Friday, November 20, 2026

ಪ್ರಾಯೋಗಿಕ ಆವೃತ್ತಿ

ಸಮುದಾಯದ ಹಲವು ಮೊದಲುಗಳಿಗೆ ಕಾರಣ ಬಾಣಸವಾಡಿ ನಾಗಣ್ಣ : ನಿರ್ಮಲಾನಂದನಾಥಶ್ರೀ

ಒಕ್ಕಲಿಗ ಸಮುದಾಯಕ್ಕೆ ಹಲವು ಮೊದಲುಗಳನ್ನು ಸೃಷ್ಠಿ ಮಾಡಿಕೊಟ್ಟು ಹೋದಂತ ಕೀರ್ತಿ ಬಾಣಸವಾಡಿ ನಾಗಣ್ಣ ಅವರಿಗೆ ಸಲ್ಲುತ್ತದೆ ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಡಾ.ಶ್ರೀನಿರ್ಮಲಾನಂದಸ್ವಾಮಿ ಬಣ್ಣಿಸಿದರು.

ಮಂಡ್ಯನಗರದ ರೈತಸಭಾಂಗಣದಲ್ಲಿ ಶುಕ್ರವಾರ ನಡೆದ ಬಾಣಸವಾಡಿ ನಾಗಣ್ಣ ಶ್ರದ್ಧಾಂಜಲಿ  ಕಾರ್ಯಕ್ರಮದಲ್ಲಿ ಭಾವವಹಿಸಿ ಮಾತನಾಡಿದ ಅವರು, ದೇಹ ಶಾಶ್ವತವಲ್ಲ, ಸಾಧನೆ ಶಾಶ್ವತ ಎಂಬ ನುಡಿಯಂತೆ ನಾಗಣ್ಣ ಜೀವಿಸಿದ್ದರು. ಅವರು ಕಾಲವಾಗಿದ್ದರೂ ಸಮಾಜ ದೃಷ್ಠಿಯಲ್ಲಿ ಇನ್ನೂ ಬದುಕಿದ್ದಾರೆ ಎಂದರು.

ರಾಜ್ಯದಲ್ಲಿ ಕೆಂಪೇಗೌಡ ಜಯಂತಿ ಆಚರಣೆ, ಕೆಂಪೇಗೌಡ ಅಧ್ಯಯನ ಸಂಸ್ಥೆ, ಒಕ್ಕಲಿಗರ ಅಭಿವೃದ್ಧಿ ಪ್ರಾಧಿಕಾರ ಹಾಗೂ ಇತ್ತೀಚಿನ ಒಕ್ಕಲಿಗ ಮೀಸಲಾತಿ ಹೆಚ್ಚಳಕ್ಕೆ ನಾಗಣ್ಣ ಅವರ ಕೊಡುಗೆ ಅಪಾರವಾಗಿದೆ. ಇವು ಯಾವುದೇ ಒಂದು ಸಣ್ಣ ಕಾರ್ಯಗಳಲ್ಲ, ಇವುಗಳನ್ನೂ ಸಾಧಿಸಲು ಸಂಘಟನೆ ಮತ್ತು ಬದ್ಧತೆಯ ಅವಶ್ಯಕತೆ ಇತ್ತು. ಆ ಕೆಲಸಗಳನ್ನು ಬಾಣಸವಾಡಿ ನಾಗಣ್ಣ ಮಾಡಿದ್ದಾರೆಂದು ಸ್ಮರಿಸಿದರು.

ದತ್ತಿ ನಿಧಿ ಸ್ಥಾಪನೆಗೆ ಬದ್ಧ

ಪ್ರಾಸ್ಥಾವಿಕ ಮಾತನಾಡಿದ ನ.ಲಿ.ಕೃಷ್ಣ ಅವರು ಹೇಳಿದಂತೆ ಬಾಣಸವಾಡಿ ನಾಗಣ್ಣ ಅವರ ಹೆಸರಿನಲ್ಲಿ ಮಂಡ್ಯದ ಕರ್ನಾಟಕ ಸಂಘದಲ್ಲಿ ದತ್ತಿ ನಿಧಿಯೊಂದನ್ನು ಸ್ಥಾಪಿಸಿ, ಆ ಮೂಲಕ ಪ್ರತಿವರ್ಷ ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸಕ್ಕೆ ಶ್ರೀಮಠ ಸಿದ್ದವಿದೆ  ಎಂದು ಶ್ರೀನಿರ್ಮಲಾನಂದ ಸ್ವಾಮೀಜಿ ಹೇಳಿದರು. ನಾಗಣ್ಣ ಅವರ ದತ್ತಿ ಹೆಸರಿನಲ್ಲಿ ಎಷ್ಟು ಹಣ ಸಂಗ್ರಹವಾಗುತ್ತದೋ ಆ ಹಣದಲ್ಲಿ ದತ್ತಿ ಸ್ಥಾಪಿಸುವ ನಿಟ್ಟಿನಲ್ಲಿ ಮುಂದುವರಿಯೋಣ ಎಂದರು.

ಅಂಗಾಂಗ ದಾನಕ್ಕೆ ಮುಂದಾಗಿ

ದೇಹ ಶಾಶ್ವತವಲ್ಲ, ಆದರೆ ನಿಧನರಾದ ನಂತರ ಇನ್ನೊಬ್ಬರ ಬಾಳಿನಲ್ಲಿ ಬೆಳಕಾಗುವುದಕ್ಕಾಗಿ ಅಂಗಾಂಗ ದಾನ ಮಾಡುವುದು ಸೂಕ್ತ. ಇದರಿಂದ ಅಂಗಾಂಗ ವೈಫಲ್ಯವಿರುವವರಿಗೆ ಜೀವನ ನೀಡಬಹುದು. ಈ ಹಿಂದೆ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಇಂತಹ ಸಾರ್ಥಕ ಕೆಲಸಗಳನ್ನು ಮಾಡಿ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ. ಆ ನಿಟ್ಟಿನಲ್ಲಿ ಎಲ್ಲರೂ ಮುಂದುವರಿಯಬೇಕೆಂದು ಸ್ವಾಮೀಜಿ ಅವರು ತಿಳಿಸಿದರು.

ವೇದಿಕೆಯಲ್ಲಿ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಂದನಾಥ ಸ್ವಾಮೀಜಿ, ಕೆಪಿಸಿಸಿ ಉಪಾಧ್ಯಕ್ಷ ಎನ್.ಚಲುವರಾಯಸ್ವಾಮಿ ಉಪಸ್ಥಿತರಿದ್ದರು. ಮುಖಂಡರಾದ ರವಿಕುಮಾರ್ ಗಣಿಗ, ಸಿ.ಡಿ.ಗಂಗಾಧರ್, ಜಿ.ಬಿ.ಶಿವಕುಮಾರ್, ಅಶೋಕ್ ಜಯರಾಂ, ಎ.ಸಿ.ರಮೇಶ್, ನ.ಲಿ.ಕೃಷ್ಣ ಸೇರಿ ಹಲವರು ಭಾವವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ