Thursday, November 19, 2026

ಪ್ರಾಯೋಗಿಕ ಆವೃತ್ತಿ

ಕೆ.ಆರ್.ಪೇಟೆ| ಹೈಟೆಕ್ ಒಳಾಂಗಣ ಕ್ರೀಡಾಂಗಣದ ನ್ಯೂನತೆ ಸರಿಪಡಿಸಲು ಶಾಸಕರ ಸೂಚನೆ

ಕೆ.ಆರ್.ಪೇಟೆ ಪಟ್ಟಣದ ಹೈಟೆಕ್ ಒಳಾಂಗಣ ಕ್ರೀಡಾಂಗಣದಲ್ಲಿನ ನ್ಯೂನ್ಯತೆಗಳನ್ನು ಸರಿಪಡಿಸಿ ಕ್ರೀಡಾಪಟುಗಳಿಗೆ ಅನುಕೂಲ ಕಲ್ಪಿಸಿ ಕೊಡುವಂತೆ ಮಂಡ್ಯ ಜಿಲ್ಲಾ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಉಪ ನಿರ್ದೇಶಕ ಓಂ ಪ್ರಕಾಶ್ ಅವರಿಗೆ ಶಾಸಕ ಎಚ್.ಟಿ ಮಂಜು ನಿರ್ದೇಶನ ನೀಡಿದರು.

ಕೆ.ಆರ್.ಪೇಟೆ ಪಟ್ಟಣದ ಜಯನಗರ ಬಡಾವಣೆ ಯಲ್ಲಿರುವ ಡಾ.ಬಾಲ ಗಂಗಾಧರನಾಥ ಮಹಾ ಸ್ವಾಮೀಜಿ ಒಳಾಂಗಣ ಕ್ರೀಡಾಂಗಣಕ್ಕೆ ಶಾಸಕ ಮಂಜು ದಿಢೀರ್ ಭೇಟಿ ನೀಡಿ ಕ್ರೀಡಾಂಗಣದಲ್ಲಿ ಸಂಚರಿಸಿ ಕ್ರೀಡಾ ಪ್ರೇಮಿಗಳಿಂದ ದೂರು ಆಲಿಸಿದ ಶಾಸಕರು ಕ್ರೀಡಾಂಗಣದ ಅವ್ಯವಸ್ಥೆಗಳನ್ನು ಅವಲೋಕನ ನಡೆಸಿದರು.

ಒಳಾಂಗಣ ಕ್ರೀಡಾಂಗಣವನ್ನು ವೀಕ್ಷಿಸಲು ಆಗಮಿಸಿದ ಶಾಸಕ ಎಚ್ ಟಿ ಮಂಜು ಅವರನ್ನು ಮಂಡ್ಯ ಜಿಲ್ಲೆಯ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಉಪ ನಿರ್ದೇಶಕ ಡಾ. ಓಂ ಪ್ರಕಾಶ್ ಸ್ವಾಗತಿಸಿ ಕ್ರೀಡಾಂಗಣದಲ್ಲಿ ಯುವಜನರು ಹಾಗೂ ಸಾರ್ವಜನಿಕರಿಗೆ ದೊರೆಯುತ್ತಿರುವ ಕ್ರೀಡಾ ಸೌಲಭ್ಯಗಳನ್ನು ಕುರಿತು ಅಗತ್ಯ ಮಾಹಿತಿಯನ್ನು ನೀಡಿದರು.

ಅಂತರಾಷ್ಟ್ರೀಯ ಗುಣಮಟ್ಟದಲ್ಲಿ ನಿರ್ಮಿಸಿರುವ ಈಜುಕೊಳವು ಯುವಜನರು ಹಾಗೂ ಮಕ್ಕಳು ಈಜು ಸ್ಪರ್ಧೆಯಲ್ಲಿ ತರಬೇತಿ ಪಡೆಯಲು ಅನುಕೂಲ ವಾಗುವಂತೆ ಪ್ರತ್ಯೇಕವಾಗಿ ನಿರ್ಮಾಣ ಮಾಡಲಾಗಿದೆ. ಬಾಲ್ ಬ್ಯಾಡ್ಮಿಂಟನ್ ಕೋರ್ಟುಗಳನ್ನು ಪ್ರತ್ಯೇಕವಾಗಿ ನಿರ್ಮಿಸಲಾಗಿದೆ. ಬಿಲಿಯಡ್ಸ್, ಟೇಬಲ್ ಟೆನಿಸ್, ಕೇರಂ ಬೋರ್ಡ್, ಸುಸಜ್ಜಿತವಾದ ಜಿಮ್, ಯೋಗ ತರಬೇತಿ ಹಾಲ್, ವಾಲಿಬಾಲ್ ಕೋರ್ಟ್ ಹಾಗೂ ಬೆಳಿಗ್ಗೆ ಮತ್ತು ಸಂಜೆ ವಾಯು ವಿಹಾರ ನಡೆಸಲು ಅನುಕೂಲ ವಾಗುವಂತೆ ನಿರ್ಮಿಸಿರುವ ಜಾಗಿಂಗ್ ಟ್ರ‍್ಯಾಕ್ ಅನ್ನು ವೀಕ್ಷಿಸಿದ ಶಾಸಕ ಮಂಜು ಸಾರ್ವಜನಿಕರಿಂದ ಬಂದ ದೂರುಗಳನ್ನು ಆಲಿಸಿ, ಕೂಡಲೇ ಅಗತ್ಯ ಕ್ರಮ ಕೈಗೊಂಡು ಯುವಜನರು ಹಾಗೂ ಕ್ರೀಡಾಪಟುಗಳ ಕ್ರೀಡಾ ಸೌಕರ್ಯಕ್ಕೆ ಬೇಕಾದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಂತೆ ನಿರ್ದೇಶನ ನೀಡಿದರು.

ಪುರಸಭಾ ಸದಸ್ಯರಾದ ಗಿರೀಶ್, ಇಂದ್ರಾಣಿ ವಿಶ್ವನಾಥ್, ಶಾಮಿಯಾನ ತಿಮ್ಮೇಗೌಡ, ಜೆಡಿಎಸ್ ಮುಖಂಡ ಕೆ. ಆರ್.ಹೇಮಂತ್ ಕುಮಾರ್, ಹೊಸಹೊಳಲು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕಾಂತರಾಜು ಸೇರಿದಂತೆ ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದು, ಒಳಾಂಗಣ ಕ್ರೀಡಾಂಗಣದಲ್ಲಿ ಹಾಗೂ ಕ್ರೀಡಾ ಮೈದಾನದಲ್ಲಿ ಸಾರ್ವಜನಿಕರು ಹಾಗೂ ಕ್ರೀಡಾಪಟುಗಳಿಗೆ ಆಗುತ್ತಿರುವ ಅನಾನುಕೂಲಗಳ ಬಗ್ಗೆ ಶಾಸಕರ ಗಮನ ಸೆಳೆದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ