(ನಿನ್ನೆಯ ಭಾಷಣದ ಅಕ್ಷರ ರೂಪ)
ಅಕ್ಷರರೂಪ ಚಿತ್ರಕೂಟ
ಪ್ರಥಮತಃ ನಮ್ಮೆಲ್ಲರ ಆರಾಧ್ಯ ದೈವ, ಹಿಂದೂ ಸಂಸ್ಕೃತಿಯ ಉನ್ನತ್ತಿಗೆ, ಅದರ ಆದರ್ಶಗಳ ಪಾಲನೆಗೆ ನಮಗೆಲ್ಲಾ ಸ್ಫೂರ್ತಿದಾಯಕರಾದಂತ ಪರಮಪೂಜ್ಯ ಜಗದ್ಗುರು, ಯುಗಯೋಗಿ ಡಾ.ಬಾಲಗಂಗಾಧರನಾಥ ಮಹಾಸ್ಚಾಮೀಜಿಯವರನ್ನು ಭಕ್ತಿಪೂರ್ವಕವಾಗಿ ಸ್ಮರಣೆ ಮಾಡಿಕೊಳ್ಳುತ್ತಾ, ಅವರ ದಿವ್ಯಚೇತನಕ್ಕೆ ಪ್ರಣಾಮಗಳನ್ನು ಸಲ್ಲಿಸುತ್ತೇನೆ. ಪರಮಪೂಜ್ಯ ಜಗದ್ಗುರು ಶ್ರೀಕುಮಾರ ಚಂದ್ರಶೇಖರನಾಥ ಮಹಾಸ್ವಾಮೀಜಿ ಅವರನ್ನು ಭಕ್ತಿಪೂರ್ವಕವಾಗಿ ಸ್ಮರಿಸುತ್ತೇನೆ.
ಇವತ್ತು ವಿಶೇಷವಾಗಿ ನಮ್ಮ ಮಂಡ್ಯ ಜಿಲ್ಲೆಯಲ್ಲಿ ಶ್ರೀ ರಾಮಾಂಜನೇಯ ಮಹೋತ್ಸವ ಸಮಿತಿಯವರು ಧರ್ಮೋ ರಕ್ಷತಿ ರಕ್ಷಿತಃ ಅನ್ನುವ ಮಾತಿಗೆ ಧರ್ಮವನ್ನು ರಕ್ಷಣೆ ಮಾಡುವ ಉದ್ದೇಶದಿಂದ, ಧರ್ಮದ ಮೇಲೆ ಆಗುವ ಅಡಚಣೆಗಳು, ಅನಾಹುತಗಳನ್ನು ತಪ್ಪಿಸುವ ಉದ್ದೇಶದಿಂದ, ಹಿಂದೂ ಸಮುದಾಯದಲ್ಲಿ ಬೇರೆಯವರ ಒತ್ತಡವನ್ನು ತಡೆದುಕೊಳ್ಳುವ ಶಕ್ತಿಯನ್ನು, ನಮ್ಮ ಧರ್ಮವನ್ನು ರಕ್ಷಿಸುವ ಒಂದು ಭರವಸೆಯನ್ನು ಮೂಡಿಸುವಂತ ಕೆಲಸದಲ್ಲಿ ನಮ್ಮೆಲ್ಲರನ್ನೂ ಒಗ್ಗೂಡಿಸಿ, ಭಾರತೀಯ ಧರ್ಮವನ್ನು ಹಿಂದೂ ಧರ್ಮವನ್ನು ರಕ್ಷಣೆ ಮಾಡಬೇಕು ಅನ್ನುವ ಉದ್ದೇಶಕ್ಕೋಸ್ಕರ ವಿಶೇಷವಾಗಿ, ವೈಯುಕ್ತಿಕವಾಗಿ ನಾವು ಇಲ್ಲಿಗೆ ಬಂದಿದ್ದೇವೆ.
ಅವರೊಬ್ಬರು ರಾಷ್ಟ್ರಭಕ್ತರು, ಈ ರಾಷ್ಟ್ರದ ಘನತೆಯನ್ನು ಹೆಚ್ಚು ಮಾಡಲಿಕ್ಕೆ, ಈ ದೇಶದ ವೈಭವವನ್ನು ಹೆಚ್ಚು ಮಾಡಲಿಕ್ಕೆ ಅವರದೇ ಆದ ದಾಟಿಯಲ್ಲಿ ಅನೇಕ ದಿಕ್ಸೂಚಿ ಮಾತುಗಳನ್ನು ಹೇಳಿದ್ದಾರೆ ನಮ್ಮ ಚಕ್ರವರ್ತಿ ಸೂಲಿಬೆಲೆಯವರು. ಹಾಗೆ ವಿಶೇಷವಾಗಿ, ವೈಯುಕ್ತಿಕವಾಗಿ ನಾವು ಪ್ರೀತಿಸುವಂತಹ ಈ ಒಂದು ಜಿಲ್ಲೆಯ ನಿಜವಾದಂತ ಭೀಷ್ಮಾಚಾರ್ಯರು, ನಮಗೆಲ್ಲರಿಗೂ ಕೂಡ ಆದರ್ಶಪ್ರಾಯರಾದಂತಹ ಶ್ರೀ ಭಾನುಪ್ರಕಾಶ್ ಶರ್ಮಾ ಅವರು ಆಗಮಿಸಿ ಈ ಸಭೆಯ ಅಧ್ಯಕ್ಷತೆ ವಹಿಸಿದ್ದಾರೆ.
ಈಗ ತಾನೆ ಬೆಂಗಳೂರಿನ ನಮ್ಮ ಸೂರ್ಯನಾರಾಯಣ್ ಸಾರ್ ಮಾತಾಡಿದರು. ಇಲ್ಲಿ ಎಲ್ರೂ ಅನೇಕ ಹೋರಾಟಗಾರರು, ಈ ಧರ್ಮದ ರಕ್ಷಣೆಗೆ ತಮ್ಮದೇ ಆದಂತಹ ಒಂದು ಪಾತ್ರವನ್ನು ವಹಿಸುವಂತವರು ವೇದಿಕೆ ಮೇಲಿದ್ದಾರೆ. ತಾವೆಲ್ಲರೂ ಕೂಡ ಈ ಒಂದು ವೇದಿಕೆಯಲ್ಲಿದ್ದೀರಿ.
ನಾನು ಚಕ್ರವರ್ತಿ ಸೂಲಿಬೆಲೆಯವರ ಮಾತುಗಳನ್ನು ಇದು ಎರಡನೇ ಸಲ ಕೇಳ್ತಿರೋದು. ಹಿಂದೆ ಅಧಿಕಾರಿಯಾಗಿದ್ದಾಗ ಪೂರ್ವಾಶ್ರಮದಲ್ಲಿ ಕೇಳಿದ್ದೆ. ಅವರ ಎಲ್ಲಾ ಮಾತುಗಳನ್ನು ಕೇಳ್ತಾ ಇದ್ದರೆ “ಹೌದಲ್ವಾ, ಈ ನೆಲದಲ್ಲಿ ನಮ್ಮ ಧರ್ಮದ ಮೇಲೆ, ನಮ್ಮ ಧರ್ಮೀಯರ ಮೇಲೆ ಅನಾಚಾರಗಳು, ಆಕ್ರಮಣಗಳು, ದುರಾಚಾರಗಳು ನಡೆಯುವಂತ ಸಮಯದಲ್ಲಿ ನಾವು ಹೆದರಿಕೊಂಡು, ಹಿಂದೆ ಕೂತ್ಕೊಳ್ತಾ ಇದ್ದೀವಲ್ಲಾ..” ಅಂತ ಒಂದು ಮಾತು ಅನ್ನಿಸ್ತು. ಅದಕ್ಕೆ ನಮ್ಮ ಹಿರಿಯರು ಹೇಳಿದ್ರು, ಭಾನುಪ್ರಕಾಶ್ ಶರ್ಮಾ ಅವರು “ನಾವು ಅಕ್ಕಿ ಕೊಡ್ತೀವಿ, ಬೆಲ್ಲ ಕೊಡ್ತೀವಿ.. ನಮ್ ಹೆಸರು ಹೇಳಬೇಡಿ, ನಮ್ಮನ್ನು ಮುಂದಕ್ಕೆ ತರಬೇಡಿ” ಅನ್ನೋ ಈ ಹೇಡಿತನ ಇದೆಯಲ್ಲಾ ಅದು ಸರಿಯಲ್ಲ ಅನ್ನೋದು ನನ್ನ ಭಾವನೆ. ಆದರೆ ನಮ್ಮ ಚಕ್ರವರ್ತಿ ಸೂಲಿಬೆಲೆ ಅವರು ಲಾಸ್ಟಲ್ಲಿ ಒಂದು ಒಳ್ಳೆಯ ಮಾತು ಹೇಳಿದರು, ಅದನ್ನು ನಾನು ಬಹಳ ಸಮರ್ಥನೆ ಮಾಡ್ಕೋತೀನಿ.
ಕೊನೆಯ ಮಾತು!
ನೋಡಿ, ನಾವೆಲ್ರು ಕೂಡ ಇಷ್ಟು ಜನ ಇಲ್ಲಿದೀವಿ. ನಮ್ಮಲ್ಲಿ ಯಾರೋ ಒಬ್ಬನ್ನ “ನೀನು ದೇವಸ್ಥಾನಕ್ಕೆ ಬರಬೇಡ. ಮನೆ ಒಳಗಡೆ ಬರಬೇಡ” ಅಂತ ಅಂದ್ರೆ, ಅದು ಬಹಳ ನೋವಿನ ಸಂಗತಿ ಅಂತ ಅಂದರು.
ನಾನು ಇದನ್ನು ಸ್ಟ್ರಾಂಗ್ ಸಮರ್ಥನೆ ಮಾಡ್ಕೋತೀನಿ. ನಿಮ್ಮ ಈ ಮಾತಿಗೆ ತುಂಬ ಗೌರವ ಕೋಡ್ತೀನಿ. ಕಾರಣ, ಭಾರತೀಯರಲ್ಲಿ, ಹಿಂದೂಗಳಲ್ಲಿ ಈ ತರ ಜಾತಿಯ ವಿಷಯವಾಗಿ, ಬಣ್ಣದ ವಿಷಯವಾಗಿ, ಭಾಷೆಯ ವಿಷಯವಾಗಿ, ಆರ್ಥಿಕತೆಯ ವಿಷಯವಾಗಿ, ವರ್ಗದ ವಿಷಯವಾಗಿ ಮೇಲು ಕೀಳು ಎನ್ನುವ ಭಾವನೆಯನ್ನು ಕಿತ್ತು ಒಡೆಯಲಿಕ್ಕೆ ನೀವು ದಿಕ್ಸೂಚಿ ಭಾಷಣವನ್ನು ಮಾಡಬೇಕು ಅಂತೇಳಿ ವಿನಂತಿ ಮಾಡ್ಕೋತೀನಿ.
ಈ ಭಾರತೀಯರಲ್ಲಿ ಇಂತಹ ಅನೇಕ ವಿಘಟನೆಗಳು ಇದ್ದಾಗ ಒಂದಗಲಿಕ್ಕೆ ಸಾಧ್ಯ ಆಗೋದಿಲ್ಲ. ಮೊದಲು ನೀವೆಲ್ಲ ಜ್ಞಾಪಿಸಿಕೊಳ್ಳಿ. ರಾಮಕೃಷ್ಣ ಪರಮಹಂಸರು, ಸ್ವಾಮಿ ವಿವೇಕಾನಂದರು ಅಗೋಚರ ಶಕ್ತಿಯಾಗಿ ಭಾರತೀಯ ಹಿಂದೂ ಧರ್ಮವನ್ನು, ಭಾರತೀಯತೆಯನ್ನು ಮಾನವೀಯತೆಯ ಧರ್ಮದೊಂದಿಗೆ ಬೆಸೆದು ಜಗತ್ತಿಗೆ ಶ್ರೇಷ್ಠ ಸಂದೇಶವನ್ನು ಕೊಡುತ್ತಾರೆ. ಸ್ವಾಮಿ ವಿವೇಕಾನಂದರು ಎಂದೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲಿಲ್ಲ. ಅವರು ಹೇಳಿದ್ದೇನು ಈ ದೇಶದಲ್ಲಿ ಬಡತನ, ಮೌಢ್ಯತೆ, ಮೂರ್ಖತನ ಬಿದ್ದು ಸಾಯ್ತಾ ಇದೆ. ಇದನ್ನು ಕಿತ್ತು ಒಗೆಯಬೇಕು. ಅವರಲ್ಲಿ ಜಾಗೃತಿ ಮೂಡಿಸಬೇಕು. ಅನ್ನುವ ಹಂಬಲ ಇಟ್ಟುಕೊಂಡು ರಾಮಕೃಷ್ಣ ಪರಮಹಂಸರ ದಿವ್ಯಶಕ್ತಿಯನ್ನು ಪಡೆದುಕೊಂಡು ವಿದೇಶದಲ್ಲಿ ಹೋಗಿ, ಅಮೆರಿಕದಲ್ಲಿ ಹೋಗಿ “ಬ್ರದರ್ಸ್ ಅಂಡ್ ಸಿಸ್ಟರ್ಸ್ ಆಫ್ ಅಮೆರಿಕಾ” ಅಂತ ಮೊದಲ ಮಾತನ್ನು ಅವರು pronounce ಮಾಡಿದ ತಕ್ಷಣ ಪಾಶ್ಚಾತ್ಯರೆಲ್ಲರೂ ಕೂಡ ಎದ್ದು ನಿಂತು ಗೌರವ ಕೊಡುತ್ತಾರೆ. ಈ ಭಾರತೀಯ ನೆಲದಿಂದ ಬಂದಂತ ಒಬ್ಬ ವೀರ ಸನ್ಯಾಸಿಯ ಘನತೆ ಏನು? He is representing entire India. ಈ ಭಾರತವನ್ನು ಪ್ರತಿನಿಧಿನಿಸಿದಂತ ವ್ಯಕ್ತಿ ಇಂಥ ಮಾತುಗಳನ್ನಾಡ್ತನೆ ಅಂದ್ರೆ ಭಾರತೀಯರಾದಂತ ನಾವುಗಳು, ಹಿಂದೂ ಧರ್ಮೀಯರಾದಂತ ನಾವುಗಳು ವಿಶಾಲ ಪ್ರಜ್ಞೆಯುಳ್ಳವರು. ಮಾನವೀಯತೆಗೆ ಹೆಚ್ಚು ಆದ್ಯತೆ ಕೊಡುವಂತವರು.
ರಾಷ್ಟ್ರಕವಿ ಕುವೆಂಪು ಅವರು ಒಂದು ಕಡೆ ಹೇಳ್ತಾರೆ “ಯಾವ ಕಾಲದ ಶಾಸ್ತ್ರ ಏನು ಹೇಳಿದರೇನು? ಎದೆಯ ದನಿಗು ಮಿಗಿಲಾದ ಶಾಸ್ತ್ರವಿಹುದೇನು? ಅಂತ. ಅದನ್ನು ಒಂದು ಸ್ವಲ್ಪ ನಾವು ವಿಶಾಲವಾಗಿ ಯೋಚನೆ ಮಾಡಿ ಹೇಳುವುದಾದರೆ, ಭಾರತೀಯರು ವಿಶಾಲ ಮನೋಭಾವನೆಯನ್ನು ಇಟ್ಕೊಂಡು ಎಲ್ಲರನ್ನು ಪ್ರೋತ್ಸಾಹಿಸುತ್ತಾರೆ. ಎಲ್ಲರನ್ನೂ ಸಂರಕ್ಷಿಸುತ್ತಾರೆ, ಎಲ್ಲವನ್ನೂ ಕೊಡ್ತಾರೆ. ಇವತ್ತಿಗೂ ಕೂಡ. ಅದರೆ, ಇವತ್ತು ಈ ಒಂದು ಸಮಾವೇಶ ಮಾಡೋದು ಅಥವಾ ಜಾಗೃತಿ ಮೂಡಿಸುವಂತದ್ದು ನಮ್ಮ ಈ ಮಾನವೀಯ ಮುಖವುಳ್ಳಂತ, ಮಾನವೀಯ ಮೌಲ್ಯವುಳ್ಳಂತ, ಉದಾರವಾಗಿ ವರ್ತಿಸುವಂತ, ಉದಾರವಾಗಿ ಭಾವಿಸುವ ಹಿಂದೂ ಧರ್ಮದ ಮೇಲೆ ಆಕ್ರಮಣಗಳನ್ನು ನಾವು ಒಪ್ಪಿಕೊಳ್ಳುವುದಿಲ್ಲ.
ಅಂಥ ಅನಾಹುತಗಳನ್ನು ಯಾರು ಪ್ರೋತ್ಸಾಹಿಸುತ್ತಾರೋ ಅವರನ್ನು ನಾವು ಸ್ಟ್ರಾಂಗ್ ಆಗಿ ವಿರೋಧಿಸುತ್ತೇವೆ. ನಾವು ಎಲ್ಲರನ್ನೂ ಪ್ರೀತಿಸುತ್ತೇವೆ. Live and let live. ನಾವು ಬಾಳಬೇಕು, ಇತರರು ಬಾಳಬೇಕು. ಆದರೆ ನಾವು ಇಂಥ ಅವಕಾಶಗಳನ್ನು ಕೊಟ್ಟಾಗ ಉದಾರದಿಂದ ನಡೆದುಕೊಂಡಾಗ ನಮ್ಮ ಧರ್ಮದ ಮೇಲೆ, ನಮ್ಮ ಸಂಸ್ಕೃತಿಯ ಮೇಲೆ, ನಮ್ಮ ಜನರ ಮೇಲೆ ಭಯೋತ್ಪಾದಕ ಶಕ್ತಿಗಳನ್ನು ಪ್ರದರ್ಶಿಸುತ್ತಾರೆ ಅಂದರೆ, ಅದನ್ನು ಎಲ್ಲರೂ ಕೂಡ ಒಗ್ಗಟ್ಟಾಗಿ ವಿರೋಧಿಸಬೇಕಾಗುತ್ತದೆ. ಅಂತ ದುಷ್ಟಶಕ್ತಿಗಳಿಗೆ ಯಾರು ಕೂಡ ಎದೆಗುಂದಬಾರದು, ಭಯ ಪಡಬಾರದು ಮತ್ತು ಸಹಾಯ ಮಾಡಬಾರದು.
ಈ ನೆಲದಲ್ಲಿ ಎಲ್ಲರಿಗೂ ಕೂಡ, ಎಲ್ಲ ಧರ್ಮಿಯರಿಗೂ ಕೂಡ ವಿಶಾಲವಾದಂತ ಅವಕಾಶವನ್ನು ಕೊಟ್ಟಿದ್ದಾರೆ. ಅವರೆಲ್ಲರೂ ಕೂಡ ಪರಿವರ್ತನೆ ಮಾಡ್ಕೋಬೇಕು ಅಂತ ಹೇಳದೆ ಹಕ್ಕೊತ್ತಾಯ ಮಾಡಬಹುದು ನಾವು. ಭಿನ್ನಹ ಮಾಡಬಹುದು. ಈ ನೆಲದಲ್ಲಿ ಹುಟ್ಟಿದೀವಿ, ಈ ನೆಲದಲ್ಲಿ ಎಲ್ಲವನ್ನೂ ಪಡೆದುಕೊಂಡಿದ್ದೀವಿ. ಸರ್ಕಾರ ಕೊಡುವ ಸೌಲಭ್ಯಗಳಿರಬಹುದು. ಈ ಪ್ರಕೃತಿ ಕೊಡುವ ಸೌಲಭ್ಯಗಳಿರಬಹುದು. ನಮ್ಮೆಲ್ಲರ ಆಶ್ರಯದಾತೆ ಭಾರತಾಂಬೆ, ನಮ್ಮೆಲ್ಲರ ಮನೆಯೊಳಗಿನ ದೇವರು ಯಾವುದಾದರೂ ಇರಬಹುದು. ಆದರೆ, ಸಮಗ್ರವಾಗಿ, ಸಮಗ್ರ ದೃಷ್ಟಿಕೋನದಲ್ಲಿ ಈ ದೇಶವನ್ನು ನೋಡುವುದಾದರೆ, ನಮ್ಮ ಅನೇಕ ದಾರ್ಶನಿಕರು, ಮಹಾತ್ಮ ಗಾಂಧೀಜಿ ಅವರ ಹಾದಿಯಾಗಿ ಅನೇಕರ ದಾರ್ಶನಿಕರು ಏನು ಆದರ್ಶಗಳನ್ನು ಬಿಟ್ಟುಹೋಗಿದ್ದಾರೆ. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ರವರು ಸಂವಿಧಾನದಲ್ಲಿ ಉದಾತ್ತ ಧ್ಯೇಯಗಳನ್ನು ಬಿಟ್ಟು ಹೋಗಿದ್ದಾರೆ. ಡೆಮಾಕ್ರೆಟಿಕ್ ಮತ್ತು ಕಾನ್ಸ್ಟಿಟ್ಯೂಷನ್ನಲ್ಲಿ ಏನು ಹೇಳಿದ್ದಾರೆ. ಅನುಸರಿಸಲಿಕ್ಕೆ ಪ್ರಯತ್ನ ಮಾಡೋಣ.
ಈ ನೆಲದ ಸಂಸ್ಕೃತಿಯನ್ನು, ಭಾರತೀಯ ಧರ್ಮವನ್ನು, ಭಾರತೀಯರು ಎಂಬ ಭಾವನೆಯೊಂದಿಗೆ ಎಲ್ಲರೂ ಕೂಡ ಬದುಕೋದಾದರೆ ಅಲ್ಲಿ ಶಾಂತಿ, ನೆಮ್ಮದಿ ಮತ್ತು ಎಲ್ಲವೂ ಸಂತೋಷವಾಗಿರುತ್ತೆ. ಅದನ್ನು ಪರಿವರ್ತನೆ ಮಾಡುವಂಥ ಜಾಗೃತಿ ಮೂಡಿಸೋಣ ಅನ್ನುವುದು ನನ್ನ ಭಾವನೆ.
ಒಂದು ಕಡೆ ಈ ಧರ್ಮದ ರಕ್ಷಣೆಗೆ ನೀವೇನು ಪ್ರಯತ್ನ ಮಾಡುತ್ತಿದ್ದೀರಿ ಹಾಗೇ ನಾವು ಕೂಡ ಹೇಳಬೇಕಾಗಿದೆ. ಈ ನೆಲದ ಮೇಲೆ, ಈ ನೆಲದ ಘನತೆಯ ಮೇಲೆ, ಈ ಭೂಮಿಯ, ಈ ಭರತ ಖಂಡದ ಸಂಸ್ಕೃತಿಯ ಮೇಲೆ, ಭರತ ಖಂಡದ ಧರ್ಮದ ಮೇಲೆ ಯಾರು ಅನಾಚಾರಗಳನ್ನು ಮಾಡಲಿಕ್ಕೆ ಪ್ರಯತ್ನ ಮಾಡುತ್ತಿದ್ದಾರೋ, ಭಯೋತ್ಪಾದಕ ಕೃತ್ಯಗಳನ್ನು ಮಾಡಲಿಕ್ಕೆ ಯತ್ನಿಸುತ್ತಿದ್ದಾರೋ. ಈ ರಿಲಿಜೀಯಸ್ ಫಂಡಮೆಂಟಲಿಸ್ಟ್ಗಳು ಯಾರಿದ್ದಾರೆ ಅವರೆಲ್ಲರೂ ಕೂಡ ಪರಿವರ್ತನೆ ಆಗಲೇಬೇಕು. ನೀವು ಭಾರತೀಯರಾಗಿ ಪರಿವರ್ತನೆ ಆದರೆ ಮಾತ್ರ ನಾವೆಲ್ಲರೂ ಕೂಡ ಒಗ್ಗಟ್ಟಿನಿಂದ ಒಗ್ಗೂಡಿ ಸುಸಂಸ್ಕೃತಿಯಿಂದ, ನೆಮ್ಮದಿಯಿಂದ, ಸಹಕಾರದಿಂದ ಬಾಳಲಿಕ್ಕೆ ಸಾಧ್ಯವಾಗುತ್ತದೆ ಅಂತ ನಿರ್ಣಯ ಮಾಡ್ಕೊಂಡು ನಮ್ಮ ಚಕ್ರವರ್ತಿ ಸೂಲಿಬೆಲೆ ಸರ್ ಅವರಿಗೆ, ಸೂರ್ಯ ನಾರಾಯಣ್ ಅವರಿಗೆ ಹೇಳೋದಿಷ್ಟೇ..
ನಮ್ಮ ಮಂಡ್ಯದ ಜನ ಅತ್ಯಂತ ಸುಸಂಸ್ಕೃತ ಜನ. ನಾವು ಇಲ್ಲಿ ಏಳೆಂಟು ವರ್ಷಗಳ ಕಾಲ ಪೂರ್ವಾಶ್ರಮದಲ್ಲಿ ಕೆಲಸ ಮಾಡಿದ್ದೀವಿ. As a tahsildar, as an assistant commissioner, as additional deputy commissioner. ಇಲ್ಲಿನ ಜನರು ಬಹಳ ಉದಾರವಾದಿಗಳು. ಮಾನವತಾವಾದಿಗಳು. ಎಲ್ಲರನ್ನೂ ಪ್ರೀತಿಸುತ್ತಾರೆ. ಎಲ್ಲರನ್ನು ಕರೆದು, ಮನೆಯೊಳಗೆ ಊಟ ಹಾಕ್ತಾರೆ. ಮಾತು ಒರಟಾಗಿರಬಹುದು. ಆದರೆ, ಹೃದಯ ವಿಶಾಲವಾದ ಪ್ರಜ್ಞೆ ಇದೆ.
ಇವರು ಯಾವಾಗಲೂ ನಮ್ಮ ಧರ್ಮದ ರಕ್ಷಣೆಗೆ ಮನಸ್ಸನ್ನು ಇಟ್ಟಿರ್ತಾರೆ. ಮನಸ್ಸನ್ನು open ಮಾಡಿಕೊಳ್ತಾರೆ ಅಂತ ಹೇಳುತ್ತಾ.. ಮತ್ತೊಮ್ಮೆ ವಿನಂತಿ ಮಾಡ್ಕೋತೀನಿ. ನಮ್ಮನ್ನು ರಕ್ಷಣೆ ಮಾಡಿಕೊಳ್ಳುವ ಜೊತೆಜೊತೆಗೆ ಏನು ನಮ್ಮ ಸಂಸ್ಕೃತಿ ಮೇಲೆ, ನಮ್ಮ ಧರ್ಮದ ಮೇಲೆ ಭಯೋತ್ಪಾದಕರಂತೆ ಮುಗಿ ಬೀಳುವ ಜನರು ಪರಿವರ್ತನೆ ಆಗಬೇಕು ಆಂತ ಹೇಳಿ, ಶ್ರೀರಾಮ ಅಂತ ಶಕ್ತಿಯನ್ನು ಕೊಟ್ಟು, ಅಂತ ಒಂದು ಮನಸ್ಥಿತಿಯನ್ನು ಕೊಡಲಿ ಅಂತ ಹೇಳಿ, ನಿಮ್ಮೆಲ್ಲರನ್ನೂ ಉದ್ದಾರ ಮಾಡಲಿ ಅಂತ ಹೇಳಿ ಭಗವಂತ ಶ್ರೀರಾಮನಲ್ಲಿ ಪ್ರಾರ್ಥನೆ ಮಾಡ್ಕೊಂಡು, ಮಾತಿಗೆ ವಿರಾಮವನ್ನು ನೀಡುತ್ತೇನೆ.
ಜೈ ಶ್ರೀ ಗುರುದೇವ್




