ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್ ಶುಚಿಗೊಳಿಸುವ ಕಾರ್ಮಿಕರಿಗೆ (SSWs) ಮತ್ತು ನಾಗರಿಕರಿಗೆ ಅರಿವು ಮೂಡಿಸುವ ಉದ್ದೇಶದಿಂದ ಮಂಡ್ಯ ನಗರಸಭೆ ವತಿಯಿಂದ ‘ನಮಸ್ತೆ ದಿನ’ ಕಾರ್ಯಕ್ರಮ ನಡೆಯಿತು.
ದೇಶ ವ್ಯಾಪ್ತಿಯಾಗಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದೊಂದಿಗೆ ಜಂಟಿಯಾಗಿ ರಾಷ್ಟ್ರೀಯ ಯಾಂತ್ರೀಕೃತ ನೈರ್ಮಲ್ಯ ಪರಿಸರ ವ್ಯವಸ್ಥೆ (ನಮಸ್ತೆ) ಯೋಜನೆಯನ್ನು 2023 ರಲ್ಲಿ ಪ್ರಾರಂಭಿಸಿದೆ.

ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್ ಕಾರ್ಮಿಕರ (SSWs) ಸುರಕ್ಷತೆ ಮತ್ತು ಘನತೆಯನ್ನು ಕಾಪಾಡುವುದು ಮತ್ತು ನೈರ್ಮಲ್ಯ ಶುಚಿಗೊಳಿಸುವ ಕೆಲಸದಲ್ಲಿ ಸಾವುಗಳಾಗುವುದನ್ನು ತಡೆಗಟ್ಟುವುದು ಈ ಯೋಜನೆಯ ಉದ್ದೇಶವಾಗಿದೆ. ಇದಲ್ಲದೆ, ಘನತ್ಯಾಜ್ಯ ನಿರ್ವಹಣೆಯಲ್ಲಿ ತೊಡಗಿರುವ ಚಿಂದಿ/ತ್ಯಾಜ್ಯ ಆಯುವವರನ್ನು ನಮಸ್ತೆ ಯೋಜನೆಯಡಿ ಸೇರಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ನಗರಸಭೆ ಪರಿಸರ ಅಭಿಯಂತರ ರುದ್ರೇಗೌಡ, ಆರೋಗ್ಯ ಪರಿವೀಕ್ಷಕ ಚೆಲುವರಾಜು, ಕೆ.ಹೆಚ್.ಮೂರ್ತಿ, ಅಶ್ವಥ್ ಹಾಗೂ ಪೌರಾಕಾರ್ಮಿಕರು ಉಪಸ್ಥಿತರಿದ್ದರು..




