Wednesday, November 18, 2026

ಪ್ರಾಯೋಗಿಕ ಆವೃತ್ತಿ

ಮಸಣಮ್ಮ ದೇವಿ ಪೂಜೆಯಲ್ಲಿ ಭಾಗವಹಿಸಿ ಸಾಮರಸ್ಯ ಮೆರೆದ ಜಫ್ರುಲ್ಲಾಖಾನ್

 


  • ದೇವಸ್ಥಾನಕ್ಕೆ ಜಾಗ ಖರೀದಿಸಿ ಕೊಟ್ಟು ಸಾಮರಸ್ಯ ಮೆರೆದ ಜಫ್ರುಲ್ಲಾಖಾನ್

  • ಮುಸ್ಲಿಂ ನಾಯಕನ ಜಾತ್ಯತೀತ ಮನೋಭಾವ ಸಮಾಜಕ್ಕೆ ಮಾದರಿ

ಮಂಡ್ಯ ತಾಲೂಕಿನ ಸಾತನೂರು ಗ್ರಾಮದಲ್ಲಿ ಮಸಣಮ್ಮ ದೇವಿಯ ಪೂಜಾ ಮಹೋತ್ಸವ ಬಹಳ ವಿಜೃಂಭಣೆಯಿಂದ ನೆರವೇರಿತು.

ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾ ಖಾನ್ ಮಸಣಮ್ಮ ದೇವಿ ಪೂಜಾ ಮಹೋತ್ಸವದಲ್ಲಿ ಪಾಲ್ಗೊಂಡು ಪೂಜೆ ಸಲ್ಲಿಸಿದರು.ಅರ್ಚಕರು ಜಪ್ರುಲ್ಲಾಖಾನ್ ಕುಟುಂಬದ ಒಳತಿಗಾಗಿ ಅರ್ಚನೆ ಮಾಡಿದರು. ಇದೇ ವೇಳೆ ಜಫುಲ್ಲ ಖಾನ್ ರವರನ್ನು ಗ್ರಾಮಸ್ಥರು ಅಭಿನಂದಿಸಿದರು.

ಗ್ರಾಮದ ಮುಖಂಡ ರಾಜು ಅವರು ಮಾತನಾಡಿ, ಮಸಣಮ್ಮ ದೇವಾಲಯ ನಿರ್ಮಾಣ ಮಾಡಬೇಕಾದರೆ ಜಾಗದ ಅವಶ್ಯಕತೆ ಇತ್ತು. ಆಗ ಜಫ್ರುಲ್ಲಾ ಸಾಹೇಬರನ್ನು ಸಂಪರ್ಕ ಮಾಡಿ, ದೇವಾಲಯ ನಿರ್ಮಾಣ ಮಾಡಲು ಈಗಿರುವ ಜಾಗದ ಜೊತೆಗೆ ಮತ್ತಷ್ಟು ಜಾಗ ಬೇಕಾಗಿದೆ ಎಂದು ತಿಳಿಸಿದೆವು. ಅವರು ಆ ಕ್ಷಣದಲ್ಲೇ ಜಾಗವನ್ನು ಅವರ ಹೆಸರಿಗೆ ಕೊಂಡುಕೊಂಡು ನಂತರ ಮಸಣಮ್ಮ ದೇವಾಲಯಕ್ಕೆ ದಾನ ಮಾಡಿದರು. ಇದು ಅವರಲ್ಲಿರುವ ಜಾತ್ಯತೀತ ಮನೋಭಾವವನ್ನು ತೋರುತ್ತದೆ.ಮಸಣಮ್ಮ ದೇವಿ ಅವರ ಕುಟುಂಬಕ್ಕೆ ಒಳ್ಳೆಯದು ಮಾಡಲಿ ಎಂದು ಹಾರೈಸಿದರು.

ಬಳಿಕ ಜಫ್ರುಲ್ಲಾ ಖಾನ್ ಮಾತನಾಡಿ, ದೇವಾಲಯದಲ್ಲಿ ಪೂಜಾ ಮಹೋತ್ಸವ ಇರುವುದು ನನಗೆ ಗೊತ್ತಿರಲಿಲ್ಲ. ಗ್ರಾಮದ ಮುಖಂಡ ಮಹೇಶ್ ಅವರಿಗೆ ಆಕಸ್ಮಿಕವಾಗಿ ಕರೆ ಮಾಡಿದಾಗ ಮಸಣಮ್ಮ ದೇವಾಲಯದಲ್ಲಿ ಪೂಜಾ ಮಹೋತ್ಸವ ನಡೆಯುತ್ತಿರುವುದಾಗಿ ತಿಳಿಸಿದರು.ನಾನು ಬಂದು ಮಸಣಮ್ಮ ದೇವಿಯ ದರ್ಶನ ಪಡೆದಿದ್ದೇನೆ.
ನನಗೆ ತಿಳಿದಿರುವುದು ಎರಡೇ ಜಾತಿ.ಒಂದು ಗಂಡು, ಹೆಣ್ಣು ಜಾತಿ ಮಾತ್ರ. ಜನರೆಲ್ಲರೂ ಸಾಮರಸ್ಯದಿಂದ ನಡೆದುಕೊಂಡು ಹೋಗಬೇಕು.ಜನರು ತಮ್ಮ ಇಚ್ಛೆಗೆ ಅನುಸಾರವಾಗಿ ತಮಗೆ ಇಷ್ಟವಾದ ದೇವರನ್ನು ಪೂಜಿಸುವುದು ತಪ್ಪಲ್ಲ ಎಂದರು.

ಅದ್ದೂರಿ ಅಲಂಕಾರ

ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿವಿಧ ಬಗೆಯ ಹೂವು, ಹಣ್ಣು, ಮುಸುಕಿನ ಜೋಳ ಬಳಸಿ ಆಕರ್ಷಕವಾಗಿ ಅಲಂಕಾರ ಮಾಡಲಾಗಿತ್ತು. ಜೊತೆಗೆ ಜಗಮಗಿಸುವ ವಿದ್ಯುತ್ ದೀಪದ ಅಲಂಕಾರ ಕೂಡ ನೋಡುಗರ ಗಮನ ಸೆಳೆಯುತ್ತಿತ್ತು. ಮಸಣಮ್ಮ ದೇವಿಯ ಪೂಜಾ ಮಹೋತ್ಸವದಲ್ಲಿ ರಾಜ್ಯದ ನಾನಾ ಭಾಗಗಳಿಂದ 20 ಸಾವಿರಕ್ಕೂ ಅಧಿಕ ಜನ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮುಖಂಡರಾದ ಸಾತನೂರು ಮಹೇಶ್, ಜಯರಾಂ, ವೇಣುಗೋಪಾಲ್ ಸೇರಿದಂತೆ ಗ್ರಾಮದ ಮುಖಂಡರು ಭಾಗವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ