ಹಬ್ಬಕ್ಕೆ ಹಸುಗಳನ್ನು ತೊಳೆಯಲು ಕೆರೆ ಹೋದ ಮೂವರು ನೀರುಪಾಲಾದ ದುರಂತ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕಾಮಳ್ಳಿಯಲ್ಲಿ ಇಂದು ನಡೆದಿದೆ.
ಮುದ್ದೇಗೌಡ (48), ಬಸವೇಗೌಡ (45), ವಿನೋದ್ (17) ಮೃತಪಟ್ಟರು.
ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ವಿನೋದ್ ಹಸುಗಳನ್ನು ತೊಳೆಯಲು ಕೆರೆಗೆ ಹೋಗಿದ್ದ ಸಂದರ್ಭದಲ್ಲಿ ವಿನೋದ್ ಎಂಬ ಯುವಕನ್ನು ಹಸುವು ಹಗ್ಗದ ಸಮೇತ ಕೆರೆಯ ಒಳಕ್ಕೆ ಎಳೆದೊಯ್ದಿದೆ. ಆ ಸಂದರ್ಭದಲ್ಲಿ ನೀರಿನಲ್ಲಿ ಮುಳುಗುತ್ತಿದ್ದ ವಿನೋದ್ ಅವರನ್ನು ಕಾಪಾಡಲು ಮುದ್ದೇಗೌಡ ಹಾಗೂ ಬಸವೇಗೌಡ ಕೆರೆಗೆ ಇಳಿದರು. ಆದರೆ ಅವರಿಗೂ ಈಜು ಬಾರದ ಕಾರಣ ಮೂವರೂ ನೀರಿನಲ್ಲಿ ಮುಳುಗಿ ಅಸುನೀಗಿದ್ದಾರೆ.
ಈ ದುರಂತದ ನಂತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




