Friday, November 20, 2026

ಪ್ರಾಯೋಗಿಕ ಆವೃತ್ತಿ

ಭಾರತದ ಧ್ವಜದ ಬಗ್ಗೆ ಬಿಜೆಪಿ-ಜೆಡಿಎಸ್ ನಾಯಕರು ಅರಿತುಕೊಳ್ಳಲಿ: ಗಣಿಗ ರವಿಕುಮಾರ್

ಭಾರತದ ಧ್ವಜಕ್ಕೆ ಎಷ್ಟು ಗೌರವ ಇದೆ ಎಂಬುದನ್ನು ಬಿಜೆಪಿ- ಜೆಡಿಎಸ್,ಆರ್ ಎಸ್ ಎಸ್ ಇನ್ನಾದರೂ ಅರಿತುಕೊಳ್ಳಲಿ.ದ್ವೇಷ ರಾಜಕಾರಣ ಬಿಟ್ಟು ಅಭಿವೃದ್ಧಿ ರಾಜಕಾರಣ ಮಾಡಿ ಎಂದು ಶಾಸಕ ಗಣಿಗ ರವಿಕುಮಾರ್ ಸಲಹೆ ನೀಡಿದರು.

ಮಂಡ್ಯ ತಾಲ್ಲೂಕಿನ ಆಲಕೆರೆ ಹಾಗೂ ಡಣಾಯಕನಪುರ ಗ್ರಾಮಗಳಲ್ಲಿ 2.18 ಕೋಟಿ ವೆಚ್ಚದಲ್ಲಿ ಜಲ ಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರಿನ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

50 ಲಕ್ಷ ರೂ.ವೆಚ್ಚದ ವಾಟರ್ ಟ್ಯಾಂಕ್,ಪೈಪ್ ಲೈನ್,ನಲ್ಲಿಗಳ ಸಂಪರ್ಕ ಮಾಡಲು 2.18.ಕೋಟಿ ವೆಚ್ಚವಾಗಲಿದೆ. ಇನ್ನು ಎರಡು ತಿಂಗಳಲ್ಲಿ ಮನೆ ಮನೆಗೆ ನೀರು ಸಿಗಲಿದೆ ಎಂದರು.

ಕಾಮಗಾರಿ ಉದ್ಘಾಟನೆಯ ಸಂದರ್ಭದಲ್ಲಿ ಆಲಕೆರೆಯ ರೈತ ಹಾಗೂ ಡಣಾಯಕಪುರದ ಮಹಿಳೆಯೊಬ್ಬರು ರಾಷ್ಟ್ರಧ್ವಜವನ್ನು ನನಗೆ ಈ ಸಂದರ್ಭದಲ್ಲಿ ನೀಡಿ ನಮ್ಮೂರನ್ನು ಅಭಿವೃದ್ಧಿ ಮಾಡಿ ಎಂದು ಹೇಳಿದ್ದು ಸಂತೋಷ ತಂದಿದೆ ಎಂದರು.

ಭಾರತದ ಧ್ವಜಕ್ಕೆ ಎಲ್ಲೆಡೆ ಗೌರವವಿದೆ.ಆದರೆ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ರಾಷ್ಟ್ರ ಧ್ವಜದ ಬಗ್ಗೆ ಉತ್ತಮ ಭಾವನೆ ಹೊಂದಿಲ್ಲ.ಇಂದು ಕೆರೆಗೋಡಿನಲ್ಲಿ ಭಗವಾ ಧ್ವಜದ ಹೆಸರಿನಲ್ಲಿ ಕೋಮುಗಲಭೆ ಸೃಷ್ಟಿಸಲು ಕುತಂತ್ರ ನಡೆಸಿದ್ದಾರೆ. ದ್ವೇಷದ ರಾಜಕಾರಣ ಬಿಟ್ಟು ಅಭಿವೃದ್ಧಿ ರಾಜಕಾರಣ ಮಾಡಲಿ ಎಂದು ಸಲಹೆ ನೀಡಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ