Friday, November 20, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| ‘ನಮ್ಮ ಅಡುಗೆ ನಮ್ಮ ಜವಾಬ್ದಾರಿ’ ಅಡುಗೆ ತಯಾರಿಕೆ ಸ್ಪರ್ಧೆ

ಮಂಡ್ಯ ನಗರದ ಲಕ್ಷ್ಮಿಜನಾರ್ಧನ ವಿದ್ಯಾಸಂಸ್ಥೆಯ ಆವರಣದಲ್ಲಿ ಎಲ್‍ಪಿಜಿ ಗ್ಯಾಸ್ ವಿತರಕರ ವತಿಯಿಂದ ನಮ್ಮ ಅಡುಗೆ ನಮ್ಮ ಜವಾಬ್ದಾರಿ ಅಡಿಯಲ್ಲಿ ಅಡುಗೆ ತಯಾರಿಕೆ ಸ್ಪರ್ಧೆ ಕಾರ್ಯಕ್ರಮ ನಡೆಯಿತು.

ಸ್ಪರ್ಧೆ ಕಾರ್ಯಕ್ರಮವನ್ನು ಲಕ್ಷ್ಮಿ ಜನಾರ್ದನ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಅಂಜನಾ ಶ್ರೀಕಾಂತ್ ಉದ್ಘಾಟಿಸಿ ಮಾತನಾಡಿ, ಮಹಿಳೆಯರಿಗೆ ಎಲ್‍ಪಿಜಿ ಗ್ಯಾಸ್ ನವರು ಅಡುಗೆ ಸ್ಪರ್ಧೆ ಏರ್ಪಡಿಸುವ ಮೂಲಕ ಮಹಿಳೆಯರಿಗೆ ಒಂದು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಪ್ರತಿಯೊಬ್ಬರಿಗೂ ಧಾವಂತದ ಬದುಕಿನಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಮಹಿಳೆಯರು ಅಡುಗೆ ಸ್ಪರ್ಧೆಯಲ್ಲಿ ಭಾಗವಹಿಸುವಿಕೆ ಮುಖ್ಯ. ಮಹಿಳೆಯರು ಅಡುಗೆ ಮಾಡುವ ಸಂದರ್ಭದಲ್ಲಿ ರುಚಿ ಶುಚಿಯ ಜೊತೆಗೆ ಸುರಕ್ಷತೆ ಕಡೆ ಗಮನಹರಿಸಬೇಕು ಎಂದು ತಿಳಿಸಿದರು.

ಎಚ್ಪಿಸಿಎಲ್ ಸೇಲ್ಸ್ ಆಫೀಸರ್ ಶೇಖ್ ಮಸ್ತಾನ್ ಮಾತನಾಡಿ, 2024ರ ಮಾರ್ಚ್ ತಿಂಗಳಲ್ಲಿ ಮೂರು ತೈಲ ಕಂಪನಿಗಳು ಸೇರಿ 12 ಕೋಟಿ ಮನೆಗಳಲ್ಲಿ ಗ್ಯಾಸ್ ಗಳನ್ನು ಸುರಕ್ಷತೆಯಿಂದ ಬಳಕೆ ಮಾಡಲು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.

ಇಲ್ಲಿಯವರೆಗೆ 8 ಕೋಟಿ ಮನೆಗಳಲ್ಲಿ ಅರಿವು ಮೂಡಿಸಲಾಗಿದ್ದು,ಮೂರು ಕಾಲು ಕೋಟಿ ಮನೆಗಳಲ್ಲಿ ಸುರಕ್ಷತೆ ಪೈಪುಗಳನ್ನು ಬದಲಾಯಿಸಲಾಗಿದೆ ಎಂದು ತಿಳಿಸಿದರು.

ನಮ್ಮ ಅಡುಗೆ ನಮ್ಮ ಜವಾಬ್ದಾರಿ ಕಾರ್ಯಕ್ರಮದ ಅಡಿಯಲ್ಲಿ ಅಡುಗೆ ತಯಾರಿಕೆ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ವಿಜೇತರಾದ ಮೊದಲನೇ ಸ್ಥಾನ ಪಡೆದ ರಂಜಿತಾ, ಎರಡನೇ ಸ್ಥಾನ ಪಡೆದ ಲಕ್ಷ್ಮಿ, ಮೂರನೇ ಸ್ಥಾನ ಪಡೆದ ಶ್ವೇತಾ ಅವರಿಗೆ ಗಣ್ಯರು ಬಹುಮಾನ ವಿತರಿಸಿದರು.

ಎಚ್.ಪಿ.ಗ್ಯಾಸ್ ನ ಪ್ರಸಾದ್ ಕುಮಾರ್ ಸುರಕ್ಷತಾ ಪ್ರತಿಜ್ಞೆ ಬೋಧಿಸಿದರು. ಈ ಸಂದರ್ಭದಲ್ಲಿ ನಗರಸಭೆ ಮಾಜಿ ಅಧ್ಯಕ್ಷ,ಹೆಚ್.ಎಸ್ ಮಂಜು, ಮುಡಾ ಅಧ್ಯಕ್ಷ ನಯೀಮ್, ನಗರಸಭಾ ಸದಸ್ಯ ರವಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಹೆಚ್.ಅಶೋಕ್, ಪ್ರಕಾಶ್ ಗ್ಯಾಸ್ ಏಜೆನ್ಸಿಯ ರಾಜಶ್ರೀ, ಎಚ್‌.ಪಿ.ಗ್ಯಾಸ್ ಲಕ್ಷ್ಮಿ, ಆಹಾರ ಇಲಾಖೆ ವ್ಯವಸ್ಥಾಪಕಿ ರೇಣುಕಾ, ಬಿ.ಜೆ.ರಾಮೇಗೌಡ ಬಸರಾಳು, ಮಮತೆಯ ಮಡಿಲು ಅನ್ನದಾಸೋಹ ಕೇಂದ್ರದ ಕೆ.ಪಿ. ಅರುಣಕುಮಾರಿ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ