60 ನಿವೇಶನದ ಖಾತೆ ಮಾಡಿಕೊಡಲು ತಲಾ ಎರಡು ಸಾವಿರ ರೂ.ಲಂಚ ಕೇಳಿದ್ದ ದೂರಿನ ಅನ್ವಯ
ಮದ್ದೂರು ತಾಲೂಕು ಹೊಸಕೆರೆ ಗ್ರಾಮ ಪಂಚಾಯಿತಿ ಪಿಡಿಒ ಮಂಜಮ್ಮ ಹಾಗೂ ಈಕೆಯ ಖಾಸಗಿ ಕಾರು ಚಾಲಕ ಅಭಿಷೇಕ್ಗೌಡ ಎಂಬಾತ ಶನಿವಾರ ಲೋಕಾಯುಕ್ತ ಪೊಲೀಸ್ ಬಲೆಗೆ ಬಿದ್ದಿದ್ದಾರೆ.
ಕೃಷ್ಣಗೌಡ ಎಂಬುವರು ಹೊಸಕೆರೆ ಗ್ರಾಪಂ ವ್ಯಾಪ್ತಿಯಲ್ಲಿ ನಿವೇಶನಗಳನ್ನು ಮಾಡಿದ್ದಾರೆ. ಇದನ್ನು ಖಾತೆ ಮಾಡಿಕೊಡುವಂತೆ ಗ್ರಾ.ಪಂ.ಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಪ್ರತಿ ನಿವೇಶನಕ್ಕೆ 2 ಸಾವಿರ ರೂನಂತೆ 1,20 ಲಕ್ಷ ರೂ ಲಂಚ ಕೊಡಬೇಕೆಂದು ಪಿಡಿಒ ಡಿಮಾಂಡ್ ಇಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಕೃಷ್ಣಗೌಡ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ದೂರಿನ ಆಧಾರದಲ್ಲಿ ಲೋಕಾಯುಕ್ತ ಎಸ್ಪಿ ಸುರೇಶ್ಕುಮಾರ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಸುನೀಲ್ಕುಮಾರ್, ಇನ್ಸ್ಪೆಕ್ಟರ್ ಪ್ರಕಾಶ್, ಸಿಬ್ಬಂದಿ ಮಹದೇವಸ್ವಾಮಿ, ಶರತ್, ಶಂಕರ್, ಮಾನಸ ದಾಳಿ ನಡೆಸಿ,ಲಂಚ ಪಡೆಯುತ್ತಿದ್ದ ಪಿಡಿಓ ಮಂಜಮ್ಮನ ಕಾರು ಚಾಲಕ ಅಭಿಷೇಕ್ ಗೌಡ ಎಂಬಾತನನ್ನು ಬಂಧಿಸಿದ್ದಾರೆ.




