Tuesday, November 24, 2026

ಪ್ರಾಯೋಗಿಕ ಆವೃತ್ತಿ

ಕೆ.ಆರ್.ಪೇಟೆ| ಪುರಸಭೆ ಅಧ್ಯಕ್ಷರಾಗಿ ನಟರಾಜ್ ಅವಿರೋಧ ಆಯ್ಕೆ

ಕೆ.ಆರ್.ಪೇಟೆ ಪುರಸಭೆಯ ನೂತನ ಅಧ್ಯಕ್ಷರಾಗಿ ಬಿಜೆಪಿ ಯುವ ಮುಖಂಡ ಎನ್. ನಟರಾಜ್ ಸೋಮವಾರ  ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ .

ಪುರಸಭೆ ಅಧ್ಯಕ್ಷೆ ಮಹಾದೇವಿ ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಸದಸ್ಯ ಎನ್.ನಟರಾಜು ಅವರನ್ನು ಹೊರತುಪಡಿಸಿ ಬೇರೆ ಯಾರೂ ನಾಮಪತ್ರವನ್ನು ಸಲ್ಲಿಸದ ಕಾರಣ ಚುನಾವಣಾಧಿಕಾರಿಗಳಾದ ತಹಶೀಲ್ದಾರ್ ನಿಸರ್ಗಪ್ರಿಯ ನಟರಾಜು ಅವರ ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು.

ನೂತನ ಅಧ್ಯಕ್ಷ ಎನ್ ನಟರಾಜು ಮಾತನಾಡಿ, ಕೆ ಆರ್ ಪೇಟೆ ಪುರಸಭೆಯ ಅಧ್ಯಕ್ಷರನ್ನಾಗಿ ಬಿಜೆಪಿ ಸದಸ್ಯನಾದ ನನ್ನನ್ನು ಪಕ್ಷಾತೀತವಾಗಿ ಸದಸ್ಯರು ಅವಿರೋಧವಾಗಿ ಆಯ್ಕೆ ಮಾಡಿ, ಪಟ್ಟಣದ ಜನತೆಯ ಸೇವೆ ಮಾಡಲು ಅವಕಾಶ ಕಲ್ಪಿಸಿ ಕೊಟ್ಟಿದ್ದಾರೆ. ಕೆ ಆರ್ ಪೇಟೆ ಪಟ್ಟಣವನ್ನು ಜಿಲ್ಲೆಯಲ್ಲಿಯೇ ಮಾದರಿ ಪಟ್ಟಣವನ್ನಾಗಿ ಅಭಿವೃದ್ಧಿಪಡಿಸಲು ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ಹೇಳಿದರು.

ನೂತನ ಅಧ್ಯಕ್ಷ ಹಾಗೂ ಆಡಳಿತ ಮಂಡಳಿಯ ಸದಸ್ಯರನ್ನು ಅಭಿನಂದಿಸಿ ಮಾತನಾಡಿದ ಮಾಜಿ ಸಚಿವ ನಾರಾಯಣಗೌಡ ಕೆ.ಆರ್. ಪೇಟೆ ಪಟ್ಟಣದ ಸಮಗ್ರವಾದ ಅಭಿವೃದ್ಧಿಗಾಗಿ ನೂರಾರು ಕೋಟಿ ರೂ ವಿಶೇಷ ಅನುದಾನವನ್ನು ನಾನು ಸಚಿವನಾಗಿದ್ದಾಗ ಬಿಡುಗಡೆ ಮಾಡಿಸಿ ತಂದಿದ್ದೇನೆ. ಕೆ ಆರ್ ಪೇಟೆ ಪಟ್ಟಣದ ಅಭಿವೃದ್ಧಿಗೆ ಸದಸ್ಯರು ಪಕ್ಷಾತೀತವಾಗಿ ಕೆಲಸ ಮಾಡಬೇಕೆಂದರು.

ಪುರಸಭೆಯ ಸದಸ್ಯರಾದ ಶೋಭಾದಿನೇಶ್, ಶುಭಾ ಗಿರೀಶ್, ಪದ್ಮರಾಜು, ಶಾಮಿಯಾನ ತಿಮ್ಮೇಗೌಡ, ಮಹಾದೇವಿ, ಬಸ್ ಸಂತೋಷ್ ಕುಮಾರ್, ರವೀಂದ್ರ ಬಾಬು, ಕೆ. ಎಸ್.ಪ್ರಮೋದ್ ಕುಮಾರ್, ಹೆಚ್.ಡಿ.ಅಶೋಕ್, ಹೆಚ್. ಆರ್.ಲೋಕೇಶ್, ಪ್ರವೀಣ್ ಶೆಟ್ಟಿ, ಕಲ್ಪನಾದೇವರಾಜು, ಪ್ರೇಮಕುಮಾರ್, ಕೆ.ಸಿ. ಮಂಜುನಾಥ್, ಉಪಾಧ್ಯಕ್ಷೆ ಗಾಯತ್ರಿಸುಬ್ಬಣ್ಣ ಸೇರಿದಂತೆ 14 ಸದಸ್ಯರು ಒಂದು ಗುಂಪಾಗಿ ಅಧ್ಯಕ್ಷರ ಪರವಾಗಿ ಬೆಂಬಲ ನೀಡಿದರು.

ಪುರಸಭೆ ಮಾಜಿ ಅಧ್ಯಕ್ಷ ಕೆ.ಬಿ.ಮಹೇಶ್ ನೇತೃತ್ವದಲ್ಲಿ ಇಂದ್ರಾಣಿ ವಿಶ್ವನಾಥ್, ಕಮ್ಮರ್ ಬೇಗಮ್, ಗಿರೀಶ್, ಸುಗುಣರಮೇಶ್, ಸೌಭಾಗ್ಯಉಮೇಶ್, ಪಂಕಜಪ್ರಕಾಶ್, ಸೇರಿದಂತೆ ಮತ್ತೊಂದು ಗುಂಪಾಗಿರುವ 9 ಸದಸ್ಯರು ಪ್ರತ್ಯೇಕವಾಗಿ ನಟರಾಜ್ ಅವರನ್ನು ಬೆಂಬಲಿಸಿ ಅಭಿನಂದಿಸಿದರು. ಅಧ್ಯಕ್ಷರ ಚುನಾವಣೆಯಲ್ಲಿ ಮತದಾನದ ಹಕ್ಕನ್ನು ಹೊಂದಿದ್ದ ಶಾಸಕ ಎಚ್‌.ಟಿ.ಮಂಜು ಹಾಗೂ ಲೋಕಸಭಾ ಸದಸ್ಯೆ ಸುಮಲತಾ ಅಂಬರೀಶ್ ಮತದಾನಕ್ಕೆ ಗೈರುಹಾಜರಾಗಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ