Tuesday, November 24, 2026

ಪ್ರಾಯೋಗಿಕ ಆವೃತ್ತಿ

ಮನ್ ಮುಲ್ ಚುನಾವಣೆ | ಒಟ್ಟು 34 ಅಭ್ಯರ್ಥಿಗಳಿಂದ ನಾಮಪತ್ರ ; ಯಾವ ಕ್ಷೇತ್ರದಿಂದ ಯಾರ್‍ಯಾರು ಸ್ಪರ್ಧೆ ? ಇಲ್ಲಿದೆ ಮಾಹಿತಿ….

ಫೆ.2ರಂದು ನಡೆಯಲಿರುವ ಮನ್’ಮುಲ್ ಆಡಳಿತ ಮಂಡಳಿ ಚುನಾವಣೆಗೆ 34 ಅಭ್ಯರ್ಥಿಗಳಿಂದ 54 ನಾಮಪತ್ರ ಸಲ್ಲಿಕೆಯಾಗಿದೆ ಎಂದು ಎಡಿಸಿ ಹಾಗೂ ಮನ್’ಮುಲ್ ಚುನಾವಣಾಧಿಕಾರಿ ಶಿವಾನಂದಮೂರ್ತಿ ತಿಳಿಸಿದ್ದಾರೆ.
ನಗರದಲ್ಲಿ ಈ ಕುರಿತು ಶನಿವಾರ ಸಂಜೆ ಪ್ರಕಟಣೆ ನೀಡಿದ್ದಾರೆ‌.

ಮಂಡ್ಯ ತಾಲ್ಲೂಕಿನಲ್ಲಿ 8 ಅಭ್ಯರ್ಥಿಗಳು 14 ನಾಮಪತ್ರ, ಮದ್ದೂರಿನಿಂದ 8 ಅಭ್ಯರ್ಥಿಗಳು 12 ಹಾಗೂ ಕೆ.ಆರ್.ಪೇಟೆಯಿಂದ 5 ಅಭ್ಯರ್ಥಿಗಳು 9 ನಾಮಪತ್ರ ಸಲ್ಲಿಸಿದ್ದಾರೆ.

ನಾಗಮಂಗಲ ತಾಲ್ಲೂಕಿನಿಂದ 4 ಅಭ್ಯರ್ಥಿಗಳು 7, ಮಳವಳ್ಳಿಯಿಂದ 3 ಅಭ್ಯರ್ಥಿಗಳು 5, ಶ್ರೀರಂಗಪಟ್ಟಣದಿಂದ 3 ಅಭ್ಯರ್ಥಿಗಳು 4 ಹಾಗೂ ಪಾಂಡವಪುರ ತಾಲ್ಲೂಕಿನಿಂದ 3 ಅಭ್ಯರ್ಥಿಗಳು 3 ನಾಮಪತ್ರ ಸಲ್ಲಿಸಿದ್ದಾರೆ ಎಂದು ಚುನಾವಣಾಧಿಕಾರಿ ವಿವರಿಸಿದ್ದಾರೆ.

ಮಂಡ್ಯ ತಾಲ್ಲೂಕಿನ 3, ಮದ್ದೂರು, ಕೆ.ಆರ್.ಪೇಟೆ ಹಾಗೂ ನಾಗಮಂಗಲ ತಾಲ್ಲೂಕಿನ ತಲಾ 2 ಮತ್ತು ಮಳವಳ್ಳಿ, ಶ್ರೀ ರಂಗಪಟ್ಟಣ ಹಾಗೂ ಪಾಂಡವಪುರ ತಾಲ್ಲೂಕಿನ ತಲಾ ಒಂದು ಸೇರಿದಂತೆ 12 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಅಭ್ಯರ್ಥಿಗಳು ನಾಮಪತ್ರ ಹಿಂಪಡೆಯಲು ಜ.27 ಕೊನೆಯ ದಿನವಾಗಿದೆ.

ಯಾವ ಕ್ಷೇತ್ರದಿಂದ ಯಾರ್‍ಯಾರ ಸ್ಪರ್ಧೆ

ಮನ್‌ಮುಲ್‌ಗೆ ಆಯ್ಕೆಯಾಗಿದ್ದ ಮಳವಳ್ಳಿ ತಾಲೂಕಿನ ವಿ.ಎಂ.ವಿಶ್ವನಾಥ, ಶ್ರೀರಂಗಪಟ್ಟಣದಿಂದ ಬಿ.ಬೊರೇಗೌಡ, ಪಾಂಡವಪುರ ತಾಲೂಕಿನಿಂದ ಕೆ.ರಾಮಚಂದ್ರ, ಕೆ.ಆರ್.ಪೇಟೆ ತಾಲೂಕಿನಿಂದ ಎಂ.ಬಿ.ಹರೀಶ್, ಕೆ.ರವಿ, ಎಚ್.ಟಿ.ಮಂಜು, ಮಂಡ್ಯ ತಾಲೂಕಿನಿಂದ ಯು.ಸಿ.ಶಿವಕುಮಾರ್, ಬಿ.ಚಂದ್ರ, ಎಂ.ಎಸ್.ರಘುನಂದನ್, ಬಿ.ಆರ್.ರಾಮಚಂದ್ರ, ಮದ್ದೂರು ತಾಲೂಕಿನಿಂದ ಎಸ್.ಪಿ.ಸ್ವಾಮಿ, ಎಂ.ರೂಪಾ, ಕದಲೂರು ರಾಮಕೃಷ್ಣ, ನಾಗಮಂಗಲ ತಾಲೂಕಿನಿಂದ ಎನ್.ಬಾಲಕೃಷ್ಣ (ನೆಲ್ಲೀಗೆರೆ ಬಾಲು) ಸೇರಿದಂತೆ ೧೪ ಮಂದಿ ಪುನರಾಯ್ಕೆ ಬಯಸಿ ಮತ್ತೆ ನಾಮಪತ್ರ ಸಲ್ಲಿಸಿದ್ದಾರೆ.

ನಾಗಮಂಗಲ ತಾಲೂಕಿನಿಂದ ಮನ್‌ಮುಲ್‌ಗೆ ಆಯ್ಕೆಯಾಗಿದ್ದ ನೆಲ್ಲೀಗೆರೆ ಬಾಲು ನಿರ್ದೇಶಕ ಸ್ಥಾನ ವಜಾಗೊಂಡ ಬಳಿಕ ಸರ್ಕಾರದಿಂದ ನಿರ್ದೇಶಕ ಸ್ಥಾನಕ್ಕೆ ನಾಮನಿರ್ದೇಶನಗೊಂಡಿದ್ದ ಎಸ್.ಎನ್.ಲಕ್ಷ್ಮೀನಾರಾಯಣ ಮತ್ತೆ ಉಮೇದುವಾರಿಕೆ ಸಲ್ಲಿಸಿದ್ದಾರೆ.

ನಾಮಪತ್ರ ಸಲ್ಲಿಸಿರುವ ಅಭ್ಯರ್ಥಿಗಳು

ಮಂಡ್ಯ ತಾಲೂಕು: ಯು.ಸಿ.ಶಿವಕುಮಾರ್, ಬಿ.ಚಂದ್ರ, ಎಂ.ಎಸ್.ರಘುನಂದನ್, ಬಿ.ಆರ್.ರಾಮಚಂದ್ರ, ವಿಜಯಕುಮಾರ್, ಎಚ್.ಎಸ್.ಮಧು, ಕೆಎ.ರಾಜು, ಜಿ.ಎಸ್.ಪುಷ್ಪಾವತಿ.

ಮದ್ದೂರು ತಾಲೂಕು: ಎಸ್.ಪಿ.ಸ್ವಾಮಿ, ಎಂ.ರೂಪಾ, ಎಂ.ಕೆ.ಹರೀಶ್‌ಬಾಬು, ಸಿ..ಚಲುವರಾಜು, ರಾಮಕೃಷ್ಣ, ಎಸ್.ಮಹೇಶ್, ಎಸ್.ಟಿ.ಪ್ರಕಾಶ್‌ಗೌಡ, ಬಿ.ಅನಿಲ್‌ಕುಮಾರ್.

ಮಳವಳ್ಳಿ ತಾಲೂಕು: ವಿ.ಎಂ.ವಿಶ್ವನಾಥ, ಡಿ.ಕೃಷ್ಣೇಗೌಡ, ಜಿ.ಎಂ.ವಿಷಕಂಠೇಗೌಡ,
ಶ್ರೀರಂಗಪಟ್ಟಣ ತಾಲೂಕು: ಬಿ.ಬೋರೇಗೌಡ, ಎಚ್.ಎಂ.ಪುಟ್ಟಸ್ವಾಮಿಗೌಡ ಎಂ.ಕಿಶೋರ್ (ಕಿರಣ್).

ಪಾಂಡವಪುರ ತಾಲೂಕು: ಸಿ.ಶಿವಕುಮಾರ್, ಕೆ.ರಾಮಚಂದ್ರ, ಜಿ.ಈ.ರವಿಕುಮಾರ,
ಕೆ.ಆರ್.ಪೇಟೆ ತಾಲೂಕು: ಎಂ.ಬಿ.ಹರೀಶಶ್, ಕೆ.ರವಿ, ಎಚ್.ಟಿ.ಮಂಜು, ಎನ್.ಎಸ್.ಮಹೇಶ, ಎ.ಎಸ್.ಕಲ್ಪನ

ನಾಗಮಂಗಲ ತಾಲೂಕು: ಎಸ್.ಎನ್.ಲಕ್ಷ್ಮೀನಾರಾಯಣ, ಎನ್.ಅಪ್ಪಾಜಿಗೌಡ, ಎನ್.ಬಾಲಕೃಷ್ಣ (ನೆಲ್ಲೀಗೆರೆ ಬಾಲು), ಎನ್.ಎಂ.ದೇವೇಗೌಡ.

ಕೆ.ಆರ್.ಪೇಟೆ ತಾಲೂಕು : ಎಂ.ಬಿ.ಹರೀಶ್, ಕೆ.ರವಿ, ಎಚ್.ಟಿ.ಮಂಜು,

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ