ಕೇಂದ್ರ ಸರ್ಕಾರದ ಒಂದು ನಿಲ್ದಾಣ, ಒಂದು ಉತ್ಪನ್ನ ಯೋಜನೆಯಡಿಯಲ್ಲಿ ಸ್ಥಳೀಯ ಉತ್ಪನ್ನಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ, ರೈತರು ಬೆಳೆಯುವ ಕಬ್ಬಿನಿಂದ ತಯಾರಾಗುವ ಕಬ್ಬಿನ ಹಾಲು, ಬೆಲ್ಲ ಹಾಗೂ ಉಪ ಉತ್ಪನ್ನಗಳ ಮಾರಾಟ ಕೇಂದ್ರವನ್ನು ಪಾಂಡವಪುರ ರೈಲು ನಿಲ್ದಾಣದಲ್ಲಿ ತೆರೆಯಲಾಗಿದೆ. ಪಾಂಡವಪುರ ತಾಲ್ಲೂಕಿನ ಕೆನ್ನಾಳು ಗ್ರಾಮದ ಯುವಕ ಮಂಜು ಎಂಬುವರು ತೆರೆದಿದ್ದಾರೆ.
ಪಾಂಡವಪುರ ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗೋಸ್ಕರ ಕಬ್ಬಿನ ಜ್ಯೂಸ್ ಹಾಗೂ ಸಾವಯವ ಬೆಲ್ಲ ಸೇರಿದಂತೆ ಇನ್ನಿತರ ಉಪ ಉತ್ಪನ್ನಗಳನ್ನು ಮಾರಾಟ ಮಾಡುವ ಕಾರ್ಯಕ್ಕೆ ರೈಲು ನಿಲ್ದಾಣದ ಸ್ಟೇಷನ್ ಮಾಸ್ಟರ್ ರವಿಕಿರಣ್, ರೈಲು ನಿಲ್ದಾಣದ ವಾಣಿಜ್ಯ ನಿರೀಕ್ಷಕ ಎಲ್.ವಿ.ರಾಜೀವ್, ಕರ್ನಾಟಕ ರಕ್ಷಣಾ ವೇದಿಕೆ ಕಾವಲು ಪಡೆಯ ಮಂಡ್ಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಣ್ಣೆಹೊಳೆಕೊಪ್ಪಲು ನಿರಂಜನ್ ಅವರು ಚಾಲನೆ ನೀಡಿದರು.
ರೈತರು ಬೆಳೆದ ಕಬ್ಬಿನಿಂದ ತಯಾರಾಗುವ ಬೆಲ್ಲ,ಕಬ್ಬಿನ ಹಾಲು ಆರೋಗ್ಯಕ್ಕೆ ಉತ್ತಮವಾಗಿದ್ದು,ಸಾರ್ವಜನಿಕರು ಈ ಉತ್ಪನ್ನಗಳನ್ನು ಖರೀದಿಸುವ ಮೂಲಕ ರೈತರ ಬೆಂಬಲಕ್ಕೆ ನಿಲ್ಲಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪಾಂಡವಪುರ ರೈಲು ನಿಲ್ದಾಣದ ಪೊಲೀಸ್ ಸಿಬ್ಬಂದಿಯಾದ ಮಂಜು, ಸೋಮಶೇಖರ್ ಇದ್ದರು.




