Saturday, October 26, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯನಗರದ ನೂರಡಿ ರಸ್ತೆಯಲ್ಲಿ ಮರಗಳ ಮಾರಣಹೋಮ

ಮಂಡ್ಯನಗರ ನೂರಡಿ ರಸ್ತೆಯಲ್ಲಿ ರಿಲಯನ್ಸ್ ಮಾರ್ಟ್‌ಗೆ ಅನುಕೂಲ ಮಾಡಿಕೊಡುವುದಕ್ಕಾಗಿ ನೆರಳು ಕೊಡುವ ಮರವನ್ನು ಹೀಗೆ ಅಮಾನವೀಯವಾಗಿ ಕತ್ತರಿಸುವ ಮೂಲಕ ಅರಣ್ಯಾಧಿಕಾರಿಗಳು ಸ್ಥಳೀಯರು ಹಾಗೂ ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ತುತ್ತಾಗಿದ್ಧಾರೆ.

ಅವೈಜ್ಞಾನಿಕವಾಗಿ ಮರ ಕಡಿದಿರುವುದು.

ನೂರಡಿ ರಸ್ತೆಯ ಸೌಂದರ್ಯವನ್ನು ಹೆಚ್ಚಿಸಿದ್ದ ಮರಗಳನ್ನು ಅವೈಜ್ಞಾನಿಕವಾಗಿ ಮನಸೋ ಇಚ್ಛೆ ಕತ್ತರಿಸುತ್ತಿರುವ ಮಂಡ್ಯ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಈ ಬಾರಿ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ ಮಾಡುವಂತೆ ಜಿಲ್ಲಾಡಳಿತ ಮತ್ತು ಸರಕಾರವನ್ನು ನಾಡಿನ ಎಲ್ಲ ಪರಿಸರ ಪ್ರೇಮಿಗಳೂ ಒತ್ತಾಯಿಸಬೇಕಿದೆ ಎಂದು ಸ್ಥಳೀಯರು ವ್ಯಂಗ್ಯವಾಡಿದ್ಧಾರೆ.

Save Reliance ~ Not Trees

ಈ‌ ಮರಗಳ ಮಾರಣಹೋಮದ ಹಿಂದೆ ಮಾರ್ವಾಡಿಗಳ ಕೈವಾಡವಿದೆ, ಜಾಗತಿಕವಾಗಿ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಗಣ್ಯರನ್ನು ಆಹ್ವಾನಿಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಅರಣ್ಯ ಇಲಾಖೆಯು ಹಸಿರು ನಾಶ ಮಾಡಿ ಬೋಳು ಮರಗಳ ಮಂಡ್ಯ ನಗರವನ್ನು ನಿರ್ಮಿಸಲು ಹೊರಟಿದೆ. ಈ ಬಗ್ಗೆ ಸಾರ್ವಜನಿಕರು, ಸಂಘಟಕರು ಪ್ರಶ್ನಿಸಲು ಹೋದರೆ, ಟೆಂಡರ್ ದಾರರ ಗುಂಪು ಬೆದರಿಕೆಯನ್ನು ಒಡ್ಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಚಿತ್ರಕೂಟದ ಗೆಳೆಯರು, ಸಂಘಟಕರು ಪರಿಸರವನ್ನು ಉಳಿಸುವ ಕೆಲಸಕ್ಕಾಗಿ ಹೋರಾಡುತ್ತೇವೆ ಮತ್ತು ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಲು ಆಗ್ರಹಿಸುತ್ತೇವೆ ಎಂದು ನುಡಿ ಕರ್ನಾಟಕದೊಂದಿಗೆ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮರಕ್ಕೆ ಕೊಡಲಿ ಹಾಕಿದ ತಪ್ಪಿಸ್ಥರು ದಂಡ ತೆರಲೇಬೇಕು. ಪರಿಸರ ಉಳಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಕಿಡಿಕಾರಿದ್ದಾರೆ.

ರೇಂಜ್ ಫಾರೆಸ್ಟ್ ಅಫೀಸರ್ ಶೈಲಜ ಅವರನ್ನು ಈ ಕುರಿತು ನುಡಿ ಕರ್ನಾಟಕ.ಕಾಂ ಸಂಪರ್ಕಿಸಿ, ಈ ರೀತಿ ಮರಗಳನ್ನು ಅಡ್ಡದಿಡ್ಡಿಯಾಗಿ ಏಕೆ ಉರುಳಿಸಿದ್ದಾರೆ ಎಂದು ಪ್ರಶ್ನಿಸಿದಾಗ, ಅರಣ್ಯ ಇಲಾಖೆಯು ಫಾರೂಕ್ ಎನ್ನುವವರಿಗೆ ಟೆಂಡರ್ ನೀಡಿತ್ತು , ನಮ್ಮ ಸಿಬ್ಬಂದ್ಧಿ ವರ್ಗ, ಮರ ಕಡಿಯುವ ಜಾಗಕ್ಕೆ ಹೋಗುವ ಮೊದಲೇ , ಟೆಂಡರ್ ದಾರ ಫಾರೂಕ್, ಮರಗಳನ್ನು ಈ ರೀತಿ ಬೇಕಾಬಿಟ್ಟಿ ಕತ್ತರಿಸಿದ್ದಾರೆ. ಈ ಬಗ್ಗೆ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಮತ್ತು ದಂಡವನ್ನು ವಿಧಿಸುತ್ತೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಈ ಬಗ್ಗೆ ಜಿಲ್ಲಾಧಿಕಾರಿಗಳು, ಅರಣ್ಯಾಧಿಕಾರಿಗಳು ಸಮಗ್ರ ತನಿಖೆ ನಡೆಸಬೇಕು, ಟೆಂಡರ್ ದಾರನು ನಿಯಮ‌‌ ಉಲ್ಲಂಘನೆ ಮಾಡಿರುವುದರ ಬಗ್ಗೆ ವಿಚಾರಣೆ ನಡೆಸಬೇಕು,  ಈ ಬಗ್ಗೆ ಯಾವ ಕ್ರಮ ಕೈಗೊಂಡಿದ್ದಾರೆಂದು ಸ್ಪಷ್ಟಿಕರಿಸಬೇಕೆಂದು ಪರಿಸರ ಪ್ರೇಮಿಗಳು, ಚಿತ್ರಕೂಟದ ಬಳಗದವರು ಒತ್ತಾಯಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!