Saturday, November 21, 2026

ಪ್ರಾಯೋಗಿಕ ಆವೃತ್ತಿ

ಪಾಂಡವಪುರ| ಯಾಂತ್ರೀಕೃತ ಭತ್ತದ ಬೇಸಾಯಕ್ಕೆ ಸಚಿವರ ಚಾಲನೆ

ಪಾಂಡವಪುರ ತಾಲೂಕಿನ ಅರಳಕುಪ್ಪೆ ಸೀತಾಪುರ ಗ್ರಾಮದ ಲಕ್ಷ್ಮಣ ಅವರ ಜಮೀನಿನಲ್ಲಿ ಮುಂಗಾರು ಹಂಗಾಮಿನ ಯಾಂತ್ರೀಕೃತ ಭತ್ತ ಬೇಸಾಯಕ್ಕೆ ಕೇಂದ್ರ ಸರ್ಕಾರದ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್ ಡಿ ಕುಮಾರಸ್ವಾಮಿ ರವರು ಹಾಗೂ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಚಾಲನೆ ನೀಡಿದರು.

ಯಂತ್ರಶ್ರೀ ಕಾರ್ಯಕ್ರಮವನ್ನು ರೈತರು ಅನುಷ್ಠಾನ ಮಾಡುವುದರಿಂದ ಕೂಲಿ ಆಳುಗಳ ಸಮಸ್ಯೆ ನಿವಾರಣೆ ಕಡಿಮೆ ಖರ್ಚು ಸರಿಯಾದ ಸಮಯಕ್ಕೆ ನಾಟಿ ಹಾಗೂ ಸಾಲಿನಿಂದ ಸಾಲಿಗೆ ಹಂತರದಲ್ಲಿ ನಾಟಿ ಮಾಡುವುದರಿಂದ ಉತ್ತಮವಾದ ಬೆಳೆ ಬೆಳೆಯಲಿಕ್ಕೆ ಸಾಧ್ಯವಾಗುತ್ತದೆ ಇತ್ತೀಚಿನ ದಿನಗಳಲ್ಲಿ ಭತ್ತ ಬೇಸಾಯಕ್ಕೆ ನಾಟಿ ಆಳುಗಳ ಕೊರತೆ ಇದ್ದು ವಾಣಿಜ್ಯ ಹಾಗೂ ತೋಟಗಾರಿಕೆ ಬೆಳೆಗಳತ್ತ ರೈತರು ಮುಖ ಮಾಡಿದ್ದಾರೆ ಯಾಂತ್ರಿಕೃತ ಭತ್ತ ಬೇಸಾಯವನ್ನ ಅನುಷ್ಠಾನ ಮಾಡುವುದರಿಂದ ಕೂಲಿ ಆಳುಗಳ ಸಮಸ್ಯೆ ನಿವಾರಣೆ ಮಾಡಬಹುದು ಯಂತ್ರ ಶ್ರೀ ಕಾರ್ಯಕ್ರಮವು ರೈತರಿಗೆ ಉಪಯೋಗವಾಗುತ್ತದೆ ಎಂದು ಸಿ.ಹೆಚ್.ಎಸ್.ಸಿ ನಿರ್ದೇಶಕ ಕೆ ಚಿದಾನಂದ ತಿಳಿಸಿದರು.

ಯಂತ್ರ ಶ್ರೀ ಕಾರ್ಯಕ್ರಮ ರೈತರು ಅನುಷ್ಠಾನ ಮಾಡುವುದರಿಂದ ಹೊಸ ತಂತ್ರಜ್ಞಾನವನ್ನು ರೈತರು ಅಳವಡಿಸಿಕೊಂಡಂತಾಗುತ್ತದೆ, ಕೂಲಿ ಆಳುಗಳ ಸಮಸ್ಯೆ ನಿವಾರಣೆ ಆಗುತ್ತದೆ, ಯಂತ್ರ ಶ್ರೀ ಕಾರ್ಯಕ್ರಮ ರೈತರಿಗೆ ವರದಾನವಾಗಲಿದೆ ಎಂದು ಹೆಚ್ ಡಿ ಕುಮಾರಸ್ವಾಮಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಸಿ ಎಸ್ ಪುಟ್ಟರಾಜು. ಕೆ ಆರ್ ಪೇಟೆ ಶಾಸಕ ಎಚ್‌ ಟಿ ಮಂಜು,  ಸಿ ಹೆಚ್ ಎಸ್ ಸಿ ಯೋಜನಾಧಿಕಾರಿಗಳಾದ ಶಶಿಕುಮಾರ್, ಜೆಡಿಎ ಅಶೋಕ್, ಕೃಷಿ ಇಲಾಖೆಯ ಡಿಡಿಎ ಮಮತಾ, ನಾಟಿ ಯಂತ್ರ ಬ್ಯಾಂಕಿನ ಕೃಷಿ ಮೇಲ್ವಿಚಾರಕ ನವೀನ್ ಕುಮಾರ್, ಆನಂದ್, ಸತೀಶ್, ಸರ್ವಮಂಗಳ, ಸುಷ್ಮಾ, ಸಚಿನ್, ಪ್ರಭು, ಧನಂಜಯ, ಸುರೇಶ್ ಹಾಗೂ ರೈತರು ಗ್ರಾಮಸ್ಥರು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ