Wednesday, November 18, 2026

ಪ್ರಾಯೋಗಿಕ ಆವೃತ್ತಿ

ನಂದಿನಿ ಮುಳುಗಿಸಿ ”ಅದಾನಿ ಕೈಗೆ ಕೊಡಲು” 2021ರಿಂದಲೇ ಬಿಜೆಪಿ ಪ್ಲಾನ್ !

ಸಹಕಾರಿ ತತ್ವದಡಿ ಬೆಳೆದು ನಿಂತಿರುವ ದೇಶದ ಹಾಲು ಒಕ್ಕೂಟಗಳನ್ನು ವಶಪಡಿಸಿಕೊಂಡು ‘ಅಮುಲ್’ ಮೂಲಕ ಅದಾನಿಗೆ ಕೈಗೆ ಕೊಡಲು ನಡೆಸಿರುವ ಸಂಚು 2021 ರಿಂದಲೇ ಆರಂಭವಾಗಿ ಈಗ ಇಲ್ಲಿಗೆ ಬಂದು ನಿಂತಿದೆ. ಕೆಎಂಎಫ್ ‘ನಂದಿನಿ’ಯನ್ನು ಮುಳುಗಿಸುವ ‘ಕ್ರೋನಾಲಜಿ’ ಅರ್ಥ ಮಾಡಿಕೊಳ್ಳಿ ಎಂದು ಕಾಂಗ್ರೆಸ್ ಕನ್ನಡಿಗರನ್ನು ಎಚ್ಚರಿಸಿದೆ.

“>

ಬಿಜೆಪಿಯವರು ಈಗ ನಮ್ಮ ನಂದಿನಿ ಸಂಸ್ಥೆ ಮೇಲೆ ಕಣ್ಣಿಟ್ಟಿದ್ದು, ಅದನ್ನು ನುಂಗಲು ಕಾಯುತ್ತಿದ್ದಾರೆ. ನಂದಿನಿ ಉತ್ಪನ್ನ ತನ್ನ ಗುಣಮಟ್ಟದಿಂದ ದೇಶ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಗಮನ ಸೆಳೆದಿದೆ. ಕೆಎಂಎಫ್ ನಲ್ಲಿ ಯಾವ ಲೋಪ ಕಂಡು ಕೇಂದ್ರ ಸರ್ಕಾರ ನಂದಿನಿ ಮೇಲೆ ದಬ್ಬಾಳಿಕೆ ನಡೆಸುತ್ತಿದೆ? ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

ರಾಜ್ಯದಲ್ಲಿ 28 ಲಕ್ಷ ರೈತ ಕುಟುಂಬಗಳು ಕ್ಷೀರ ಕ್ಷೇತ್ರವನ್ನು ಅವಲಂಬಿಸಿವೆ. ಕೆಎಂಎಫ್ ವಿಚಾರದಲ್ಲಿ ಇಂತಹ ಷಡ್ಯಂತ್ರ ಏಕೆ? ಬೇರೆ ರಾಜ್ಯದ ಸಹಕಾರ ಸಂಸ್ಥೆ ಕನ್ನಡಿಗರು ಕಟ್ಟಿ ಬೆಳೆಸಿರುವ ನಂದಿನಿ ಸಂಸ್ಥೆಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾ? ಎಂದು ಕಾಂಗ್ರೆಸ್ ನಾಯಕ ಡಿ.ಕೆ.ಸುರೇಶ್ ಕಿಡಿಕಾರಿದ್ದಾರೆ.

 

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ