ನಮ್ಮ ದೇಶದಲ್ಲಿ ಯಥೇಚ್ಛವಾಗಿ ನೈಸರ್ಗಿಕ ಸಂಪನ್ಮೂಲವಿದ್ದು,
ಪ್ರತಿಯೊಬ್ಬ ನಾಗರಿಕರೂ ಜಲ ಸಂಪನ್ಮೂಲ ಸೇರಿದಂತೆ ನೈಸರ್ಗಿಕ ಸಂಪನ್ಮೂಲಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ನಿವೃತ್ತ ಯೋಧ ಶಿವಕುಮಾರ್ ಕರೆ ನೀಡಿದರು.
ನಾಗಮಂಗಲ ತಾಲ್ಲೂಕಿನ ದೊಡ್ಡಬಾಲ ಗ್ರಾ.ಪಂ.ನ ಬೋನಗೆರೆ ಗ್ರಾಮದಲ್ಲಿ ‘ಮಿಷನ್ ಅಮೃತ ಸರೋವರ’ ಅಭಿಯಾನದಡಿ ಅಭಿವೃದ್ಧಿ ಪಡಿಸಿರುವ ಕೆರೆಯ ಬಳಿ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ನೀರು ಸೇರಿದಂತೆ ಇತರೆ ನೈಸರ್ಗಿಕ ಸಂಪನ್ಮೂಲಗಳ ಮಿತ ಬಳಕೆಯಿಂದ ಮುಂದಿನ ಪೀಳಿಗೆಗೂ ಸಂಪನ್ಮೂಲಗಳನ್ನು ಉಳಿಸಲು ಸಾಧ್ಯ.ಆ ಮೂಲಕ ದೇಶದ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಕಾಳಜಿ ವ್ಯಕ್ತಪಡಿಸಿದರು.
ಇದೇ ವೇಳೆ ಕೆರೆಗೆ ಬಾಗಿನ ಅರ್ಪಿಸಿ, ಯೋಧ ಶಿವಕುಮಾರ್ ಅವರನ್ನು ಸನ್ಮಾನಿಸಲಾಯಿತು.
.
ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕಿ ಮೇನಕಾ ದೇವಿ ಹಾಗೂ ಗ್ರಾಪಂ ಪಿಡಿಒ ವಿಸ್ಮಿತಾ, ವ್ಯವಸ್ಥಾಪಕರಾದ ಜಗನ್, ಯೋಜನಾಧಿಕಾರಿ ಶ್ರೀನಿವಾಸ್, ಜಿಲ್ಲಾ ಐಇಸಿ ಸಂಯೋಜಕಿ ರೇಖಾ ಕೀಲಾರ, ತಾಂತ್ರಿಕ ಸಂಯೋಜಕರಾದ ಮಂಜುನಾಥ್, ಟಿಎಂಐಎಸ್ ಹರೀಶ್ ಮೊದಲಾದದವರು ಇದ್ದರು.




