ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇ ಟೋಲ್ ದರವನ್ನು ತಿಂಗಳಲ್ಲಿ ಎರಡನೇ ಬಾರಿ ಹೆಚ್ಚಳ ಮಾಡಲಾಗಿದೆ.
ಏ.1ರಿಂದಲೇ ಪರಿಷ್ಕೃತ ದರ ವಸೂಲಿ ಅರಂಭವಾಗಲಿದೆ. ಕಾರು, ವ್ಯಾನ್, ಜೀಪ್’ಗಳ ಏಕಮುಖ ಟೋಲ್’ನ್ನು 135 ರಿಂದ 165 ರೂ.ಗೆ ಹೆಚ್ಚಿಸಲಾಗಿದೆ. ದ್ಬಿಮುಖ ಸಂಚಾರ ದರವು 205 ರಿಂದ 250 ರೂ.ಗೆ ಹೆಚ್ಚಿಸಲಾಗಿದೆ.
ಲಘು ವಾಹನಗಳು, ಮಿನಿ ಬಸ್’ಗಳ ಏಕಮುಖ ದರವು 220 ರಿಂದ 270 ರೂ.ಗೆ ಹೆಚ್ಚಿಸಲಾಗಿದೆ.
ಅದೇ ರೀತಿ ಎರಡು ಕಡೆಯ ಚಾಲನೆಗೆ 405 ರೂ. ನಿಗದಿಪಡಿಸಲಾಗಿದೆ. ಅಂದರೆ 75 ರೂ. ಹೆಚ್ಚಳವಾಗಿದೆ.
ಟ್ರಕ್, ಬಸ್, ಎರಡು ಆಕ್ಸಲ್ ವಾಹನಗಳ ಒಂದು ಕಡೆ ಸಂಚಾರಕ್ಕೆ 565 ರೂ.ಗೆ ಏರಿಕೆ ಅಂದರೆ 105 ರೂ. ಹೆಚ್ಚಳವಾಗಿದೆ.
ದ್ವಿಮುಖ ಸಂಚಾರಕ್ಕೆ 850 ರೂ. ನಿಗದಿಪಡಿಸಲಾಗಿದೆ.
3 ಆಕ್ಸಲ್ ವಾಣಿಜ್ಯ ವಾಹನಗಳ ಏಕಮುಖ ಸಂಚಾರ ದರ 615 ರೂ. ಅಂದರೆ 115 ರೂ. ಹೆಚ್ಚಿಸಿ , ದ್ವಿಮುಖ ಸಂಚಾರಕ್ಕೆ 225 ರೂ. ಹೆಚ್ಚಿಸಿ 925 ರೂ.ಗೆ ಹೆಚ್ಚಿಸಲಾಗಿದೆ.
ಬಾರಿ ವಾಹನಗಳ ಏಕಮುಖ ದರವು 165 ರೂ. ಹೆಚ್ಚಳವಾಗಿದ್ದು 885 ರೂ. ತೆರಬೇಕಾಗಿದೆ. ದ್ವಿಮುಖ ಸಂಚಾರಕ್ಕೆ 250 ರೂ. ಹೆಚ್ಚಿಸಿದ್ದು 1330 ರೂ. ಪಾವತಿಸಬೇಕಿದೆ.
7 ಮತ್ತು ಅದಕ್ಕಿಂತ ಹೆಚ್ಚಿನ ಆಕ್ಸಲ್ ವಾಹನಗಳ ದರವನ್ನು 200 ರೂ. ಹೆಚ್ಚಿಸಿದ್ದು 1080 ರೂ. ಪಾವತಿಸಬೇಕು.
ಇಂತಹ ವಾಹನಗಳ ದ್ವಿಮುಖ ಸಂಚಾರಕ್ಕೆ 305 ರೂ. ಹೆಚ್ಚಳವಾಗಿದ್ದು, 1620 ರೂ. ತೆರಬೇಕಾಗಿದೆ.
ಮೈಸೂರು – ಬೆಂಗಳೂರು ಎಕ್ಸಪ್ರೆಸ್ ವೇ ಆರಂಭವಾದ ಕೆಲವೇ ದಿನಗಳಲ್ಲಿ ಪರಿಷ್ಕೃತ ದರವನ್ನು ಜಾರಿ ಮಾಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಕಳೆದ ಒಂದು ತಿಂಗಳಿನಿಂದ ಸದಾ ಸುದ್ದಿಯಲ್ಲಿದೆ. ಈ ಹಿಂದೆ, ಈ ಮಾರ್ಗದಲ್ಲಿ ಸರ್ವಿಸ್ ರಸ್ತೆಗಳ ಸೌಲಭ್ಯ ನೀಡದೆ ದುಬಾರಿ ಟೋಲ್ ದರ ಸಂಗ್ರಹಿಸುತ್ತಿದ್ದ ಕಾರಣಕ್ಕೆ ಜನರು ಪ್ರತಿಭಟಿಸಿದ್ದರು. ಈಗ ಮತ್ತೆ ದರ ಹೆಚ್ಚಳ ಮಾಡಿರುವುದು ವಾಹನ ಸವಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.




