Friday, September 13, 2024

ಪ್ರಾಯೋಗಿಕ ಆವೃತ್ತಿ

ತಾಯಿ – ಮಕ್ಕಳ ಪತ್ತೆಗೆ ಒತ್ತಾಯ

ಕೆ‌.ಆರ್.ಪೇಟೆ ತಾಲ್ಲೂಕಿನ ಊಚನಹಳ್ಳಿ ಗ್ರಾಮದ ಹೆಚ್.ಎಂ.ರವಿ ಎಂಬುವರ ಪತ್ನಿ ಪಲ್ಲವಿ(24ವರ್ಷ), ಪುತ್ರಿಯರಾದ ಸಂಧ್ಯಾ(7ವರ್ಷ), ಹರ್ಷಿಣಿ(4ವರ್ಷ) ಎಂಬುವವರು ಜೂನ್.11ರಂದು ಮನೆಯಿಂದ ಕಾಣೆಯಾಗಿದ್ದು, ಇದೂವರೆವಿಗೂ ಪರಿಚಯಸ್ಥರು, ಬಂಧುಗಳು ಹಾಗೂ ಸ್ನೇಹಿತರ ಊರುಗಳಲ್ಲಿ ಹುಡುಕಿದರೂ ಸಹ ಪತ್ತೆಯಾಗಿರುವುದಿಲ್ಲ.ಕೂಡಲೇ ಪೋಲಿಸರು ನನ್ನ ಹೆಂಡತಿ, ಮಕ್ಕಳನ್ನು ಪತ್ತೆ ಮಾಡಿಕೊಡಬೇಕೆಂದು ರವಿ ಒತ್ತಾಯಿಸಿದರು.

ಪಲ್ಲವಿ ಗೋಧಿ ಮೈಬಣ್ಣ, ಗುಂಡುಮುಖ, ಸಾಧಾರಣ ಮೈಕಟ್ಟು, ಸುಮಾರು 4.5 ಅಡಿ ಎತ್ತರ ಇದ್ದಾರೆ. ಕೆಂಪು ಬಣ್ಣದ ಚೂಡಿದಾರ್ ಧರಿಸಿರುತ್ತಾರೆ. ಸಂಧ್ಯಾ ಹಳದಿ ಪ್ರಾಕ್, ಹರ್ಷಿಣಿ ನೇರಳೆ ಕಲರ್ ಪ್ರಾಕ್ ಬಟ್ಟೆ ಧರಿಸಿರುತ್ತಾಳೆ. ಇವರ ಸುಳಿವು ಸಿಕ್ಕವರು ತಮ್ಮ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಕೆ.ಆರ್.ಪೇಟೆ ಪಟ್ಟಣ ಪೊಲೀಸ್ ಠಾಣೆಗೆ ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ 08230-262248 ಅಥವಾ 9480804859 ಅಥವಾ 6363763553 ಮೊಬೈಲ್ ಸಂಖ್ಯೆಗಳಿಗೆ ಕರೆ ಮಾಡಿ ಮಾಹಿತಿ ನೀಡುವಂತೆ ಟೌನ್ ಪೊಲೀಸ್ ಇನ್ಸ್ಪೆಕ್ಟರ್ ದೀಪಕ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!