ಸಮಸ್ಯೆ ನಕ್ಸಲಿಸಂ ಅಲ್ಲ.
ನಕ್ಸಲಿಸಂ ದಮನಿತ ಜನರು ಕಂಡುಕೊಂಡಿರುವ ಒಂದು ಸಮಸ್ಯಾತ್ಮಕ ಪರಿಹಾರ.
ಪ್ರಜಾತಂತ್ರದ ಹುಸಿ ಹುಟ್ಟಿಸಿರುವ ಅಸಹಾಯಕ ಆಯ್ಕೆ.
ವ್ಯವಸ್ಥೆಯು ಕಾನೂನಿನ ಹೆಸರಲ್ಲಿ ದಮನಿತರ ಮೇಲೆ ಹರಿಬಿಟ್ಟಿರುವ ಉಳ್ಳವರ ಸರ್ವಾಧಿಕಾರಗಳಿಂದ ಉದ್ಭವಿಸಿರುವ ಅನಪೇಕ್ಷಿತ ಅನಿವಾರ್ಯ….
ಹೀಗಾಗಿ…
ಪರಿಹಾರ ನಕ್ಸಲರ ಕೊಲೆಯಲ್ಲ.
ಹತ್ತಿಕ್ಕಬೇಕಿರುವುದು ನಕ್ಸಲಿಸಮ್ ನಲ್ಲ.
ದಮನವಿರುವ ತನಕ ಬಂಡಾಯಗಳನ್ನು ಹತ್ತಿಕ್ಕಲಾಗುವುದಿಲ್ಲ…
ಆದ್ದರಿಂದ..
ಪರಿಹಾರವಿರುವುದು ದಮನ, ತಾರತಮ್ಯ, ಬಡತನಗಳ ನಿವಾರಣೆಯಲ್ಲಿ….
ಮತ್ತು
ಸಮಾಜ, ರಾಜಕೀಯ ಮತ್ತು ಆರ್ಥಿಕತೆಗಳ ನೈಜ ಪ್ರಜತಾಂತ್ರಿಕರಣದಲ್ಲಿ..
ಆಗ ನಕ್ಸಲರು ಅಪ್ರಸ್ತುತರಾಗುತ್ತಾರೆ…
ನಕ್ಸಲರನ್ನು ಅಪ್ರಸ್ತುತಗೊಳಿಸೋಣ..
– ಶಿವಸುಂದರ್




