Thursday, November 19, 2026

ಪ್ರಾಯೋಗಿಕ ಆವೃತ್ತಿ

ಹಾಲಿನ ದರ ಹೆಚ್ಚಳಕ್ಕೆ ಆಗ್ರಹಿಸಿ ಡಿಸಿ ಕಚೇರಿ ಮುತ್ತಿಗೆ


  • ಹಾಲಿಗೆ ಸೂಕ್ತ ದರ ನಿಗದಿಗೆ ಭಾರತೀಯ ಕಿಸಾನ್ ಸಂಘ ಒತ್ತಾಯ

  • ರೈತರಿಗೆ ಕೂಡಲೇ ಸಾಲ ಮನ್ನಾಕ್ಕೆ ಆಗ್ರಹ

ಹೈನುಗಾರಿಕೆಯನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ರೈತರು ಉತ್ಪಾದನೆ ಮಾಡುವ ಹಾಲಿಗೆ ಸೂಕ್ತ ದರ ನಿಗದಿಗೆ ಮಾಡಬೇಕೆಂದು ಆಗ್ರಹಿಸಿ ಸೆ.13ರಂದು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿ ಕಚೇರಿಗಳಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಭಾರತೀಯ ಕಿಸಾನ್ ಸಂಘದ ಕರ್ನಾಟಕ ದಕ್ಷಿಣ  ಪ್ರಾಂತ ಪ್ರಧಾನ ಕಾರ್ಯದರ್ಶಿ ಹಾಡ್ಯ ರಮೇಶ್ ರಾಜು ಹೇಳಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಸ್ತುತ ಲೀಟರ್ ಹಾಲಿಗೆ ಕೇವಲ 27 ರೂ.ಗಳನ್ನು ನೀಡಲಾಗುತ್ತಿದೆ, ಈಗ ರೈತರು ಹಾಲು ಉತ್ಪಾದನೆ ಮಾಡಲು ಮಾಡುತ್ತಿರುವ ವೆಚ್ಚಗಿಂತ ಅತ್ಯಂತ ಕಡಿಮೆಯಾಗಿರುವುದರಿಂದ ರೈತರು ನಷ್ಟದಲ್ಲಿ ಯೇ ಹೈನುಗಾರಿಕೆ ನಡೆಸುತ್ತಿದ್ದಾರೆ ಎಂದು ದೂರಿದರು.

ಹಾಲಿನಿಂದ ಸುಮಾರು 50 ಕ್ಕೂ ಹೆಚ್ಚು ಉತ್ಪನ್ನಗಳನ್ನು ಮಾಡಿ ಒಕ್ಕೂಟಗಳು ಲಾಭಗಳಿಸುತ್ತಿವೆ, ಆದರೆ ಇದರ ಲಾಭ ರೈತರಿಗೆ ದೊರೆಯುತ್ತಿಲ್ಲ ಎಂದು ದೂರಿದರು.

ಲೀಟರ್ ಹಾಲಿಗೆ ಪ್ರಸ್ತುತ ತೆಲಂಗಾಣ , ಮಹಾರಾಷ್ಟ್ರದಲ್ಲಿ 50 ರೂ. ಹಾಗೂ ರಾಜಸ್ತಾನದಲ್ಲಿ 59 ರೂ.ಗಳನ್ನು ನೀಡುತ್ತಿದೆ, ಆದರೆ ರಾಜ್ಯದಲ್ಲಿ ಹಾಲಿನ ದರ ಅತ್ಯಂತ ಕಡಿಮೆ ಇದೆ.

ಹಾಲು ಒಕ್ಕೂಟವು ಸಹಕಾರಿ ಸಂಘಗಳಿಂದ 2 ರೂ. ಹೆಚ್ಚಿಗೆ ಕೊಟ್ಟು ಖರೀದಿ ಮಾಡುತ್ತಿದೆ, ಆಂದರೆ 29 ರೂ.ಗೆ ಖರೀದಿಸಿ, 40 ರಿಂದ 44 ರೂ.ಗೆ ಮಾರಾಟ ಮಾಡಿ ಲಾಭಗಳಿಸುತ್ತಿದೆ ಎಂದರು.

ಅರ್ಹ ರೈತರ ಸಾಲ ಮನ್ನಾ ಮಾಡಿ

2018ರ ರೈತರ ಸಾಲ ಮನ್ನಾ ಯೋಜನೆಯ ಪ್ರಕಾರ ಸಾವಿರಾರು ರೈತರು ಸಾಲ ಮನ್ನಾ ಸೌಲಭ್ಯ ಪಡೆಯಲು ಅರ್ಹರಿದ್ದರೂ, ಅವರಿಗೆ ಸಣ್ಣಪುಟ್ಟ ದಾಖಲಾತಿಗಳ ಲೋಪ ದೋಷಗಳಿಂದಾಗಿ ಸೌಲಭ್ಯ ನಿರಾಕರಿಸಲಾಗಿದ್ದು, ರೈತರು ಎಲ್ಲಾ ದಾಖಲಾತಿಗಳನ್ನು ನೀಡಿ ವರ್ಷಗಳೇ ಕಳೆದರೂ, ಅಂತಹ ರೈತರಿಗೆ ಕೂಡಲೇ ಸಾಲ ಮನ್ನಾ ಸೌಲಭ್ಯ ಒದಗಿಸಬೇಕೆಂದು ಆಗ್ರಹಿಸಿದರು.

ರಾಜ್ಯದಲ್ಲಿ ಒಟ್ಟು 40 ಸಾವಿರಕ್ಕೂ ಹೆಚ್ಚು ರೈತರು, ಮಂಡ್ಯ ಜಿಲ್ಲೆಯಲ್ಲಿ ಸುಮಾರು 3 ಸಾವಿರ ಕ್ಕೂ ಹೆಚ್ಚು ರೈತರು ಸಾಲ ವಂಚಿತರಾಗಿದ್ದು, ಅವರಿಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯೆ ವೀಣಾ ಸತೀಶ್, ಪ್ರಾಂತ ಉಪಾಧ್ಯಕ್ಷ ಪಿ.ಎಲ್.ಸೋಮಶೇಖರ್, ಸಂಘಟನಾ ಕಾರ್ಯದರ್ಶಿ ನಾರಾಯಣಸ್ವಾಮಿ, ರಾಜ್ಯ ಕಾರ್ಯಕಾರಿಣಿ ಸದಸ್ಯ ಪಣಕನಹಳ್ಳಿ ವೆಂಕಟೇಶ್, ಮಂಡ್ಯ ಜಿಲ್ಲಾಧ್ಯಕ್ಷ ಯಲಿಯೂರು ಆನಂದ್ ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ