Thursday, November 19, 2026

ಪ್ರಾಯೋಗಿಕ ಆವೃತ್ತಿ

ಸಮಾಜಮುಖಿ ಚಟುವಟಿಕೆಗಳತ್ತ ಗಮನಹರಿಸಿ ; ನಿಖಿಲ್ ಕುಮಾರಸ್ವಾಮಿ

ಅಭಿಮಾನಿಗಳ ಸಂಘ ತೆರೆಯುವುದರ ಜೊತೆಗೆ ಸಂಘದಲ್ಲಿ ಸಮಾಜಮುಖಿ ಚಟುವಟಿಕೆಗಳಿಗೆ ಗಮನಹರಿಸಬೇಕೆಂದು ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಯುವಕರಿಗೆ ಸಲಹೆ ನೀಡಿದರು

ಮಳವಳ್ಳಿ ತಾಲೂಕಿನ ಅಮೃತೇಶ್ವರನ ಹಳ್ಳಿಯಲ್ಲಿ ನೂತನವಾಗಿ ನಿಖಿಲ್ ಕುಮಾರಸ್ವಾಮಿ ಅಭಿಮಾನಿಗಳ ಸಂಘ ಉದ್ಘಾಟಿಸಿ ಮಾತನಾಡಿದ ಅವರು, ಜೆಡಿಎಸ್ ಪಕ್ಷ ಸ್ವಲ್ಪ ಕುಗ್ಗಿದ ಸಂದರ್ಭದಲ್ಲಿ ನಮ್ಮನ್ನು ಕೈಯೆತ್ತಿ ಬೆಳೆಸಿದಂತಹ ಜಿಲ್ಲೆ ಅಂದರೆ ಅದು ಮಂಡ್ಯ, ಜೆಡಿಎಸ್ ಪಕ್ಷದ ಅಭಿಮಾನಿಗಳು, ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ನಮ್ಮ ತಂದೆ ಕುಮಾರಣ್ಣನವರಿಗೆ ಪ್ರಚಂಡ ಗೆಲುವು ನೀಡಿ, ಮೋದಿ ಸರ್ಕಾರದಲ್ಲಿ ಪ್ರಭಾವಿ ಸಚಿವರನ್ನಾಗಿ ಮಾಡಿದ್ದೀರಿ, ಆದ್ದರಿಂದ ಮಂಡ್ಯ ಜಿಲ್ಲೆಯ ಕಾರ್ಯಕರ್ತರಿಗೆ ನಮ್ಮ ಕುಟುಂಬ ಯಾವಾಗಲೂ ಚಿರಋಣಿಯಾಗಿ ಇರುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಅನ್ನದಾನಿ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಮತ್ತು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ರವಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಮರಿಸ್ವಾಮಿ, ಉಪಾಧ್ಯಕ್ಷೆ ಸುಧಾ, ಸದಸ್ಯ ಪುಟ್ಟರಾಜು,
ಪಿ ಎಲ್‌ಡಿ ಬ್ಯಾಂಕ್ ನಿರ್ದೇಶಕರಾದ ಹನುಮಂತು, ಜವರೇಗೌಡ, ದೊಡ್ಡ ಮುದ್ದೇಗೌಡ, ಪುರಸಭೆ ಉಪಾಧ್ಯಕ್ಷ ಜಯಸಿಂಹ, ಸದಸ್ಯರಾದ ಸಿದ್ದರಾಜು, ನಂದು ಕುಮಾರ್, ಮುಖಂಡರಾದ ರೇವಣ್ಣ ಹಾಗೂ ಕಾಂತರಾಜು ಸೇರಿದಂತೆ ಇತರರು ಇದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ