Wednesday, November 18, 2026

ಪ್ರಾಯೋಗಿಕ ಆವೃತ್ತಿ

“ನಥಿಂಗ್ ಇಸ್ ಗೋಯಿಂಗ್ ಆನ್ ರೆಕಾರ್ಡ್ “

ದೇವರಾಜ್ ಹುಣಸಿಕಟ್ಟಿ

ಇದು ಈ ಇಡೀ ಚಳಿಗಾಲದ ಅಧಿವೇಶನದಲ್ಲಿ ಉಪರಾಷ್ಟಪತಿ ಅವರಿಂದ ಕೇಳಿ ಬಂದ ಒನ್ ಲೈನ್ ವಾಕ್ಯ. ಮತ್ತೆ ಇದು ಕೇಳಿ ಬಂದದ್ದು ಕೂಡ ಪ್ರತಿ ಪಕ್ಷಗಳ ಸದ್ಯಸರ ಮೇಲೆ ಅತೀ ಹೆಚ್ಚು ಬಾರಿ. ಅವರು ಕುಳಿತಿರುವುದು ರಾಜ್ಯ ಸಭೆಯ ಪೀಠಾಧ್ಯಕ್ಷರಾಗಿ, ಅದೋ ತೀರಾ ನಿಷ್ಪಕ್ಷಾಪಾತವಾಗಿ ನಿರ್ವಹಣೆ ಮಾಡಬೇಕಾಗಿರುವ ಹುದ್ದೆ, ಇವರೋ ತೀರಾ ಒಬ್ಬ ಆರ್. ಎಸ್. ಎಸ್ ಕಾರ್ಯಕರ್ತನಂತೆ ಸದಾ ಸರ್ಕಾರದ ವಿರುದ್ಧದ ಯಾವ ಮಾತನ್ನು ಕೇಳಿಸಿಕೊಳ್ಳಲು ತಯಾರ ಕೂಡ ಇಲ್ಲದಿರೋ ಹಾಗೆ ವರ್ತಿಸಿದರೆ ಆ ಹುದ್ದೆಗೂ ಘನತೆ ಅಲ್ಲ ಅವರಿಗೂ ಕೂಡ.

ಪ್ರತಿ ಬಾರಿ ಪ್ರತಿಪಕ್ಷದ ನಾಯಕ ಮಾತನಾಡಲು ಎದ್ದು ನಿಂತರೆ, ಮಧ್ಯ ಮಧ್ಯ ಹತ್ತಾರು ಬಾರಿ ತಡೆಯುವುದು, ತೀರಾ ಅಸಹನೆ ತೋರಿಸುವುದು, ಸರ್ಕಾರದ ವಿರುದ್ಧ ಆರೋಪದ ಪ್ರತಿ ಮಾತನ್ನು ಕಡತದಿಂದ ತೆಗೆದು ಹಾಕುವುದು ಮತ್ತೆ ಸದಾ ಸಭಾಪತಿ ಅನ್ನೋದು ಮರೆತು ಸರ್ವಾಧಿಕಾರಿಗಳಂತೆ ವರ್ತಿಸುವ ಜಗದೀಪ ಧನಕರರ ಎಚ್ಚರ ಗೊಳಿಸಲು ಪ್ರತಿ ಪಕ್ಷಗಳ ಸದಸ್ಯರಿಗೆ ಬೇರೆ ಯಾವ ಮಾರ್ಗವೂ ಇರಲಿಲ್ಲವೇನೋ. ಕೊನೆಗೆ ಈ ಅವಿಶ್ವಾಸ ನಿರ್ಣಯ ಮಂಡನೆಯೊಂದೆ ದಾರಿ ಉಳಿದಿದೆ. ಹೋದ ಅಧಿವೇಶನದಲ್ಲಿ ಜಯಾ ಬಚ್ಚನ್ ಅವರೊಂದಿಗಿನ ಮಾತಿನ ವಿವಾದ, ಡೆರೆಕ್ ಒಬೆರಾಯನ್ ಅವರೊಂದಿಗಿನ ವಿವಾದ ಇವೆಲ್ಲ ಅವರ ವರ್ತನೆಗೆ ಪ್ರಶ್ನೆ ಚಿನ್ಹೆಗಳಾಗಿಯೇ ಇವೆ.

ಮತ್ತೆ ಈ ಅವಿಶ್ವಾಸ ನಿರ್ಣಯ ಸೋಲಬಹುದು ಅದು ಒಂದು ವಿಷಯ ಅಲ್ಲ, ಆದ್ರೆ ಹಾಗೆ ಅವಿಶ್ವಾಸ ನಿರ್ಣಯ ಮಂಡನೆಯಾದರೆ ಅವರ ಎದುರಿಗೆ ಅವರ ತಪ್ಪುಗಳ ಲೆಕ್ಕ ಕೊಡಲು ಪ್ರತಿ ಪಕ್ಷದ ಸದಸ್ಯರಿಗೆ ಒಂದು ಅವಕಾಶ ಕೂಡ ದೊರೆಯಲಿದೆ. ಈ ಸಂದರ್ಭ ಬಳಸಿಕೊಂಡು ಯಾರು ಎಷ್ಟು ಅವರ ಮುಖಕ್ಕೆ ಕನ್ನಡಿ ಹಿಡಿಯುತ್ತಾರೋ ಕಾದು ನೋಡಬೇಕಿದೆ.

ಮತ್ತೆ ಸ್ವತಂತ್ರ ಭಾರತದ ಇತಿಹಾಸದಲ್ಲಿ ಈ ಮೊದಲು ಎಂದೂ ನಡೆಯದ ಘಟನೆ ಮುಂದೆ ನಡೆಯಲಿದೆ. ಇದೊಂದು ಕಪ್ಪು ಚುಕ್ಕೆಯಾಗಿ ಜಗದೀಪ ಧನಕರವರಿಗೆ ಉಳಿಯಲಿದೆ. ಇದಕ್ಕೆ ಸ್ವತ ಅವರೇ ಕಾರಣಿಕರ್ತರು ಕೂಡ.

ಸರ್ಕಾರದ ವಿರುದ್ಧದ ಪ್ರತಿ ಪಕ್ಷದ ಪ್ರತಿ ಟೀಕೆ ಟಿಪ್ಪಣಿಯನ್ನು ಕೇಳಿಸಿಯು ಕೊಳ್ಳದೆ ನಥಿಂಗ್ ಇಸ್ ಗೋಯಿಂಗ್ ರೆಕಾರ್ಡೆಡ್ ಅನ್ನುವ ಧನಕರ ಸಾಹೇಬ್ರೆ.. ಈ ಅವಿಶ್ವಾಸ ನಿರ್ಣಯ ಇತಿಹಾಸದಲ್ಲಿ ದಾಖಲೆ ಆಗಲಿದೆ ಸ್ವಾಮಿ. ಅಂದ್ರೆ ‘ಸಂಥಿಂಗ್ ಇಸ್ ಗೋಯಿಂಗ್ ಆನ್ ರೆಕಾರ್ಡ ವಿಚ್ ಇಸ್ ಅನ್ ಪ್ಲೀಸಂಟ್ ಟು ಯು’ ಸರ್….

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ