಿದ್ದಾರೆ. ಅಂತೆಯೇ ಸಿ.ಶಿವಕುಮಾರ್, ಎಂ.ಎಸ್.ರಘುನಂದನ್, ಬಿ.ಆರ್.ರಾಮಚಂದ್ರು ಜೆಡಿಎಸ್ ಹಾಗೂ ಎಸ್.ಪಿ.ಸ್ವಾಮಿ ಬಿಜೆಪಿ ಬೆಂಬಲಿತರಾಗಿದ್ದಾರೆ. ಕೆ.ಆರ್.ಪೇಟೆ ತಾಲೂಕಿನಿಂದ ಡಾಲು ರವಿ ಮತ್ತು ಎಂ.ಬಿ.ಹರೀಶ್ ಆಯ್ಕೆಯಾಗಿದ್ದಾರೆ.

ಇವರೊಟ್ಟಿಗೆ ಸರ್ಕಾರದ ನಾಮ ನಿರ್ದೇಶಿತರಾಗಿರುವ ಮಳವಳ್ಳಿ ಆರ್.ಎನ್.ವಿಶ್ವಾಸ್, ಸಹಕಾರ ಇಲಾಖೆಯ ಜಿಲ್ಲಾ ನೋಂದಣಾಧಿಕಾರಿ, ಕೆಎಂಎಫ್ ಪ್ರತಿನಿಧಿ, ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳಿ(ಎನ್‌ಡಿಡಿಬಿ), ಪಶುಪಾಲನಾ ಇಲಾಖೆ ಉಪನಿರ್ದೇಶಕರಿಗೆ ಮತದಾನದ ಹಕ್ಕಿದ್ದು, ಒಟ್ಟಾರೆ 17 ಸದಸ್ಯ ಬಲದ ಆಡಳಿತ ಮಂಡಳಿಯ ವರಿಷ್ಠರ ಚುನಾವಣೆ ನಡೆಯಲಿದೆ.

20ರಂದು ಬೆಳಗೆ 9 ಗಂಟೆಯಿಂದ 11 ರವರೆಗೆ ನಾಮಪತ್ರ ಸಲ್ಲಿಸಬಹುದಾಗಿದೆ. ಮಧ್ಯಾಹ್ನ 1 ಗಂಟೆಗೆ ಆಡಳಿತ ಮಂಡಳಿಯ ಸಭೆ ಹಾಗೂ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಂತರ ಕ್ರಮಬದ್ಧ ಹಾಗೂ ತಿರಸ್ಕೃತ ಅಭ್ಯರ್ಥಿಗಳ ನಾಮಪತ್ರದ ಪಟ್ಟಿಯನ್ನು ಪ್ರಕಟಿಸಲಾಗುವುದು. ಇದಾದ 30 ನಿಮಿಷ ನಾಮಪತ್ರ ಹಿಂತೆಗೆದುಕೊಳ್ಳಲು ಅವಕಾಶವಿರಲಿದೆ. ಅಂತಿಮವಾಗಿ ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದಲ್ಲಿ ರಹಸ್ಯ ಮತದಾನ ನಡೆಸಲಾಗುವುದು. ಬಳಿಕ ಮತ ಎಣಿಕೆ ಹಾಗೂ ಫಲಿತಾಂಶ ಘೋಷಿಸಲಾಗುವುದು ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ