ಮದ್ದೂರು ತಾಲ್ಲೂಕಿನ ಗೊರವನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಒಂದು ಎಕರೆ ಹದಿನೈದು ಗುಂಟೆ ಜಮೀನನ್ನು ಸಾರ್ವಜನಿಕ ಸ್ಮಶಾನಕ್ಕೆ ಮೀಸಲಿರಿಸಲಾಗಿದ್ದು, ಆ ಜಮೀನಲ್ಲಿ ಎಂ.ಆರ್.ಎಫ್ (Material Recovery Facility) ಜಿಲ್ಲಾ ಘಟಕವನ್ನು ಸ್ಥಾಪನೆ ಮಾಡಲು ಮುಂದಾಗಿರುವುದನ್ನು ವಿರೋಧಿಸಿ ಇಂದು ಗ್ರಾಮಸ್ಥರು ಗೊರವನಹಳ್ಳಿ ಗ್ರಾ.ಪಂ. ಎದುರು ಪ್ರತಿಭಟನೆ ನಡೆಸಿದರು.
ಗೊರವನಹಳ್ಳಿ ವ್ಯಾಪ್ತಿಯಲ್ಲಿ ಸುಮಾರು ಐದು ಸಾವಿರ ಜನಸಂಖ್ಯೆ ವಾಸವಿವಿದ್ದು, ಇರುವುದೊಂದೆ ಇದೊಂದೆ ಸ್ಮಶಾನ, ಹಾಗಾಗಿ ಯಾವುದೇ ಕಾರಣಕ್ಕೂ ಅನ್ಯ ಕಾರ್ಯಗಳಿಗೆ ಈ ಜಾಗವನ್ನು ಬಳಕೆ ಮಾಡಬಾರದು, ನಿನ್ನೆಯಷ್ಟೆ ಈ ಸ್ಮಶಾನ ಭೂಮಿಯಲ್ಲಿ ಎಂ.ಆರ್.ಎಫ್ (Material Recovery Facility) ಜಿಲ್ಲಾ ಘಟಕವನ್ನು ಸ್ಥಾಪನೆ ಮಾಡಲು ಗುದ್ದಲಿ ಪೂಜೆ ಮಾಡಿರುವುದು ಸರಿಯಲ್ಲ, ಒಂದು ವೇಳೆ ಘಟಕ ಸ್ಥಾಪನೆಗೆ ಮುಂದಾದರೆ ಉಗ್ರವಾದ ಪ್ರತಿಭಟನೆ ನಡೆಸಲಾಗುವುದು ಎಚ್ಚರಿಸಿ ಪಿಡಿಓ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಚನ್ನಪ್ಪ, ರಾಜು, ನಾಗಮಲ್ಲಯ್ಯ, ಉಮೇಶ್, ಸೋಮಶೇಖರ್, ರವಿ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.