ಕನ್ನಡದ ಅಂಕಿಗಳು ಹಾಗೂ ಕರ್ನಾಟಕದ ಲಾಂಛನ “ಗಂಡಭೇರುಂಡ” ಇರುವ ಹೆಚ್ಎಂಟಿ ಹೊಸ ವಾಚ್‌ಗಳು ಯುವಜನತೆಯನ್ನು ಹೆಚ್ಚು ಆಕರ್ಷಿಸುತ್ತಿದೆ ಎಂದು ಜೆಡಿಎಸ್ ಪಕ್ಷ ಹೇಳಿಕೊಂಡಿದೆ.
ಕನ್ನಡಿಗರ ಹೆಮ್ಮೆಯ ಬ್ರ್ಯಾಂಡ್ ಹೆಚ್‌ಎಂಟಿ (HMT).
ಕನ್ನಡಿಗರ ಹೆಗ್ಗುರುತಾಗಿರುವ #HMT ಕಂಪನಿಯ ಪುನಶ್ಚೇತನಕ್ಕೆ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಶ್ರೀ @hd_kumaraswamy ಅವರು ಶ್ರಮವಹಿಸುತ್ತಿದ್ದಾರೆ.
ಹೆಚ್‌ಎಂಟಿಯ ಹೊಸ ಸರಣಿಯ ಕೈಗಡಿಯಾರಗಳು ಈಗ ಕನ್ನಡಿಗರ ಮನೆ ಮಾತಾಗುತ್ತಿದೆ.
ಕನ್ನಡದ ಅಂಕಿಗಳು… pic.twitter.com/p72vVh3tFN
— Janata Dal Secular (@JanataDal_S) June 25, 2025
“>
ಕನ್ನಡಿಗರ ಹೆಮ್ಮೆಯ ಬ್ರ್ಯಾಂಡ್ ಹೆಚ್‌ಎಂಟಿ (HMT) ಕನ್ನಡಿಗರ ಹೆಗ್ಗುರುತಾಗಿರುವ ಹೆಚ್ಎಂಟಿ ಕಂಪನಿಯ ಪುನಶ್ಚೇತನಕ್ಕೆ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಶ್ರಮವಹಿಸುತ್ತಿದ್ದಾರೆ. ಹೆಚ್‌ಎಂಟಿಯ ಹೊಸ ಸರಣಿಯ ಕೈಗಡಿಯಾರಗಳು ಈಗ ಕನ್ನಡಿಗರ ಮನೆ ಮಾತಾಗುತ್ತಿದೆ ಎಂದು ‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ಜೆಡಿಎಸ್ ಬರೆದುಕೊಂಡಿದೆ.
ಮಾರುಕಟ್ಟೆಗೆ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಈ ಆವೃತ್ತಿಯ ವಾಚ್‌ಗಳು ಸಂಪೂರ್ಣ ಖಾಲಿಯಾಗಿದ್ದು, ಜನಪ್ರಿಯತೆಯ ಜೊತೆಗೆ ಗ್ರಾಹಕರಿಂದ ಹೆಚ್ಚು ಬೇಡಿಕೆ ಸೃಷ್ಟಿಯಾಗಿರುವುದು ಸಂತೋಷದ ವಿಷಯ. ಕನ್ನಡಿಗರ ಹೆಮ್ಮೆಯ HMT ವಾಚ್ ಕಟ್ಟೋಣ, HMT ಸಂಸ್ಥೆ ಉಳಿಸೋಣ ಎಂದು ತಿಳಿಸಿದೆ.




