Tuesday, November 24, 2026

ಪ್ರಾಯೋಗಿಕ ಆವೃತ್ತಿ

ಪಾಂಡವಪುರ: ನಗದು-ಚಿನ್ನಾಭರಣ ದರೋಡೆ

ಪಾಂಡವಪುರ ಪಟ್ಟಣದ ಕೃಷ್ಣಾನಗರದ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಒಂದೂವರೆ ಲಕ್ಷ ರೂ.ಹಾಗೂ ಚಿನ್ನಾಭರಣ ದರೋಡೆ ಮಾಡಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.

ಪಟ್ಟಣದ ಕೃಷ್ಣನಗರ ನಿವಾಸಿ ಪುನೀತ್ ಅವರು ಕೆಲಸದ ನಿಮಿತ್ತ ಮನೆಯಲ್ಲಿರಲಿಲ್ಲ. ಇದನ್ನು ಗಮನಿಸಿದ ಕಳ್ಳರು ಶನಿವಾರ ತಡರಾತ್ರಿ ಮನೆಯ ಮುಂಬಾಗಿಲನ್ನು ಒಡೆದು ನುಗ್ಗಿ 1.50 ಲಕ್ಷ ನಗದು ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.

ಇಂದು ಬೆಳಿಗ್ಗೆ ಪುನೀತ್ ಅವರು ಮನೆಗೆ ಬಂದು ನೋಡಿದಾಗ ದರೋಡೆ ಆಗಿರುವ ವಿಷಯ ತಿಳಿದಿದೆ. ಕೂಡಲೇ ಪುನೀತ್ ಅವರು ಪಟ್ಟಣ ಪೋಲಿಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.

ಸ್ಥಳಕ್ಕೆ ಪಾಂಡವಪುರ ಪಟ್ಟಣ ಠಾಣೆಯ ಸಿಪಿಐ ವಿವೇಕಾನಂದ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಸ್ಥಳಕ್ಕೆ ಬಂದು ಪರೀಲನೆ ಮಾಡಿದರು.

ಈ ಸಂಬಂಧ ಪಟ್ಟಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ