Friday, November 20, 2026

ಪ್ರಾಯೋಗಿಕ ಆವೃತ್ತಿ

ಕಾವೇರಿ ವಿಚಾರದಲ್ಲಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಲಿ: ಮುಕುಂದರಾಜ್

ಕಾವೇರಿ ವಿಚಾರದಲ್ಲಿ ಕರ್ನಾಟಕ ಮತ್ತು ತಮಿಳುನಾಡು ನಡುವೆ ಸಂಘರ್ಷ ನಡೆಯುತ್ತಿದ್ದು, ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಈ ವಿವಾದ ಬಗೆಹರಿಸುವ ಜವಾಬ್ದಾರಿ ವಹಿಸಲಿ ಎಂದು ಪ್ರಗತಿಪರ ಚಿಂತಕ, ಸಾಹಿತಿ ಎನ್. ಎಲ್. ಮುಕುಂದರಾಜ್ ಆಗ್ರಹಿಸಿದರು.

ಮಂಡ್ಯ ನಗರದ ಸರ್.ಎಂ. ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ಹೋರಾಟದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರ ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳಿಗೆ ಮಾತುಕತೆಯ ಮೂಲಕ ಒಂದು ನಿರ್ಣಯಕ್ಕೆ ಬನ್ನಿ ಎಂದು ತಿಳಿಸಬೇಕು. ಮಳೆ ಬರದ ಸಂಕಷ್ಟ ಪರಿಸ್ಥಿತಿಯಲ್ಲಿ ಬೇರೆ ರೀತಿಯ ನಿರ್ಣಯ ತೆಗೆದುಕೊಳ್ಳಬೇಕು ಎಂದು ಸೂಚಿಸಬೇಕೆಂದು ಒತ್ತಾಯಿಸಿದರು.

ಕೇಂದ್ರ ಸರ್ಕಾರ ಕಾವೇರಿ ವಿವಾದ ಬಗೆಹರಿಸುವ ಜವಾಬ್ದಾರಿ ತೆಗೆದುಕೊಳ್ಳಲು ಮಧ್ಯಪ್ರವೇಶ ಮಾಡಲೇಬೇಕಿದೆ. ಆದರೆ ಕೇಂದ್ರ ಮತ್ತು ತಮಿಳುನಾಡು ರಾಜಕೀಯ ಲಾಭ-ನಷ್ಟದ ಲೆಕ್ಕಾಚಾರದ ಹಿನ್ನೆಲೆಯಲ್ಲಿವೆ.ಆದ ಕಾರಣ ವಿವಾದವಾಗಿಯೇ ಉಳಿದಿದೆ. ಕನ್ನಡಿಗರಿಗೆ ತಮಿಳಿಗರಂತೆ ಪ್ರಾದೇಶಿಕ ಶ್ರೇಷ್ಠತೆ ಇಲ್ಲ. ಅವರು ನೀತಿಗಾಗಿ ಒಗ್ಗಟ್ಟಾಗುತ್ತಾರೆ.ನಮ್ಮವರು ದೇವರೇ ಮಳೆ ಸುರಿಸುವುದು ಎಂದರೆ ನಂಬುತ್ತಾರೆ.ಆದರೆ ಪಂಚಭೂತಗಳಿಂದ ನಿರ್ಮಾಣವಾಗಿರುವ ಮನುಷ್ಯ ನೀರೇ ನಮ್ಮ ಪಾಲಿನ ದೇವರು ಎಂಬ ಸತ್ಯ ನಂಬಬೇಕು. ಆದರೆ ನಮ್ಮ ಜನರನ್ನು ದೇವರು, ಜಾತಿ, ಧರ್ಮದ ಹೆಸರಿನಲ್ಲಿ ದಾರಿ ತಪ್ಪಿಸುತ್ತಿದ್ದಾರೆ ಎಂದರು.

ಬಂಗಾರಪ್ಪ ಅವರು ಮುಖ್ಯಮಂತ್ರಿ ಸ್ಥಾನ ಹೋದರೂ ಚಿಂತೆ ಇಲ್ಲ ಎಂದು ಕಾವೇರಿ ನೀರನ್ನು ಬಿಡುವುದೇ ಇಲ್ಲ ಎಂದು ಸುಗ್ರೀವಾಜ್ಞೆ ತಂದಿದ್ದರು. ಅದೇ ರೀತಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ತಮಿಳುನಾಡಿಗೆ ನೀರು ಬಿಡುವುದೇ ಇಲ್ಲ ಎಂಬ ನಿರ್ಣಯಕ್ಕೆ ಬರಬೇಕು. ಅವರು ಜೈಲಿಗೆ ಹೋದರೆ ಬಿಡಿಸಲು ಕನ್ನಡಿಗರು ಇದ್ದಾರೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಹಾಗೆಲ್ಲ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು.

ತಲಕಾಡಿನ ಗಂಗರು 96,000 ಕೆರೆಗಳನ್ನು ನಿರ್ಮಾಣ ಮಾಡಿದ್ದರು. ವಿಜಯನಗರದ ಅರಸರು, ಹೊಯ್ಸಳರು, ಮೈಸೂರು ಅರಸರು ಕೆರೆ-ಕಟ್ಟೆಗಳನ್ನು ನಿರ್ಮಾಣ ಮಾಡಿದ್ದಾರೆ.ಕಾವೇರಿ ನಮ್ಮದು. ಕಾವೇರಿ ನದಿಯ ನೀರನ್ನು ನಾವೇ ಹಿಡಿದಿಟ್ಟುಕೊಳ್ಳುವ ಕೆಲಸ ಮಾಡಬೇಕಾಗಿದೆ. ಸರ್ಕಾರ ಜನರ ಅಭಿಪ್ರಾಯಕ್ಕೆ ಮಣಿದು ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಇತಿಹಾಸ ತಜ್ಞ ಡಾ. ತಲಕಾಡು ಚಿಕ್ಕ ರಂಗೇಗೌಡ, ಗೌಡತಿಯರ ಸೇನೆಯ ರಾಜ್ಯಾಧ್ಯಕ್ಷ ರೇಣುಕಾ ಭಕ್ತರಹಳ್ಳಿ, ರೈತನಾಯಕಿ ಸುನಂದಾ ಜಯರಾಮ್, ಅಂಬುಜಮ್ಮ,ಕೆ.ಬೋರಯ್ಯ,ಮುದ್ದೇಗೌಡ,ಕನ್ನಡ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ್,ತುಳಸೀಧರ್ ಮತ್ತಿತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

1 COMMENT

  1. 28 ಎಂಪಿ ಪೈಕಿ 1 ಅನ್ನು ಹೊರತು ಪಡಿಸಿ ಉಳಿದೆಲ್ಲಾ 27 ಗುಳ್ಳೆ ನರಿಗಳು ತಿಂದಿದ್ದು ಅಜೀರ್ಣಗೊಂಡಿದ್ರೂ ಇನ್ನೂ ನಾಗಪುರದ ಚೆಡ್ಡಿಯೊಳಗೆ ಸೇರಿಕೊಂಡು ಉಣ್ಣುತ್ತಾ ಮೈ ಮರೆತಿವೆ…! ಇವಕ್ಕೆಲ್ಲಾ ಎಲ್ಲಿ ಗೊತ್ತಾಗಬೇಕು ಜೀರ್ಣಿಸಿಕೊಳ್ಳಲು ನೀರು ಕುಡಿಯಲೇ ಬೇಕು ಅನ್ನೋದು ??!!

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ