Thursday, November 19, 2026

ಪ್ರಾಯೋಗಿಕ ಆವೃತ್ತಿ

ಹಾಲು ಉತ್ಪಾದಕರ ಆರ್ಥಿಕ ಸಬಲೀಕರಣಕ್ಕೆ ಮನ್ಮುಲ್ ಸಂಕಲ್ಪ : ಶಿವಪ್ಪ

ಗುಣಮಟ್ಟದ ಹಾಲು ಉತ್ಪಾದಕರ ಆರ್ಥಿಕ ಸಬಲೀಕರಣಕ್ಕೆ ಮನ್ ಮುಲ್ ಸಂಕಲ್ಪ ಮಾಡಿದೆ ಎಂದು ಮನ್ಮುಲ್ ನಿರ್ದೇಶಕ ಯು.ಸಿ.ಶಿವಕುಮಾರ್ (ಶಿವಪ್ಪ) ಹೇಳಿದರು.

ಮಂಡ್ಯ ತಾಲೂಕಿನ ಕೋಣನಹಳ್ಳಿಯ ಎಂ.ಜಿ.ಬಡಾವಣೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಮಹಾತ್ಮಗಾಂಧಿ ಬಡಾವಣೆ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಉದ್ಘಾಟನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮನ್ಮುಲ್‌ಗೆ ಗುಣಮಟ್ಟದ ಹಾಲು ಸರಬರಾಜು ಮಾಡುವ ಉತ್ಪಾದಕರಿಗೆ ಅನೇಕ ಸೌಲಭ್ಯಗಳನ್ನು ನೀಡಲಾಗುತ್ತಿದೆ, ರಾಸುಗಳ ಹಿತಕಾಯಲು ಮ್ಯಾಟ್ ಸೌಲಭ್ಯ, ಹಾಲು ಕರೆಯುವ ಯಂತ್ರ, ಮೇವು ಕತ್ತರಿಸುವ ಯಂತ್ರ, ರಾಸುಗಳ ಆರೋಗ್ಯ ರಕ್ಷಣೆಗಾಗಿ ಚಿಕಿತ್ಸೆ, ಆರ್ಥಿಕ ಸಬಲೀಕರಣಕ್ಕೆ ರಿಯಾಯತಿ ದರದಲ್ಲಿ ಪಶು ಆಹಾರ ನೀಡಲಾಗುತ್ತಿದೆ ಎಂದು ತಿಳಿಸಿದರು.

ರೈತರು ಬೇಸಿಗೆ ಕಾಲದಲ್ಲಿ ರಾಸುಗಳ ಆರೋಗ್ಯ ಮತ್ತು ಗುಣಮಟ್ಟದ ಹಾಲು ಉತ್ಪಾದನೆಗೆ ರೈತರು ಹೆಚ್ಚಿನ ಕಾಳಜಿ ವಹಿಸಿ, ಕೋಣನಹಳ್ಳಿ ಎಂ.ಜಿ.ಬಡಾವಣೆಯಲ್ಲಿನ ಮಹಿಳೆಯರು ಕಡಿಮೆ ಹಾಲು ಸಂಗ್ರಹಿದರೂ ಸಂಘಕ್ಕೆ ಸ್ವಂತ ಕಟ್ಟಡ ನಿರ್ಮಿಸಿರುವುದು ಮಾದರಿಯಾಗಿದೆ, ಮುಂದಿನ ದಿನಗಳಲ್ಲಿ ಹೆಚ್ಚು ಹೈನುಗಾರಿಕೆಗೆ ಮಹತ್ವ ನೀಡಿ ಹಾಲು ಉತ್ಪಾದನೆ ಹೆಚ್ಚಿಸಿ ಎಂದು ನುಡಿದರು.

ಮನ್ಮುಲ್‌ನ ವ್ಯವಸ್ಥಾಪಕ(ಶ್ರೇ.ತಾಂ) ಎಸ್.ಪ್ರಭಾಕರ್ ಮಾತನಾಡಿ, ಒಂದು ಊರಿನಲ್ಲಿ ಶಾಲೆ, ಆಸ್ಪತ್ರೆ ಎಷ್ಟು ಅವಶ್ಯವೋ ಅಷ್ಠೇ ಪ್ರಾಮುಖ್ಯತೆಯನ್ನು ಆರ್ಥಿಕ ಸಬಲತೆಗಾಗಿ ಹೈನುಗಾರಿಕೆ,ಡೈರಿಗೂ ನೀಡುತ್ತಿರುವುದು ಶ್ಲಾಘನೀಯ ಎಂದರು.

ಹಾಲು ಉತ್ಪಾದಕರ ಸಂಘ, ಜಿಲ್ಲಾ ಹಾಲು ಒಕ್ಕೂಟ, ಹಾಲು ಮಂಡಳಿ ಉತ್ತಮವಾಗಿ ಬೆಳೆಯುತ್ತಿದೆ, ಜಿಲ್ಲೆಯಲ್ಲಿ ಮೆಗಾಡೈರಿ ಸ್ಥಾಪನೆಯಾಗಿದೆ, ಇದೆಲ್ಲಾ ಹಾಲು ಉತ್ಪಾದಕರ ಸಹಕಾರದಿಂದ ಸಾಧ್ಯವಾಗಿದೆ ಎಂದು ನುಡಿದರು.
ರಾಜ್ಯದಲ್ಲಿಯೇ ಹಾಲಿನ ಗುಣಮಟ್ಟದಲ್ಲಿ ಮನ್ಮುಲ್ 6ನೇ ಸ್ಥಾನದಲ್ಲಿದೆ. ಆಧುನಿಕ, ವೈಜ್ಞಾನಿಕ ಹೈನುಗಾರಿಕೆ ಆಳವಡಿಸಿಕೊಳ್ಳುವುದು ಉತ್ತಮ, ಆರ್ಥಿಕ ಸಬಲತೆಗೆ ಸಂಕಲ್ಪಮಾಡಿ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಮನ್ಮುಲ್ ಉಪವ್ಯವಸ್ಥಾಪಕ ಡಾ.ಎ.ಎನ್.ಮಂಜೇಶ್‌ಗೌಡ, ವಿಸ್ತರಣಾಧಿಕಾರಿ ಎನ್.ಪ್ರತಾಪ್, ಗ್ರಾ.ಪಂ. ಸದಸ್ಯೆ ಕಲಾವತಿ, ಎಂ.ಜಿ.ಬಡಾವಣೆ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಪ್ರಮೀಳಾ, ಸಿಇಓ ಸುಮಿತಾ, ಉಪಾಧ್ಯಕ್ಷೆ ಭಾಗ್ಯ, ನಿರ್ದೇಶಕರಾದ ಸರಿತಾ, ಜಯಮ್ಮ, ಲಕ್ಷಿö್ಮ, ಹೇಮಾವತಿ, ಭಾಗ್ಯ, ಗೌರಮ್ಮ, ನಾಗಮ್ಮ, ಗಿರಿಜರಮ್ಮ, ಸುನಂದಾ, ಯೋಗೇಶ್ ಮತ್ತಿತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ