Thursday, November 19, 2026

ಪ್ರಾಯೋಗಿಕ ಆವೃತ್ತಿ

ಯುಪಿಎಸ್ಸಿಯಲ್ಲಿ ರ್‍ಯಾಂಕ್ ಪಡೆದ ಮಂಡ್ಯದ ಯುವಕ

ಯುಪಿಎಸ್’ಸಿ ನಡೆಸಿದ 2022ನೇ ಸಾಲಿನ ಪರೀಕ್ಷೆಯಲ್ಲಿ ಮಂಡ್ಯ ತಾಲ್ಲೂಕಿನ ಹಳೇ ಬೂದನೂರು ಗ್ರಾಮದ ಮನೋಜ್ ಹೆಚ್.ಪಿ ಅವರು 929 ರ್ಯಾಂಕ್ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಗ್ರಾಮದ ಮೂಗೇಗೌಡರ ಸಿದ್ದೇಗೌಡರ ಮಗ ಪ್ರಾಂಶುಪಾಲ ಬಿ.ಎಸ್.ಪುಟ್ಟಸ್ವಾಮಿ ಹಾಗೂ ಹೇಮಾ ದಂಪತಿ ಪುತ್ರ ಮನೋಜ್ ಹೆಚ್.ಪಿ ತನ್ನ ಮೊದಲ‌ ಯತ್ನದಲ್ಲೇ ಯುಪಿಎಸ್ಸಿ ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದಾರೆ.

ಒಡಿಸ್ಸಾದ ಭುವನೇಶ್ವರದ ಐಐಟಿಯಲ್ಲಿ ಬಿ.ಟೆಕ್ ಹಾಗೂ ಬೆಂಗಳೂರು ವಿವಿಯಲ್ಲಿ‌ ಎಂಟೆಕ್ ಮುಗಿಸಿ ಪ್ರಸ್ತುತ ದೆಹಲಿಯ ಪವರ್ ಕಾರ್ಪೋರೇಷನ್’ನಲ್ಲಿ ಐಇಎಸ್ ಅಧಿಕಾರಿಯಾಗಿ ಮನೋಜ್ ಪ್ರಸ್ತುತ ಸೇವೆ ಸಲ್ಲಿಸುತ್ತಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ