ನಂದಿನಿ ಹಾಲು ಗುಣಮಟ್ಟದ ಕಾರಣದಿಂದ ದೇಶದಲ್ಲಿ ಅಷ್ಟೇ ಅಲ್ಲದೆ ಹೊರ ದೇಶಗಳಿಗೂ ರಫ್ತು ಮಾಡಲಾಗುತ್ತಿದೆ. ಹಾಲು ಉತ್ಪಾದನೆಯಲ್ಲಿ ಕರ್ನಾಟಕ, ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿದೆ. ನಂದಿನಿ ಹಾಲು ಹಾಗೂ ಅದರ ಉತ್ಪನ್ನಗಳು ಕಡಿಮೆ ಬೆಲೆಯಲ್ಲಿ ದೊರೆಯುತ್ತವೆ. ಪ್ರತಿಯೊಬ್ಬರು ನಂದಿನಿ ಉತ್ಪನ್ನಗಳನ್ನು ಬಳಸಿದರೆ ಪರೋಕ್ಷವಾಗಿ ರೈತರಿಗೆ ಬೆಂಬಲ ನೀಡಿದಂತಾಗುತ್ತದೆ ಎಂದು ಮನ್ಮುಲ್ ನಿರ್ದೇಶಕ ಡಾಲು ರವಿ ಹೇಳಿದರು
ಕೆ.ಆರ್.ತಾಲೂಕಿನ ಸಾಸಲು, ಚೌಡಸಮುದ್ರ, ಗುಬ್ಬಹಳ್ಳಿ ಹಾಲು ಉತ್ಪಾದಕ ಸಹಕಾರ ಸಂಘದ ಆವರಣದಲ್ಲಿ ಆಯೋಜಿಸಿದ್ದ 2022-23ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಹಕಾರ ಸಂಘಗಳು ಸದಾ ರೈತರ ಶ್ರೇಯೋಭಿವೃದ್ಧಿಗೆ ಸದಾ ಶ್ರಮಿಸುತ್ತಿದ್ದು, ರೈತರು ಗುಣ ಮಟ್ಟದ ಹಾಲು ಪೂರೈಸುವುದರ ಮುಖಾಂತರ ಸಹಕಾರ ಸಂಘಗಳು ಲಾಭದಾಯವಾಗಿರುವಂತೆ ನೋಡಿಕೊಳ್ಳಬೇಕು ಎಂದರು.
ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಹೆಚ್ಚಿನ ಬೆಲೆ ನೀಡಿ ರೈತರಿಂದ ಹಾಲು ಖರೀದಿ ಮಾಡುತ್ತಿದ್ದು, ಹಸುಗಳಿಗೆ ತಪ್ಪದೇ ಜೀವ ವಿಮೆ ಮಾಡಿಸಿ ಹಾಗೂ ರೈತರಿಗಾಗಿ ರೈತ ಕಲ್ಯಾಣ ಟ್ರಸ್ಟ್ ನಡಿ ಒಂದು ಲಕ್ಷದ ವರೆಗೆ ಜೀವ ವಿಮೆ ಸೌಲಭ್ಯವಿದ್ದು, ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಬೇಕು, ಹಸುವಿನ ಕೆಚ್ಚಲಿನ ಮೇಲ್ಬಾಗದಲ್ಲಿ ಕೊಬ್ಬಿನ ಅಂಶ ಶೇಕರವಾಗಿದ್ದು ಪೂರ್ಣ ಪ್ರಮಾಣದಲ್ಲಿ ಹಾಲನ್ನು ಹಿಂಡಬೇಕು ಮತ್ತು ಡೈರಿಗೆ ಸ್ಟೀಲ್ ಕ್ಯಾನಿನ ಮುಖಾಂತರ ಹಾಲು ಪೂರೈಕೆ ಮಾಡಬೇಕೆಂದು ಉತ್ಪಾದಕರಲ್ಲಿ ಹರಿವು ಮೂಡಿಸಿ, ಎಸ್.ಎಸ್.ಎಲ್.ಸಿ,
ಪಿ.ಯು.ಸಿ ನಲ್ಲಿ ಅತೀ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಮತ್ತು ಸಂಘಕ್ಕೆ ಅತೀ ಹೆಚ್ಚು ಹಾಲು ಸರಬರಾಜು ಮಾಡಿದ ಉತ್ಪಾದಕರಿಗೆ ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮಾರ್ಗ ವಿಸ್ತರಣಾಧಿಕಾರಿಗಳಾದ ಗುರುರಾಜ್ ಸುರಗಿಹಳ್ಳಿ, ಬಿ.ಸಿ.ಮಧು ಈ ವರ್ಷದ ಆಯ್ಯವ್ಯಯ ಮತ್ತು ಮುಂದಿನ ವರ್ಷದ ಬಜೆಟ್ನ್ನು ಮಂಡಿಸಿದರು.
ಈ ಸಂದರ್ಭದಲ್ಲಿ ಗುಬ್ಬಹಳ್ಳಿ ಹಾಲು ಉತ್ಪದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ವಿಶಾಲಾಕ್ಷಿ, ಉಪಾಧ್ಯಕ್ಷೆ ಪಾರ್ವತಮ್ಮ, ನಿರ್ದೇಶಕರಾದ ಪಾರ್ವತಮ್ಮ, ಸರೋಜಮ್ಮ, ಗೌರಮ್ಮ, ಭಾಗ್ಯಮ್ಮ, ರಾಜಮ್ಮ, ಪಾರ್ವತಮ್ಮ, ಮಹದೇವಮ್ಮ, ಅನಿತಾ, ಮಂಜುಳ, ಕಾರ್ಯದರ್ಶಿ ಹರ್ಷಿತ, ಹಾಲು ಪರೀಕ್ಷಕಿ ರಾಧಮ್ಮ, ಸಹಾಯಕಿ ಇಂದ್ರಮ್ಮ, ಚೌಡಸಮುದ್ರ ಹಾಲು ಉತ್ಪದಕರ ಸಹಕಾರ ಸಂಘದ ಅಧ್ಯಕ್ಷ ಶಂಭಪ್ಪ, ಉಪಾಧ್ಯಕ್ಷೆ ರತ್ನಮ್ಮ ಉಪಸ್ಥಿತರಿದ್ದರು.




