Monday, November 23, 2026

ಪ್ರಾಯೋಗಿಕ ಆವೃತ್ತಿ

ರಾಜ್ಯೋತ್ಸವದಂದು ಕನ್ನಡ ಧ್ವಜಾರೋಹಣಕ್ಕೆ ಮನವಿ

ಎಲ್ಲಾ ಕನ್ನಡಿಗರು ನವೆಂಬರ್ 1ರ ಕನ್ನಡ ರಾಜ್ಯೋತ್ಸವ ದಿನದಂದು ತಮ್ಮ ಮನೆಗಳ ಮೇಲೆ ಕನ್ನಡ ಧ್ವಜಾರೋಹಣ ಮಾಡಬೇಕು ಎಂದು ಕದಂಬ ಸೈನ್ಯದ ಅಧ್ಯಕ್ಷ  ಬೇಕ್ರಿ ರಮೇಶ್ ಮನವಿ ಮಾಡಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1965 ರಲ್ಲಿ ಕನ್ನಡ ಹೋರಾಟಗಾರರಾದ ಎಂ.ರಾಮಮೂರ್ತಿ ರವರು ಕನ್ನಡ ಧ್ವಜಕ್ಕೆ ನಾಂದಿ ಹಾಡಿದರು. ಕನ್ನಡ ಧ್ವಜವನ್ನು ಕರ್ನಾಟಕದ ಎಲ್ಲಾ ಸರ್ಕಾರಿ ಕಟ್ಟಡಗಳ ಮೇಲೆ ಕಡ್ಡಾಯವಾಗಿ ಹಾರಿಸಬೇಕು, ವ್ಯಾಪಾರಸ್ಥರು ವಾಣಿಜ್ಯೋದ್ಯಮಿಗಳು ತಮ್ಮ ಮಳಿಗೆಗಳ ಮೇಲೆ ಧ್ವಜಾರೋಹಣ ಮಾಡಬೇಕೆಂದು ಕೋರಿದರು. ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು ತನ್ನ ಕಾರ್ಯಕರ್ತರಿಗೆ ಕನ್ನಡ ಧ್ವಜಾರೋಹಣ ಮಾಡುವಂತೆ ಕರೆ ನೀಡಬೇಕೆಂದು ಅವರು ಒತ್ತಾಯಿಸಿದರು.

ಎಂಇಎಸ್ ನಡೆಗೆ ಖಂಡನೆ 

ಬೆಳಗಾವಿಯಲ್ಲಿ ಎಂ.ಇ.ಎಸ್‌. ಮರಾಠಿ ಸಂಘಟನೆಯ ಕನ್ನಡ ವಿರೋಧಿ ವರ್ತನೆ ತೋರುತ್ತಿದೆ ಇದು ಖಂಡನೀಯ, ಎಂಇಎಸ್ ಸಂಘಟನೆ ಕಾರ್ಯಾಧ್ಯಕ್ಷ ಮನೋಹರ ಕಿಣೇಕರ, ಬೆಳಗಾವಿಯ ಚಳಿಗಾಲದ ವಿಧಾನಸಭೆ ಅಧಿವೇಶನದ ದಿನವೇ ಮರಾಠಿ ಮಹಾಮೇಳ ಮಾಡುತ್ತೇವೆಂದು ರಾಜ್ಯ ಸರ್ಕಾರಕ್ಕೆ, ವಿರೋಧ ಪಕ್ಷಗಳಿಗೆ ಸವಾಲ್‌ ಹಾಕಿದ್ದರೂ ಬಿ.ಜೆ.ಪಿ, ಕಾಂಗ್ರೆಸ್, ಜೆಡಿಎಸ್ ಮತ್ತು ಇತರ ಪಕ್ಷಗಳ ನಾಯಕರು ಏಕೆ ಪ್ರತಿಭಟಿಸುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ಎಂಇಎಸ್ ಪುಂಡರ ವಿರುದ್ಧ ರಾಜ್ಯ ಸರ್ಕಾರ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ಮುಖಂಡರಾದ ಎಸ್‌.ಶಿವಕುಮಾರ್,  ಉಮ್ಮಡಹಳ್ಳಿ ನಾಗೇಶ್, ಬೆಂಜಮಿನ್ ಥಾಮಸ್ ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ