Saturday, November 21, 2026

ಪ್ರಾಯೋಗಿಕ ಆವೃತ್ತಿ

ಶಿಕ್ಷಣದಿಂದ ಮಾತ್ರ ಮುಖ್ಯವಾಹಿನಿಗೆ ಬರಲು ಸಾಧ್ಯ : ಡಾ. ಕುಮಾರ

ಸಾಮಾಜಿಕ ವಾಗಿ ಆರ್ಥಿಕವಾಗಿ ಶೈಕ್ಷಣಿಕವಾಗಿ ಸಮಾಜದ ಮುಖ್ಯ ವಾಹಿನಿಗೆ ಬರಬೇಕು. ಸಮುದಾಯಗಳು ಮುಖ್ಯ ವಾಹಿನಿಗೆ ಬರಲು ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಮಂಡ್ಯ ಜಿಲ್ಲಾಧಿಕಾರಿ ಡಾ ಕುಮಾರ ಹೇಳಿದರು.

ಮಂಡ್ಯ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಡ್ಯ ಇವರ ಸಹಯೋಗದಲ್ಲಿ ಸವಿತಾ ಮಹರ್ಷಿ ಜಯಂತಿಯ ಆಚರಣೆಯನ್ನು ಮಂಡ್ಯ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ದೀಪ ಬೆಳಗಿಸಿ ಸವಿತಾ ಮಹರ್ಷಿ ಭಾವಚಿತ್ರಕ್ಕೆ ಪುಷ್ಪರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಸಮಾಜದ ಉದ್ದಾರಕ್ಕಾಗಿ ಅಪಾರ ಜ್ಞಾನವನ್ನು ರೂಡಿಸಿಕೊಂಡು ಜ್ಞಾನವನ್ನು ಪಸರಿಸುವ ಮೂಲಕ ಸಮಾಜಕ್ಕೆ ಬೆಳಕದವರು. ಸವಿತಾ ಮಹರ್ಷಿ ರವರು ಅವರ ಆದರ್ಶಗಳನ್ನು ಮೌಲ್ಯ ಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

ಸವಿತಾ ಸಮಾಜದ ಪ್ರತಿಯೊಬ್ಬರೂ ಕೂಡ ಕೌಶಲ್ಯ ಮತ್ತು ಕಾಯಕವನ್ನು ಬಹಳ ನಿಷ್ಠೆ ಮತ್ತು ಪ್ರಾಮಾಣಿಕತೆ, ಸಮಾನತೆಯಿಂದ ಕಾರ್ಯವನ್ನು ನಿರ್ವಹಿಸುತ್ತಾರೆ. ಯಾವುದೇ ತಾರತಮ್ಯ ವಿಲ್ಲದೆ ಸೇವಾ ಮನೋಭಾವದಿಂದ, ತಾರತಮ್ಯ ರಹಿತವಾಗಿ ನಿಸ್ಕಲ್ಮಷ ಹೃದಯದಿಂದ ಕೆಲಸವನ್ನು ಮಾಡುತ್ತಾರೆ ಎಂದರು.

ಕಲೆ ಮತ್ತು ಕೌಶಲ್ಯ ಹೊಂದಿರುವವರಿಗೆ ಹೆಚ್ಚು ಉತ್ತೇಜನವನ್ನು ಕೊಡಬೇಕು ಹಾಗೂ ಆಯುರ್ವೇದ ಗಿಡ ಮುಲಿಕೆಗನಿಂದ ಔಷಧಿಯನ್ನು ನೀಡಿ ರೋಗಗನ್ನು ಗುಣಪಡಿಸಿದ್ದಾರೆ. ಆದ್ದರಿಂದ ಹಿಂದಿನ ಪರಂಪರೆಯನ್ನು ಮತ್ತು ಸಂಪ್ರದಾಯವನ್ನು ಮರಿಯಬಾರದು,ಮೌಢ್ಯ ಮತ್ತು ಮೂಢನಂಬಿಕೆಗಳನ್ನು ಹೋಗಲಾಡಿಸಿ ಅವರವರ ವೃತ್ತಿಯನ್ನು ಗೌರವಿಸಬೇಕು ಎಂದರು.

ಪಿ ಇ ಎಸ್ ಪದವಿ ಪೂರ್ವ ಕಾಲೇಜಿನ ಡಾ ಅನಿತಾ ಎಂ. ಎಸ್ ರವರು ಮಾತನಾಡಿ ಸಮಾಜದ ಬದಲಾವಣೆಯು ಸವಿತಾ ಮಹರ್ಷಿ ಜಯಂತಿಯ ಆಶಯ. ಜಾತಿ, ವರ್ಗ, ಧರ್ಮ ಲಿಂಗ ತಾರತಮ್ಯ ವನ್ನು ಸಹಿಷ್ಣುತೆಯ ಸಮಾನತೆಯ ನಿರ್ಮಾಣ ಮಾಡಲು ಸವಿತಾ ಮಹರ್ಷಿ ಆಚರಣೆ ಮೂಲಕ ಸಮಾಸಮಾಜದ ನಿರ್ಮಾಣಕ್ಕೆ ಎಲ್ಲರೂ ಕೈ ಜೋಡಿಸಬೇಕು ಪುರಾಣಪುರುಷ ನನ್ನ ಸಮುದಾಯದ ಮೂಲ ಪುರುಷ ಎಂದು ಉಪನ್ಯಾಸ ಮಾಡಿದರು.

ಕಾರ್ಯಕ್ರಮದಲ್ಲಿ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ಡಾ.ಬಿ.ವಿ.ನಂದೀಶ, ಮಳವಳ್ಳಿ ತಾಲ್ಲೂಕು ಅಧ್ಯಕ್ಷರಾದ ಕೆಂಪರಾಜು ಮತ್ತು ಸುರೇಶ,ಮಂಜುನಾಥ್, ಸಂದೇಶ್, ಜಗದೀಶ್, ರಾಮಲಿಂಗಯ್ಯ ಸಮುದಾಯದ ಮುಖಂಡರು ಇನ್ನಿತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ