ಪಾಂಡವಪುರ ತಾಲ್ಲೂಕಿನ ಡಿಂಕಾ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಡಿಂಕಾ ಗ್ರಾ.ಪಂ. ವ್ಯಾಪ್ತಿಯ ಹಾಲು ಉತ್ಪಾದಕರಿಗೆ ರಾಸುಗಳ ಆರೋಗ್ಯ ದೃಷ್ಟಿಯಿಂದ ಮ್ಯಾಟ್ ಗಳನ್ನು ಮನ್ ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರ ವಿತರಿಸಿದರು.
ಕಾಡೇನಹಳ್ಳಿ ರಾಮಚಂದ್ರು ಮಾತನಾಡಿ, ಪಾಂಡವಪುರ ತಾಲ್ಲೂಕಿನ ಡಿಂಕಾ ಗ್ರಾ.ಪಂ.ವ್ಯಾಪ್ತಿಯಲ್ಲಿ ಹೈನುಗಾರಿಕೆಗೆ ಉತ್ತೇಜನ ನೀಡಲು 300 ರಾಸು ಮ್ಯಾಟ್ ಗಳನ್ನು ಈ ಭಾಗದ ಹಾಲು ಉತ್ಪಾದಕರಿಗೆ ವಿತರಿಸಲಾಗಿದೆ. ಹೈನುಗಾರಿಕೆ ಉದ್ಯಮ ಅಭಿವೃದ್ಧಿ ಮಾಡಲು ಮ್ಯಾಟ್ ಗಳನ್ನು ವಿತರಿಸಲಾಗುತ್ತಿದೆ ಎಂದರು.
ಡಿಂಕಾ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಚನ್ನಪ್ಪ, ಉಪಾಧ್ಯಕ್ಷ ಸಣ್ಣಿಂಗಮ್ಮ, ಮನ್ ಮುಲ್ ಉಪ ಕಚೇರಿಯ ಉಪ ವ್ಯವಸ್ಥಾಪಕ ಆರ್.ಪ್ರಸಾದ್ ಸೇರಿದಂತೆ ಡಿಂಕಾ ಹಾಲು ಉತ್ಪಾದಕರ ಸಹಕಾರ ಸಂಘದ ಎಲ್ಲಾ ನಿರ್ದೇಶಕರು ಹಾಗೂ ಫಲಾನುಭವಿಗಳು ಪಾಲ್ಗೊಂಡಿದ್ದರು.