Saturday, November 21, 2026

ಪ್ರಾಯೋಗಿಕ ಆವೃತ್ತಿ

ಮದ್ದೂರು | ನಾಲಾ ಪೈಪ್ ಲೈನ್ ಪರಿಶೀಲಿಸಿದ ಶಾಸಕ ಉದಯ್

ಮದ್ದೂರು ತಾಲ್ಲೂಕು ಅಣ್ಣೂರು ಗ್ರಾಮದಲ್ಲಿ ರಸ್ತೆಯ ಮೇಲ್ಬಾಗದಲ್ಲಿ ಹಾಕಲಾಗಿದ್ದ ಸೂಳೆಕೆರೆ ನಾಲಾ ಪೈಲ್ ಲೈನ್ ಅನ್ನು ಶಾಸಕ ಕೆ.ಎಂ ಉದಯ್ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.

ಅಣ್ಣೂರು ವಿ.ಸಿ ನಾಲಾ ಬಯಲಿನಲ್ಲಿ ಸೂಳೆಕೆರೆ ನಾಲೆಗೆ ಅಡ್ಡಲಾಗಿ ಹಾಕಲಾಗಿದ್ದ ಪೈಲ್ ಲೈನ್ ತೆರವುಗೊಳಿಸಿ ನೀರನ್ನು ಸರಾಗವಾಗಿ ಹರಿಯುವಂತೆ ಮಾಡಿಕೊಡಬೇಕೆಂದು ಶಾಸಕರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದ್ದರು. ಮನವಿಯನ್ನು ಪುರಸ್ಕರಿಸಿದ ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ನೀರಾವರಿ ಇಲಾಖೆಯ ಇಇ ನಂಜುಂಡೇಗೌಡ, ಎಇಇ ಪ್ರಶಾಂತ್, ಎಇ ಅವಿನಾಶ್ ಅವರೊಂದಿಗೆ ಚರ್ಚಿಸಿ  ಪೈಪನ್ನು ತೆರವುಗೊಳಿಸಿ ರಸ್ತೆ ಸಮತಟ್ಟು ಮಾಡಿ ನಾಲೆಯನ್ನು ನಿರ್ಮಿಸಿವಂತೆ ಅಧಿಕಾರಿಗಳಿಗೆ ಸೂಚಿಸಿದರು.

ನಾಲೆ ಕಾಮಗಾರಿಗೆ ಈಗಾಗಲೇ 1 ಕೋಟಿ ರೂ. ಬಿಡುಗಡೆಗೊಂಡಿದ್ದು, ಅದರಲ್ಲಿ ಕಾಮಗಾರಿ ನಡೆಸುವುದಾಗಿ ಪೂರ್ವ ಯೋಜನೆಯ ನೀಲನಕ್ಷೆ ಮೂಲಕ ಅಧಿಕಾರಿಗಳು ಶಾಸಕರಿಗೆ ವಿವರಣೆ ನೀಡಿದರು.

ಇದೇ ವೇಳೆ ಸ್ಥಗಿತಗೊಂಡಿರುವ ಏತ ನೀರಾವರಿ ಯೋಜನೆಯನ್ನು ಪುನರ್ ಆರಂಭಿಸಿ ಅಣ್ಣೂರು ವಿಸಿ ನಾಲಾ ಬಯಲಿಗೆ ನೀರು ಒದಗಿಸಿಕೊಡುವಂತೆ ಗ್ರಾಮಸ್ಥರು ಶುಕ್ರವಾರ ಮಧ್ಯಾಹ್ನ 3.30 ರಲ್ಲಿ ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಭಾರತೀನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಎಸ್.ರಾಜೀವ್, ಗ್ರಾ.ಪಂ ಉಪಾಧ್ಯಕ್ಷ ಕೆ.ನಾಗರಾಜು, ಸದಸ್ಯ ಚಂದ್ರಶೇಖರ್, ಮಂಜುಕುಮಾರ್, ಪಿಣ್ಣ ಸತೀಶ್, ಮುಖಂಡರಾದ ಲೋಕೇಶ, ಚನ್ನಪ್ಪ, ಶೇಖರ್, ವಿಎಸ್ಎಸ್ಬಿಎನ್ ಅಧ್ಯಕ್ಷಪ್ರಸನ್ನ, ಬೋರೇಗೌಡ ಸೇರಿದಂತೆ ಹಲವರಿದ್ದರು

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ