Sunday, November 22, 2026

ಪ್ರಾಯೋಗಿಕ ಆವೃತ್ತಿ

ಒಡಲು ಉರಿಯುವ ಕೆಂಡ….

ದೇವರಾಜ್ ಹುಣಸಿಕಟ್ಟಿ

ನೀವು ಅವಳನ್ನ
ಜಾರಿಣಿ ನಡತೆಗೆಟ್ಟವಳೂ ಎನ್ನಬಹುದು…
ಮತ್ತೆ ಏನೂ ಆಗೇ ಇಲ್ಲವೆಂಬoತೆ
ಎದೆಯುಬ್ಬಿಸಿ ಮೈಕೊಬ್ಬ ಮೆದುಳಿಗೆ ಇಳಿಸಿ ಮಾತನಾಡಲೂ ಬಹುದು…
ಏಕೆಂದರೆ..

ತುಂಬಿದ ಸಭೆಯಲ್ಲಿ ಸೀರೆ ಸೆಳೆದವನ..
ಬೆವರಿದ ಉರಗಕ್ಕೆ ಹೋಲಿಸಿ
ಮೈ ಮೆರೆಸಿದವರು ನಾವು…

ನೀವು ಅವಳನ್ನ
ನಡೆತೆ ಬಿಟ್ಟವಳು
ವ್ಯಭಿಚಾರಿಣಿ ಎಂದೆಲ್ಲ
ಮೂದಲಿಸಿ..
ಮುಖಕ್ಕೆ ಮುಖ ರಾಚುವಂತೆ
ಹಲ್ಲುಕಿರಿದು ನಿಲ್ಲಬಹುದು…
ಅವಳು ಕ್ಯಾಕರಿಸಿ ಉಗುಳಿದರೆ ಅಪರಾಧವಂತೆ
ಏಕೆಂದರೆ….

ಋಷಿಮುನಿಯ ಮಡದಿಯ
ಸೇರಿದ ಇಂದ್ರನಿಗೆ ಶಿಕ್ಷೆ ಕೊಡಲೊಲ್ಲದವರು..
ಅಹಲ್ಯೆ ಕಲ್ಲಾಗುವುದ..
ಕಂಡು ಪುಣ್ಯ ಪುರುಷನ
ಪಾದ ಸ್ಪರ್ಶಕ್ಕೆ ಕಾಯುವವರು…ನಾವು

ನೀವು ಅವಳನ್ನ
ಮಾತೇ ಅಬ್ಬೆ ಎಂದೆಲ್ಲ ಕರೆದಾಗಲೆಲ್ಲ
ಮರು ಮಾತಿಲ್ಲದೆ..
ಮಾತೃ ಭಕ್ತಿಯ ಅಡವಿಟ್ಟವರು ನಾವು..

ಅವಳ
ನಡು ರಸ್ತೆಯಲ್ಲಿ ಬೊಬ್ಬೆ ಹೊಡೆದು
ಕೊಬ್ಬಿದ ಗೂಳಿಯಂತೆ
ಬೆತ್ತಲು ಮಾಡಿ ಮೆರವಣಿಗೆ ಹೊರಡಿಸಿದ..ಮೇಲೂ

ಮೌನದ ಆಭರಣವನ್ನೇ ಹೊದ್ದು..
ಮೆದ್ದು ಸದ್ದಿಲ್ಲದಂತೆ…
ಒಳಗೊಳಗೇ ಕುದ್ದು ಹೋದವರು ನಾವು..

ಈಗ ಒಡಲ ಉರಿಯೊಂದನ್ನ
ನಿಮ್ಮ ಉಡಿಗೆ ಇಟ್ಟಿದ್ದೇನೆ
ಎಂದಾದರೆ ಬೂದಿಯಾಗಿಸಿ ಬಿಡುವವರು ನೀವು..

ಇದ್ದಿಲಾಗಿಸಿ ಕೆಂಡವಾಗಿಸಿ ಉರಿಸುವ ಹುಕಿ ಕಳೆದು ಕೊಂಡಿರುವವರು ನಾವು….

ಶರಣರೀ ಯಪ್ಪಾ…!

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ