ಕಾರ್ಯನಿರತ ಪತ್ರಕರ್ತರ ಸಂಘ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕು ಘಟಕದ ನೂತನ ಆಡಳಿತ ಮಂಡಳಿ ರಚನೆ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿದೆ.
ನಾಗಮಂಗಲ ತಾಲೂಕು ಘಟಕದ ಸದಸ್ಯರೆಲ್ಲರ ಒಮ್ಮತದಿಂದಾಗಿ ಎಲ್ಲ ಪದಾಧಿಕಾರಿ ಹುದ್ದೆಗೂ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಕೆ.ಸೀತಾರಾಮು, ಪ್ರಧಾನ ಕಾರ್ಯದರ್ಶಿಯಾಗಿ ಎನ್.ಮಹೇಶ್, ಉಪಾಧ್ಯಕ್ಷರಾಗಿ ಚನ್ನಕೇಶವ, ಕಾರ್ಯದರ್ಶಿಯಾಗಿ ಪಿ.ಎನ್.ಶ್ರೀನಿವಾಸ್ ಹಾಗೂ ಖಜಾಂಚಿಯಾಗಿ ಬಿ.ಆರ್.ಕುಮಾರ್ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ಜಿಲ್ಲಾ ಘಟಕದ ಕಾರ್ಯದರ್ಶಿ ಎನ್. ನಾಗರಾಜು(ನಾಗೇಶ್) ಕರ್ತವ್ಯ ನಿರ್ವಹಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಕೆರಗೋಡು ಸೋಮಶೇಖರ್, ರಾಜ್ಯ ಸಮಿತಿ ಸದಸ್ಯ ಮಂಜುನಾಥ್, ಜಿಲ್ಲಾ ಘಟಕದ ಉಪಾಧ್ಯಕ್ಷ ಕೆ.ಸಿ.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಶಶಿಧರ್, ಖಜಾಂಚಿ ನಂಜುಂಡ ಉಪಸ್ಥಿತರಿದ್ದರು.




