ಮಂಡ್ಯ ಜಿಲ್ಲೆಯಲ್ಲಿ ನಿಮ್ಮೆಲ್ಲರ ಸಹಕಾರದಿಂದ ಅಲಯನ್ಸ್ ಸಂಸ್ಥೆ ಪ್ರತಿಯೊಬ್ಬರ ಹೃದಯದಲ್ಲೂ ಸ್ಥಾಪಿಸಲು ಶ್ರಮಿಸಿದ್ದೇನೆ , ನಮ್ಮ ಸಂಸ್ಥೆ ಈಗಾಲೇ 150ಕ್ಕೂ ಹೆಚ್ಚು ಸೇವಾ ಕಾರ್ಯಗಳನ್ನು ನನ್ನ ಅವಧಿಯಲ್ಲಿ ಮಾಡಿದ್ದೇನೆ ಎಂದು ಅಲೈ ಸಂಸ್ಥೆಯ ಜಿಲ್ಲಾ ರಾಜ್ಯಪಾಲ ಕೆ.ಟಿ.ಹನುಮಂತು ತಿಳಿಸಿದರು.

ಅಸೋಸಿಯೇಷನ್ ಆಫ್ ಅಲಯನ್ಸ್ ಕ್ಲಬ್ಸ್ ಇಂಟರ್ ನ್ಯಾಷನಲ್ ಜಿಲ್ಲೆ 268 ಎಸ್ ಮಂಡ್ಯ ವತಿಯಿಂದ ಮಂಡ್ಯ ನಗರದ ಕೆವಿಎಸ್ ಭವನದಲ್ಲಿ ನಡೆದ ಪ್ರಥಮ ವಾರ್ಷಿಕ ಜಿಲ್ಲಾ ಸಮ್ಮೇಳನದಲ್ಲಿ ಮಾತನಾಡಿದ ಅವರು, ಪರಿಸರ , ಅರೋಗ್ಯ , ಇನ್ನಿತರೇ ಒಳಗೊಂಡಂತೆ ಮುಖ್ಯವಾಗಿ ಸರ್ಕಾರಿ ಶಾಲೆಗಳ ಸಬಲೀಕರಕ್ಕೆ ಹೆಚ್ಚು ಒತ್ತು ಕೊಟ್ಟಿದ್ದೇವೆ , ಕ್ಯಾನ್ಸರ್ ರೋಗದ ಕುರಿತು ಜಾಗೃತಿ ಮೂಡಿಸಿ 23 ಕ್ಯಾನ್ಸರ್ ರೋಗಿಗಳಿಗೆ ಪೌಷ್ಟಿಕ ಆಹಾರದ ಕಿಟ್ ಮತ್ತು 150ಕ್ಕೂ ಹೆಚ್ಚು ಟಿಬಿ ರೋಗಿಗಳಿಗೆ ಪೌಷ್ಟಿಕ ಆಹಾರದ ಕಿಟ್ ನೀಡಿದ್ದೇವೆ ಹೀಗೆ ಹಲವಾರು ರೀತಿಯ ಸೇವಾ ಚಟುವಟಿಕೆಗಳನ್ನು ಮಾಡುತ್ತಿದ್ದೇವೆ ಎಂದರು.
ಕಳೆದ 11 ತಿಂಗಳ ಇಂದೇ ಪ್ರಾರಂಭವಾದ ನಮ್ಮ ಸಂಸ್ಥೆ ಜಿಲ್ಲೆ 268 ಎಸ್ ಹೆಮ್ಮರವಾಗಿ ಬೆಳೆಯುತ್ತಿದೆ , ಪ್ರಾರಂಭದಲ್ಲಿ 11 ಕ್ಲಬ್ ನಿಂದ ಸುಮಾರು 150 ಜನ ಸದಸ್ಯರಿದ್ದರು ಈಗ 26 ಕ್ಲಬ್ ನಿಂದ 500 ಜನ ಸದಸ್ಯರಿದ್ದಾರೆ ಮತ್ತು 7 ನೂತನ ಕ್ಲಬ್ ಪದಗ್ರಹಣವಾಗಲಿದೆ ಎಂದು ಹೇಳಿದರು.
ಅಂತರರಾಷ್ಟ್ರೀಯ ಅಸ್ಸೊಸಿಯೆಷನ್ ಆಫ್ ಅಲಯನ್ಸ್ ನಿರ್ದೇಶಕ ಅಲೈ ಡಾ.ನಾಗರಾಜು ವಿ ಬೈರಿ ಮಾತನಾಡಿ ,ಅಸ್ಸೊಸಿಯೆಷನ್ ಆಫ್ ಅಲಯನ್ಸ್ ಕ್ಲಬ್ಸ್ ಇಂಟರ್ ನ್ಯಾಷನಲ್ ಒಂದು ಜಿಲ್ಲೆ ಒಂದು ವರ್ಷದಲ್ಲಿ 200ಕ್ಕೂ ಹೆಚ್ಚು ಸೇವಾ ಚಟುವಟಿಕೆ ಮಾಡಿ , ಜಿಲ್ಲೆಯಲ್ಲಿ ಅಲಯನ್ಸ್ ಸಂಸ್ಥೆ ಇಷ್ಟು ದೊಡ್ಡ ಮಟ್ಟದಲ್ಲಿ ಹೆಸರು ಮಾಡಲು ಕೆ.ಟಿ.ಹನುಮಂತು ಅವರು ಕರಣ ಎಂದು ಶ್ಲಾಘಿಸಿದರು. ಜಿಲ್ಲಾ ರಾಜ್ಯಪಾಲರಾಗಿ ತಮ್ಮ ಆಡಳಿತವನ್ನು ಉತ್ತಮ ರೀತಿಯಲ್ಲಿ ನಿಭಾಹಿಸಿದ್ದಾರೆ , 25ಕ್ಕೂ ಹೆಚ್ಚು ಎಲ್ ಎಂ ಎಫ್ ಗಳಲ್ಲೂ ಕೊಟ್ಟು ಲೀಡರ್ ಶಿಪ್ ಮೆಡಲ್ ಕೂಡ ಪಡೆದುಕೊಂಡು ನಮ್ಮ ನೀರಿಕ್ಷೆಗೂ ಹೆಚ್ಚು ಕೆಲಸಗಳನ್ನು ಮಾಡಿದ್ದಾರೆ ಅವರಿಗೆ ಅಂತರರಾಷ್ಟ್ರೀಯ ಅಸ್ಸೊಸಿಯೆಷನ್ ಆಫ್ ಅಲಯನ್ಸ್ ಪರವಾಗಿ ಅಭಿನಂದನೆ ತಿಳಿಸಿದರು.
ಇದೆ ಸಂದರ್ಭದಲ್ಲಿ ಗಣ್ಯರು ಕಿರಗಂದೂರು ಹೊಲಿಗೆ ತರಬೇತಿ ಕೇಂದ್ರಕ್ಕೆ ಹೊಲಿಗೆ ಯಂತ್ರ ವಿತರಣೆ ಮಾಡಿದರು.
ಸಮ್ಮೇಳನದಲ್ಲಿ ಅಂತರರಾಷ್ಟ್ರೀಯ ಅಸ್ಸೊಸಿಯೆಷನ್ ಆಫ್ ಅಲಯನ್ಸ್ 2ನೇ ರಾಜ್ಯಪಾಲರಾದ ಅಲೈ ಶಾಸ್ತ್ರೀ , ಮಾಜಿ ನಿರ್ದೇಶಕ ಅಲೈ ದಿವಾಕರ್ , ಅಲೈ ಮುನಿಯಪ್ಪ , ಅಲೈ ಅಜಂತಾ ರಂಗಸ್ವಾಮಿ , ಅಲೈ ಮಾದೇಗೌಡ , ಅಲೈ ಶಶಿಧರ್ , ಅಲೈ ಚಂದ್ರಶೇಖರ್ , ಅಲೈ ರಾಕೇಶ್ ರಾಜ್ , ಅಲೈ ಅಪ್ಪಾಜಿ , ಅಲೈ ಮಂಜುನಾಥ್ , ಅಲೈ ನಾಗರಾಜು , ಅಲೈ ರತ್ನಮ್ಮ , ವಸಂತಮ್ಮ , ಲೋಕೇಶ್ ಸೇರಿದಂತೆ ಇನ್ನಿತ್ತರರು ಹಾಜರಿದ್ದರು.




