Sunday, November 22, 2026

ಪ್ರಾಯೋಗಿಕ ಆವೃತ್ತಿ

“ಓ ನಲ್ಲ, ನೀನಲ್ಲ, ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ನೀ ಲಾಯಕ್ಕಿಲ್ಲ“: ಬಿಜೆಪಿ ಕಾರ್ಯಕರ್ತರ ಅಣಕಕ್ಕೆ ಗುರಿಯಾದ ಡಾ.ಸುಧಾಕರ್ !

“ಓ ನಲ್ಲ, ನೀನಲ್ಲ, ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ನೀ ಲಾಯಕ್ಕಿಲ್ಲ“ ಎಂದು ಸ್ವತಃ ಬಿಜೆಪಿ ಕಾರ್ಯಕರ್ತರೇ ಹಾಡು ಹೇಳುವ ಮೂಲಕ ಸ್ವಪಕ್ಷದ ನಾಯಕ, ಮಾಜಿ ಸಚಿವ ಡಾ.ಸುಧಾಕರ್ ವಿರುದ್ದ ತಿರುಗಿ ಬಿದ್ದರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದರಿಂದಾಗಿ ಡಾ.ಸುಧಾಕರ್ ತೀವ್ರ ಮುಖಭಂಗವಾಗಿದ್ದು, ಮುಜುಗರ ಅನುಭವಿಸುವಂತಾಗಿದೆ.
ಬಿಜೆಪಿ ಅಭ್ಯರ್ಥಿಗಳು ಲಾಯಕ್ಕಿಲ್ಲದವರು ಎಂದು ಬಿಜೆಪಿ ಕಾರ್ಯಕರ್ತರೇ ಸರ್ಟಿಫಿಕೇಟ್ ನೀಡಿದ್ದಾರೆ! ಮುಂದೆ ಮತದಾರರು ಸರ್ಟಿಫಿಕೇಟ್ ಕೊಡಲಿದ್ದಾರೆ. “ಓ ನಲ್ಲ, ನೀನಲ್ಲ, ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ನೀ ಲಾಯಕ್ಕಿಲ್ಲ“ ಎಂದು ಬಿಜೆಪಿ ಕಾರ್ಯಕರ್ತರು ಬಿಜೆಪಿ ಅಭ್ಯರ್ಥಿ ವಿರುದ್ಧವೇ ಬೀದಿಗೆ ಇಳಿದಿದ್ದಾರೆ ಎಂದು ಕಾಂಗ್ರೆಸ್ ಪಕ್ಷವು ವ್ಯಂಗ್ಯವಾಡಿದೆ. 

“>

ಬಿಜೆಪಿ ಅಭ್ಯರ್ಥಿಗಳು ಲಾಯಕ್ಕಿಲ್ಲದವರು, ಬಿಜೆಪಿ ಆಡಳಿತಕ್ಕೆ ಲಾಯಕ್ಕಿಲ್ಲದ ಪಕ್ಷ, ಬಿಜೆಪಿಯ ಪ್ರಧಾನಿ ಅಭ್ಯರ್ಥಿಯೂ ಲಾಯಕ್ಕಿಲ್ಲದ ಮನುಷ್ಯ. ಇದು ನಾಡಿನ ಜನತೆಗೆ ಅರ್ಥವಾಗಿರುವ ಸತ್ಯ! ಎಂದು ‘ಎಕ್ಸ್’ ಕಾಂಗ್ರೆಸ್ ಬಿಜೆಪಿ ನಾಯಕರ ಕುರಿತು ಅಣಕವಾಡಿದೆ.

“>

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ