Tuesday, November 24, 2026

ಪ್ರಾಯೋಗಿಕ ಆವೃತ್ತಿ

ನಾಗಮಂಗಲ | ಜೂ.22 ಕ್ಕೆ ರಾಜ್ಯಮಟ್ಟದ ಕವಿ ಸಮ್ಮೇಳನ

ನಾಗಮಂಗಲ ಪಟ್ಟಣ ಸಮೀಪದ ಗೆಳತಿಗುಡ್ಡದ ಪರಿಸರದಲ್ಲಿ ಭಾನುವಾರ (ಜೂ.22) ರಾಜ್ಯಮಟ್ಟದ ಕವಿ ಸಮ್ಮೇಳನ ಆಯೋಜಿಸಲಾಗಿದೆ ಎಂದು ಗೆಳತಿಗುಡ್ಡ ಪರಿಸರಕೂಟದ ಸದಸ್ಯರು ತಿಳಿಸಿದ್ದಾರೆ.

ಗೆಳತಿಗುಡ್ಡ ಪರಿಸರಕೂಟ, ಕನ್ನಡ ಸಂಘ, ಸಾಹಿತ್ಯ ಚಾವಡಿ ವತಿಯಿಂದ ಕಾವ್ಯರಚನೆ ಉತ್ತೇಜಿಸಲು ಕಾರ್ಯಕ್ರಮ ಆಯೋಜಿಸಲಾಗಿದ್ದು, ಆಯ್ಕೆಯಾದ ಕವಿಗಳಿಂದ ಕವಿಗೋಷ್ಠಿ ಮತ್ತು ಸಂವಾದ ಇರಲಿದೆ. ಅಂದು ಬೆಳಿಗ್ಗೆ 9.30ರಿಂದ ಸಂಜೆ 5ಗಂಟೆವರೆಗೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಆಯ್ಕೆಯಾದ ಕವಿಗಳಿಗೆ ಪ್ರಯಾಣ ವೆಚ್ಚವನ್ನು ನೀಡಲಾಗುವುದು’ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಭಾಗವಹಿಸುವ ಕವಿಗಳು ಮೂರು ಕವನಗಳ ಪ್ರತಿಗಳನ್ನು ಕಳುಹಿಸಬೇಕು. ಅಂತಿಮವಾಗಿ 40 ಮಂದಿ ಆಯ್ಕೆ ಆಗಲಿದ್ದಾರೆ. ಕವನಗಳನ್ನು ಸ್ವೀಕರಿ ಸಲು ಮೇ.31ಕೊನೆಯ ದಿನ. ಕವನಗಳನ್ನು [email protected] ಅಥ ವಾ [email protected] ಗೆ ಇಮೇಲ್ ಮಾಡಬಹುದು. ಜೀರಹಳ್ಳಿ ರಮೇಶಗೌಡ, ವಕೀಲರು, ಬಿಂಡಿಗನವಿಲೆ ರಸ್ತೆ, ಟಿ.ಬಿ. ಬಡಾವಣೆ, ನಾಗಮಂಗಲ ತಾಲೂಕು, ಮಂಡ್ಯ ಜಿಲ್ಲೆ- 571432 ಕಳುಹಿಸಬಹುದು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ