Sunday, November 22, 2026

ಪ್ರಾಯೋಗಿಕ ಆವೃತ್ತಿ

ನಾಗಮಂಗಲ ಪಿಎಲ್’ಡಿ ಬ್ಯಾಂಕ್ | 8 ಕಾಂಗ್ರೆಸ್ ಬೆಂಬಲಿತ, 6 ಜೆಡಿಎಸ್ ಬೆಂಬಲಿತ ನಿರ್ದೇಶಕರ ಆಯ್ಕೆ

ನಾಗಮಂಗಲ ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಚುನಾವಣಾ ಅಧಿಕಾರಿ ಸತೀಶ್ ಅವರ ನೇತೃತ್ವದಲ್ಲಿ ಇಂದು ನಡೆದ ನಾಗಮಂಗಲ ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿರ್ದೇಶಕರ ಚುನಾವಣೆಯ ಮತ ಎಣಿಕೆ ನಡೆದಿದ್ದು, ಎಣಿಕೆಯಲ್ಲಿ 8 ಕಾಂಗ್ರೆಸ್ ಬೆಂಬಲಿತ, 6 ಜನ ಜೆಡಿಎಸ್ ಬೆಂಬಲಿತ ನಿರ್ದೇಶಕರು ಸೇರಿ ಒಟ್ಟು 14 ಜನ ನಿರ್ದೇಶಕರು ಆಯ್ಕೆಯಾಗಿದ್ದಾರೆ.

ಕಾಂಗ್ರೆಸ್ ಪಕ್ಷದ ಬೆಂಬಲಿತರಾದ ನಾಗರಾಜು, ಆಶಾಲತಾ, ಮಂಜುನಾಥ್, ಬೈರೇಗೌಡ, ನೇತ್ರಾವತಿ, ರಾಜಣ್ಣ ಆಯ್ಕೆಯಾದರೆ, ಈ ಹಿಂದೆಯೇ ಅವಿರೋಧವಾಗಿ ತಿಮ್ಮರಾಯಿ ಗೌಡ ಮತ್ತು ಮುನಿಯಪ್ಪ ಆಯ್ಕೆಯಾಗಿದ್ದರು. ಜೆಡಿಎಸ್ ಬೆಂಬಲಿತರಾದ ಪುಟ್ಟಸ್ವಾಮಿಗೌಡ, ಗೋವಿಂದರಾಜು, ನಾಗರಾಜು, ಗೋವಿಂದರಾಜು, ಲೋಕೇಶ್ ಹಾಗೂ ಕೋಟಿ ರವಿ ಜಯಶೀಲರಾದರು.

ಎರಡು ಪಕ್ಷದ ಬೆಂಬಲಿತ ಅಭ್ಯರ್ಥಿಗಳು ತಮ್ಮ ಅಭ್ಯರ್ಥಿಗಳು ಗೆದ್ದ ಸಂಭ್ರಮದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮುಖಂಡರಿಗೆ ಜೈಕಾರ ಕೂಗಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ನೂತನವಾಗಿ ಆಯ್ಕೆಯಾದ ಕೋಟಿ ರವಿ ಮಾತನಾಡಿ, ಈ ಚುನಾವಣೆಯು ಸರ್ಕಾರ ಮತ್ತು ಜನಸಾಮಾನ್ಯರ ನಡುವೆ ನಡೆದಂತ ಒಂದು ಸಮರವೇ ಆಗಿತ್ತು. ಕಳೆದ 20 ವರ್ಷಗಳಿಂದ ಒಂದೇ ಪಕ್ಷವು ಆಡಳಿತ ಮಾಡಿಕೊಂಡು ಭದ್ರವಾಗಿ ಕುಳಿತಿದ್ದರು. ಈ ದಿನ ನಮ್ಮ ಪಕ್ಷದ ವತಿಯಿಂದ ಆರು ಜನ ನಿರ್ದೇಶಕರು ಆಯ್ಕೆಯಾಗಿದ್ದೇವೆ, ನನ್ನ ಈ ಗೆಲುವಿಗೆ ನಮ್ಮ ಮುಖಂಡರಾದ ಡೈಮಂಡ್ ಮೂರ್ತಿ ಮತ್ತು ಕಲ್ಲು ವೀರನ ಕೊಪ್ಪಲು ರಾಮಿ ಅವರು ಕಾರಣರಾಗಿದ್ದು ಅವರಿಗೆ ನಾನು ಧನ್ಯವಾದ ಅರ್ಪಿಸುವೆ ಎಂದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ